AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?

ರಿಷಬ್​ ಶೆಟ್ಟಿ ನಟನೆಯ ‘ಹೀರೋ’ ಸಿನಿಮಾ ಮೂಲಕ ನಟಿ ಗಾನವಿ ಲಕ್ಷ್ಮಣ್​ ಅವರು ಸಿನಿಮಾ ಹೀರೋಯಿನ್​ ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಅವರಿಗೆ ಬಂಪರ್​ ಅವಕಾಶ ಸಿಕ್ಕಿದ್ದಕ್ಕೆ ಲಾಕ್​ಡೌನ್​ ಕಾರಣ ಎಂಬುದು ವಿಶೇಷ.

Hero Kannada Movie: ಹರಿಪ್ರಿಯಾ ಮಾಡಬೇಕಿದ್ದ ಪಾತ್ರವನ್ನು ‘ಮಗಳು ಜಾನಕಿ’ ನಟಿ ಗಾನವಿ ಪಡೆದುಕೊಂಡಿದ್ದು ಹೇಗೆ?
ಹರಿಪ್ರಿಯಾ - ಗಾನವಿ ಲಕ್ಷ್ಮಣ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 04, 2021 | 4:16 PM

Share

ಕಿರುತೆರೆಯಲ್ಲಿ ಮಿಂಚಿದ ಕೆಲವು ನಟಿಯರಿಗೆ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಗುತ್ತದೆ. ಅದೇ ರೀತಿ ‘ಮಗಳು ಜಾನಕಿ’ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದ ನಟಿ ಗಾನವಿ ಲಕ್ಷ್ಮಣ್​ ಕೂಡ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ಮಾ.5ರಂದು ರಿಲೀಸ್​ ಆಗಲಿರುವ ‘ಹೀರೋ’ ಸಿನಿಮಾ ಮೂಲಕ ಗಾನವಿಗೆ ಹೀರೋಯಿನ್ ಪಟ್ಟ ಸಿಕ್ಕಿದೆ. ಅಚ್ಚರಿ ಏನೆಂದರೆ, ಈ ಪಾತ್ರವನ್ನು ಬಹುಬೇಡಿಕೆಯ ನಟಿ ಹರಿಪ್ರಿಯಾ ಮಾಡಬೇಕಿತ್ತು. ಆದರೆ ಅಂತಿಮವಾಗಿ ಅವಕಾಶ ಒದಗಿಬಂದದ್ದು ಗಾನವಿಗೆ. ಇದು ಹೇಗೆ ಸಾಧ್ಯವಾಯ್ತು ಎಂಬುದನ್ನು ಈ ಚಿತ್ರದ ಹೀರೋ ರಿಷಬ್​ ಶೆಟ್ಟಿ ವಿವರಿಸಿದ್ದಾರೆ.

ರಿಷಬ್​ ಶೆಟ್ಟಿ ಮತ್ತು ಹರಿಪ್ರಿಯಾ ನಡುವೆ ಒಳ್ಳೆಯ ಒಡನಾಟ ಇದೆ. ರಿಷಬ್ ನಿರ್ದೇಶನ ಮಾಡಿದ್ದ ‘ರಿಕ್ಕಿ’ ಸಿನಿಮಾಗೆ ಹರಿಪ್ರಿಯಾ ನಾಯಕಿ ಆಗಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಗೆಳೆತನ ಬೆಳೆಯಿತು. ಬಳಿಕ ‘ಬೆಲ್​ ಬಾಟಂ’ ಸಿನಿಮಾದಲ್ಲಿ ಹರಿಪ್ರಿಯಾ ಹಾಗೂ ರಿಷಬ್​ ಶೆಟ್ಟಿ ಜೋಡಿಯಾಗಿ ನಟಿಸಿದರು. ಈಗ ‘ಬೆಲ್​ ಬಾಟಂ 2’ ಚಿತ್ರದಲ್ಲೂ ಅವರ ಕಾಂಬಿನೇಷನ್​ ಮುಂದುವರಿದಿದೆ. ಬಿಡುಗಡೆಗೆ ಸಿದ್ಧವಾಗಿರುವ ‘ಹೀರೋ’ ಸಿನಿಮಾದಲ್ಲಿಯೂ ಹರಿಪ್ರಿಯಾ ಅವರೇ ನಾಯಕಿ ಆಗಬೇಕು ಎಂಬುದು ಚಿತ್ರತಂಡದ ಆಶಯ ಆಗಿತ್ತು. ಆದರೆ ಅವರ ಬದಲಿಗೆ ಗಾನವಿಗೆ ಚಾನ್ಸ್​ ಸಿಕ್ಕಿತು.

