Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳು ಜಾನಕಿ ಬಳಿಕ ಟಿಎನ್​​ ಸೀತಾರಾಮ್​ ಹೊಸ ಸೀರಿಯಲ್​! ಟೈಟಲ್​ ಇಡುವ ಅವಕಾಶ ಪ್ರೇಕ್ಷಕರಿಗೆ

ಮಗಳು ಜಾನಕಿ ಧಾರಾವಾಹಿಯನ್ನು ಮತ್ತೆ ಶುರು ಮಾಡಿ ಎಂಬ ಕೋರಿಕೆ ಈಗಲೂ ಬರುತ್ತಲೇ ಇದೆ. ಆದರೆ ಆ ಕೋರಿಕೆ ಈಡೇರುವುದು ಅನುಮಾನ. ಅದರ ಬದಲು ಹೊಸ ಧಾರಾವಾಹಿಯನ್ನೇ ಸೀತಾರಾಮ್​ ನಿರ್ದೇಶಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಮಗಳು ಜಾನಕಿ ಬಳಿಕ ಟಿಎನ್​​ ಸೀತಾರಾಮ್​ ಹೊಸ ಸೀರಿಯಲ್​! ಟೈಟಲ್​ ಇಡುವ ಅವಕಾಶ ಪ್ರೇಕ್ಷಕರಿಗೆ
ಟಿ.ಎನ್​. ಸೀತಾರಾಮ್​
Follow us
ಮದನ್​ ಕುಮಾರ್​
|

Updated on: Apr 03, 2021 | 9:53 AM

ಖ್ಯಾತ ನಿರ್ದೇಶಕ ಟಿಎನ್​ ಸೀತಾರಾಮ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸೀರಿಯಲ್​ಗಳನ್ನು ಜನರು ಸಖತ್​ ಇಷ್ಟಪಡುತ್ತಾರೆ. ಬೇರೆ ಧಾರಾವಾಹಿಗಳಿಗೆ ಹೋಲಿಸಿದರೆ ಸೀತಾರಾಮ್​ ನಿರ್ದೇಶನದ ಧಾರಾವಾಹಿಗಳು ಭಿನ್ನವಾಗಿರುತ್ತವೆ. ಆ ಕಾರಣಕ್ಕಾಗಿ ಅವರ ಮೇಲೆ ಪ್ರೇಕ್ಷಕರಿಗೆ ಸದಾ ಒಂದು ನಿರೀಕ್ಷೆ ಇದ್ದೇ ಇರುತ್ತದೆ. ಸದ್ಯ ಹೊಸ ಸೀರಿಯಲ್​ಗಾಗಿ ಸೀತಾರಾಮ್​ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

1990ರ ದಶಕದಿಂದಲೂ ಕಿರುತೆರೆಯಲ್ಲಿ ಸೀತಾರಾಮ್​ ಸಕ್ರಿಯರಾಗಿದ್ದಾರೆ. ಮುಕ್ತ, ಮಾಯಾಮೃಗ ಮುಂತಾದ ಸೀರಿಯಲ್​ಗಳು ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟವು. ಇತ್ತೀಚೆಗೆ ಅವರು ನಿರ್ದೇಶಿಸಿದ ಮಗಳು ಜಾನಕಿ ಸೀರಿಯಲ್​ ಕೂಡ ಜನಮನ ಗೆದ್ದಿತ್ತು. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತುಹೋಯಿತು. ಅದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈಗ ಸೀತಾರಾಮ್​ ಗುಡ್​ ನ್ಯೂಸ್​ ನೀಡಿದ್ದಾರೆ.

