ದರ್ಶನ್​ ಮತ್ತು ಸುದೀಪ್​ ಸ್ನೇಹ ಮುರಿದು ಬಿದ್ದ ಆ ಕಹಿ ಘಳಿಗೆಗೆ ಈಗ ನಾಲ್ಕು ವರ್ಷ!

ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳಿಗೆ ಮಾರ್ಚ್​ 5 ಎಂಬುದು ಒಂದು ರೀತಿಯ ಕರಾಳ ದಿನ. ನಾಲ್ಕು ವರ್ಷಗಳ ಹಿಂದೆ ಇದೇ ದಿನಾಂಕದಂದು ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಕಿಚ್ಚ-ದಚ್ಚು ಸ್ನೇಹ ಮುರಿದು ಬಿದ್ದಿತ್ತು.

ದರ್ಶನ್​ ಮತ್ತು ಸುದೀಪ್​ ಸ್ನೇಹ ಮುರಿದು ಬಿದ್ದ ಆ ಕಹಿ ಘಳಿಗೆಗೆ ಈಗ ನಾಲ್ಕು ವರ್ಷ!
ಸುದೀಪ್​ ಮತ್ತು ದರ್ಶನ್​
Follow us
ರಾಜೇಶ್ ದುಗ್ಗುಮನೆ
|

Updated on:Mar 05, 2021 | 3:32 PM

ಕನ್ನಡ ಚಿತ್ರರಂಗದ ಟಾಪ್​ ನಟರಲ್ಲಿ ಮೊದಲು ಕೇಳಿಬರುವ ಹೆಸರುಗಳೆಂದರೆ ದರ್ಶನ್​ ಮತ್ತು ಸುದೀಪ್​ ಅವರದ್ದು. ಆರಂಭದ ದಿನಗಳಿಂದಲೂ ಈ ನಟರ ನಡುವೆ ಉತ್ತಮ ಬಾಂಧವ್ಯ ಬಾಂಧವ್ಯ ಇತ್ತು. 1997ರ ಸಮಯದಲ್ಲಿ ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್​ ಮತ್ತು ದರ್ಶನ್​ ನಂತರದಲ್ಲಿ ಸ್ಟಾರ್​ ಕಲಾವಿದರಾಗಿ ಬೆಳೆದರು. ಸೋಲು-ಗೆಲುವು ಏನೇ ಇದ್ದರೂ ಇಬ್ಬರ ನಡುವಿನ ಸ್ನೇಹ ಗಟ್ಟಿ ಆಗಿತ್ತು. ಸಿನಿಮಾ ಸಮಾರಂಭಗಳ ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸುದೀಪ್​ ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ದರ್ಶನ್​ ಮನಸ್ಸು ಬದಲಾಗಿ ಬಿಟ್ಟಿತ್ತು!

ಸುದೀಪ್​ ಹೇಳಿದ್ದೇನು? ದರ್ಶನ್​ಗೆ 2002ರಲ್ಲಿ ಮೆಜೆಸ್ಟಿಕ್​ ಸಿನಿಮಾ ದೊಡ್ಡಮಟ್ಟದ ಬ್ರೇಕ್​ ನೀಡಿತು. ಅಷ್ಟರಲ್ಲಾಗಲೇ ಸುದೀಪ್​ ‘ಸ್ಪರ್ಶ’, ’ಹುಚ್ಚ’ ಸಿನಿಮಾಗಳಿಂದಾಗಿ ಕರುನಾಡಿನಲ್ಲಿ ಮನೆ ಮಾತಾಗಿದ್ದರು. ‘ಮೆಜೆಸ್ಟಿಕ್’​ ಚಿತ್ರಕ್ಕೆ ದರ್ಶನ್​ ಹೆಸರನ್ನು ತಾವೇ ಸೂಚಿಸಿದ್ದು ಎಂದು ಸುದೀಪ್​ ಅವರು 2017ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಈ ಸಂದರ್ಶನದ ತುಣುಕು ದರ್ಶನ್​ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವರಿಗೆ ಸಖತ್​ ಬೇಸರವಾಯಿತು. ಅದಕ್ಕೆ ಅವರು ನೀಡಿದ ಪ್ರತಿಕ್ರಿಯೆ ಸಿಕ್ಕಾಪಟ್ಟೆ ಖಾರವಾಗಿತ್ತು.

ಟ್ವೀಟ್​ ಮೂಲಕ ದರ್ಶನ್​ ಗುಡುಗು! ಸುದೀಪ್​ ಹೇಳಿಕೆ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದರ್ಶನ್​ ಅವರು ಟ್ವಿಟ್ಟರ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ‘ಮೆಜೆಸ್ಟಿಕ್​ ಚಿತ್ರಕ್ಕೆ ನನ್ನ ಹೆಸರನ್ನು ಸೂಚಿಸಿದ್ದು ಸುದೀಪ್​ ಅಲ್ಲ’ ಎಂಬುದನ್ನು ದರ್ಶನ್​ ಸ್ಪಷ್ಟಪಡಿಸಿದರು. ಅಲ್ಲದೇ ಒಂದು ಖಡಕ್​ ನಿರ್ಧಾರ ತೆಗೆದುಕೊಂಡರು. ಸುದೀಪ್​ ಜೊತೆಗಿನ ಸ್ನೇಹಕ್ಕೆ ಅಂತ್ಯ ಹಾಡಲು ಅವರು ಮುಂದಾದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದ ಘಟನೆ ಆಯಿತು.