‘ಹರಿಪ್ರಿಯಾ ನನ್ನ ಬೆಸ್ಟ್​ ಫ್ರೆಂಡ್​. ಅವರೇ ಇದರಲ್ಲಿ ನಟಿಸಬೇಕಿತ್ತು. ಆದರೆ ಅದು ಲಾಕ್​ಡೌನ್ ಸಂದರ್ಭ ಆಗಿದ್ದರಿಂದ ಅವರು ಬರಲಿಲ್ಲ. ಯಾವ ನಟಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕಿಂತಲೂ ಹೆಚ್ಚಾಗಿ ಲಾಕ್​ಡೌನ್​ನಲ್ಲಿ ನಮಗೆ ಯಾರು ಸಿಗುತ್ತಾರೆ ಎಂಬುದು ಮುಖ್ಯವಾಗಿತ್ತು. ಕಾಸ್ಟ್ಯೂಮ್​ ಹುಡುಕುವಾಗ ಗಾನವಿ ಹೆಸರನ್ನು ನನ್ನ ಪತ್ನಿ ಪ್ರಗತಿ ಸಜೆಸ್ಟ್​ ಮಾಡಿದರು. ನಂತರ ನಿರ್ದೇಶಕರೂ ಒಪ್ಪಿಕೊಂಡರು. ಗಾನವಿ ಚಿಕ್ಕಮಗಳೂರಿನವರು. ಚೆನ್ನಾಗಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ಒಳ್ಳೆಯ ಸ್ಕೋಪ್​ ಇದೆ’ ಎಂದು ವಿವರಣೆ ನೀಡಿದ್ದಾರೆ ನಟ ರಿಷಬ್​ ಶೆಟ್ಟಿ.

‘ಹರಿಪ್ರಿಯಾ ಜೊತೆ ಕೆಲಸ ಮಾಡೋಕೆ ತುಂಬ ಮಜಾ ಇರುತ್ತದೆ. ಅವರು ನನಗೆ ಒಬ್ಬ ಹುಡುಗನ ರೀತಿ ಒಳ್ಳೆಯ ಫ್ರೆಂಡ್​. ಗುರು ಗುರು ಅಂತ ಮಾತನಾಡಿಕೊಳ್ಳುತ್ತೇವೆ. ಖಾಸಗಿ ವಿಚಾರ ಚರ್ಚೆ ಮಾಡುತ್ತೇವೆ. ಅವರು ಅದ್ಭುತ ನಟಿ. ಹಿರಿಯ ನಟಿ ಲಕ್ಷ್ಮೀ ರೀತಿ ಹರಿಪ್ರಿಯಾಗೂ ಕೂಡ ಯಾವುದೇ ಪಾತ್ರ ನೀಡಿದರೂ ಸೂಕ್ತ ಆಗುತ್ತದೆ. ಸಿನಿಮಾ ಬಗ್ಗೆ ಅವರಿಗೆ ತುಂಬ ಶ್ರದ್ಧೆ ಇದೆ. ನಮ್ಮಿಬ್ಬರ ನಡುವೆ ಒಳ್ಳೆಯ ಕಂಫರ್ಟ್ ಇದೆ. ಹಾಗಾಗಿ ಅವರ ಜೊತೆ ಮತ್ತೆ ಮತ್ತೆ ಕೆಲಸ ಮಾಡಲು ಬಯಸುತ್ತೇನೆ’ ಎಂದು ರಿಷಬ್​ ಹೇಳಿದ್ದಾರೆ.

ಇದನ್ನೂ ಓದಿ: Rishab Shetty: ಆವತ್ತು ನಾವು ಮೈಮರೆತಿದ್ದರೆ ಮಾತ್ರ.. ಅಗ್ನಿ ಅವಘಡದ ಕರಾಳ ಘಟನೆ ವಿವರಿಸಿದ ರಿಷಬ್ ಶೆಟ್ಟಿ

Rishab Shetty | ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