ಸೀತಾರಾಮ್​ ನಿರ್ದೇಶನದ ಹೊಸ ಧಾರಾವಾಹಿ ಶೀಘ್ರದಲ್ಲೇ ಶುರುವಾಗಲಿದೆ. ಹಾಗಾದರೆ ಅದರ ಶೀರ್ಷಿಕೆ ಏನಿರಬಹುದು ಎಂಬುದು ಪ್ರೇಕ್ಷಕರ ಮನದಲ್ಲಿನ ಸಹಜ ಕುತೂಹಲ. ಆ ಪ್ರಶ್ನೆಗೆ ಸೀತಾರಾಮ್​ ಇನ್ನೂ ಉತ್ತರ ನೀಡಿಲ್ಲ. ಬದಲಿಗೆ ವೀಕ್ಷಕರಿಂದಲೇ ಒಂದು ಹೆಸರು ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ! ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಹೊಸ ಧಾರಾವಾಹಿಗೆ ಹೆಸರೊಂದು ಸೂಚಿಸಬಲ್ಲಿರಾ… ಕಥೆ ಈಗಲೇ ನಾನು ಹೇಳುವಂತಿಲ್ಲ… (ಕಥೆ ಗೊತ್ತಿಲ್ಲದೆ ಹೆಸರು ಹೇಳುವುದು ಕಷ್ಟ ಎಂದು ನನಗೆ ಗೊತ್ತು. ಆದರೆ ಅನಿವಾರ್ಯ.) ಮ ಕಾರವೇ ಆಗಬೇಕಿಲ್ಲ. ಕನ್ನಡದ ಹೆಸರಾದರೆ ಚಂದ. ಸುಂದರವಾದ ಪದ ಸಮೂಹವಾದರೂ ಇಷ್ಟವಾದೀತು. ಧನ್ಯವಾದಗಳು’ ಎಂದು ಸೀತಾರಾಮ್​ ಪೋಸ್ಟ್​ ಮಾಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ. ಸಾವಿರಾರು ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ತಿಳಿಸುತ್ತಿದ್ದಾರೆ.

ಟಿ.ಎನ್​. ಸೀತಾರಾಮ್​ ಅವರ ಹೊಸ ಸೀರಿಯಲ್​ಗಾಗಿ ಜನರು ಮೂರು ಸಾವಿರಕ್ಕೂ ಅಧಿಕ ಹೆಸರನ್ನು ಸೂಚಿಸಿದ್ದಾರೆ. ಮಿಡಿವ ಮನ, ಕಾದಿರುವಳು ಶಬರಿ, ಮೌನ ಮಾರುತ, ಜೀವ ಸಿಂಚನ, ಮೂಕ ರಾಗ, ಹಸನ್ಮುಖಿ, ಆಕಸ್ಮಿಕ, ಮನಮಂದಾರ ಸೇರಿದಂತೆ ಅನೇಕ ಟೈಟಲ್​ಗಳನ್ನು ಸೂಚಿಸಲಾಗಿದೆ. ‘ಕಥೆ ಬಿಟ್ಟುಕೊಡುವುದು ಬೇಡ. ಕೊನೇ ಪಕ್ಷ ಥೀಮ್​ ಏನು ಅಂತಾದರೂ ಹೇಳಿ’ ಎಂದು ಕೆಲವರು ಮನವಿ ಮಾಡಿಕೊಂಡಿದ್ದಾರೆ. ಸಾವಿರಾರು ಹೆಸರುಗಳ ಪೈಕಿ ಸಿತಾರಾಮ್​ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸದ್ಯದ ಕೌತುಕ.

ಲಾಕ್​ಡೌನ್​ ಪರಿಣಾಮವಾಗಿ ಮಗಳು ಜಾನಕಿ ಧಾರಾವಾಹಿ ಪ್ರಸಾರ ನಿಲ್ಲಿಸಬೇಕಾಯಿತು. ಅದು ಪ್ರೇಕ್ಷಕರಿಗೆ ಸಖತ್​ ಬೇಸರ ತರಿಸಿತ್ತು. ಮತ್ತೆ ಆ ಧಾರಾವಾಹಿಯನ್ನು ಶುರು ಮಾಡಿ ಎಂಬ ಕೋರಿಕೆ ಈಗಲೂ ಬರುತ್ತಲೇ ಇದೆ. ಆದರೆ ಆ ಕೋರಿಕೆ ಈಡೇರುವುದು ಅನುಮಾನ. ಅದರ ಬದಲು ಹೊಸ ಧಾರವಾಹಿಯನ್ನೇ ಸೀತಾರಾಮ್​ ನಿರ್ದೇಶಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪಾತ್ರವರ್ಗ, ಪ್ರಸಾರ ದಿನಾಂಕದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

(TN Seetharam requests his fans to suggest title for his new serial)

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