2017 ಮಾ. 5ರ ಟ್ವೀಟ್​ನಲ್ಲಿ ಏನಿತ್ತು? ‘ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು’ ಎಂದು ದರ್ಶನ್​ ಟ್ವೀಟ್​ ಮಾಡಿದರು. ಈ ಬೆಳವಣಿಗೆಯನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಅಂದಿನಿಂದ ಸುದೀಪ್​ ಮತ್ತು ದರ್ಶನ್​ ಅಭಿಮಾನಿಗಳ ನಡುವೆಯೂ ಒಂದು ಗೆರೆ ಮೂಡಿತು. ಅದು ಇಂದಿಗೂ ಮುಂದುವರಿಯುತ್ತಲೇ ಇದೆ.

Darshan tweet on Sudeep

ದರ್ಶನ್​ ಟ್ವೀಟ್​

ಶಾಂತವಾಗಿ ನಡೆದುಕೊಂಡ ಕಿಚ್ಚ! ದಶಕಗಳ ಕಾಲ ತಮ್ಮ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಗೆಳೆಯ ಹೀಗೆ ಏಕಾಏಕಿ ಸ್ನೇಹ ಮುರಿದುಕೊಂಡಿದ್ದು ಸುದೀಪ್​ ಅವರಿಗೂ ಬೇಸರ ತಂದಿತ್ತು. ಆದರೆ ಅವರು ಯಾವುದೇ ರೀತಿಯಲ್ಲಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಹಲವು ಸಂದರ್ಶನಗಳಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಯಿತು. ಆಗೆಲ್ಲ ದರ್ಶನ್​ ಬಗ್ಗೆ ತಮ್ಮ ಮನದಲ್ಲಿ ಇನ್ನೂ ಸ್ನೇಹದ ಭಾವನೆ ಇದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಲೇ ಇದ್ದರು. ಆದರೆ ದರ್ಶನ್​ ಮನಸ್ಸು ಬದಲಾಗಲಿಲ್ಲ. ಕಡೆಕಡೆಗೆ ಸುದೀಪ್​ ಕೂಡ ಈ ವಿಚಾರವನ್ನು ಬಿಟ್ಟುಬಿಟ್ಟರು.

ದಚ್ಚು-ಕಿಚ್ಚ ಒಂದಾಗಲಿ ಎನ್ನುವ ಫ್ಯಾನ್ಸ್​! ಸೋಷಿಯಲ್​ ಮೀಡಿಯಾದಲ್ಲಿ ಇಂದಿಗೂ ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ಮಧ್ಯೆ ಆಗಾಗ ವಾರ್​ ನಡೆಯುತ್ತದೆ ಎಂಬುದು ನಿಜ. ಅದರ ನಡುವೆಯೂ ಈ ಸ್ಟಾರ್​ ಕಲಾವಿದರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ. ತಮ್ಮ ಬಯಕೆಯನ್ನು ಕಾಮೆಂಟ್​ಗಳ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಅವರ ಬಯಕೆ ಈಡೇರುವ ಕಾಲ ಈವರೆಗೂ ಬಂದಿಲ್ಲ.

ದರ್ಶನ್​ ನಿರ್ಧಾರ ಸರಿಯೇ? ಯಾರ ಜೊತೆ ಸ್ನೇಹ ಮಾಡಬೇಕು, ಮಾಡಬಾರದು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರ. ಆದರೂ ದರ್ಶನ್​ ಹೀಗೆ ಸ್ನೇಹ ಕಡಿದುಕೊಳ್ಳಬಾರದಿತ್ತು ಎಂದು ಅನೇಕರು ಈಗಲೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ನಡುವೆ ಜಟಾಪಟಿ ಇದೆ ಎಂಬಂತಹ ಮಾತುಗಳು ’ಗಂಧದ ಗುಡಿ’ ಕಾಲದಿಂದಲೂ ಕೇಳಿಬರುತ್ತಿತ್ತು. ಈ ಸ್ಟಾರ್​ ನಟರ ಅಭಿಮಾನಿಗಳು ಕೂಡ ಪರಸ್ಪರ ಜಗಳ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಆದರೆ ಒಮ್ಮೆಯೂ ಕೂಡ ರಾಜ್​ಕುಮಾರ್​ ಅವರಾಗಲೀ, ವಿಷ್ಣುವರ್ಧನ್​ ಅವರಾಗಲೀ ಹೀಗೆ ನೇರಾನೇರ ಸ್ನೇಹ ಕಡಿದುಕೊಳ್ಳುವ ಮಟ್ಟಕ್ಕೆ ಮುಂದುವರಿಯಲಿಲ್ಲ. ಅವರಿಬ್ಬರ ನಡುವಿನ ಸಾಮರಸ್ಯವನ್ನೇ ಇಡೀ ಕನ್ನಡ ಚಿತ್ರರಂಗ ಬಯಸಿತ್ತು. ಆದರೆ ದರ್ಶನ್​ ಮತ್ತು ಸುದೀಪ್​ ವಿಚಾರದಲ್ಲಿ ಈ ವೈಮನಸ್ಸು ಬೇರೆಯದೇ ಹಂತ ತಲುಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವಾಗ್ವಾದಗಳು ಕೂಡ ವಾತಾವರಣ ಕೆಡಿಸುತ್ತಲೇ ಇವೆ. ಮುಂದಾದರೂ ಕಿಚ್ಚ ಮತ್ತು ದಚ್ಚು ಮತ್ತೆ ಸ್ನೇಹ ಮುಂದುವರಿಸಲಿ ಎಂದು ಆಶಿಸೋಣ.

ಇದನ್ನೂ ಓದಿ: Darshan: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?

ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್

Published On - 3:15 pm, Fri, 5 March 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್