Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’

Yash: ‘ಕೆಜಿಎಫ್​​ ಚಾಪ್ಟರ್​ 1’ ಸಿನಿಮಾದ ಯಶಸ್ಸಿನ ಬಳಿಕ ಚಾಪ್ಟರ್​ 2 ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಗರಿಗೆದರಿದೆ. ಈ ಚಿತ್ರಕ್ಕೆ ಅದೆಷ್ಟು ದೊಡ್ಡ ಮಟ್ಟದ ಡಿಮ್ಯಾಂಡ್​ ಸೃಷ್ಟಿ ಆಗಿದೆ ಅಂದರೆ ದಕ್ಷಿಣ ಭಾರತದಲ್ಲಿ ರಜನಿಕಾಂತ್​ ಅವರನ್ನೇ ಮೀರಿಸಿದ್ದಾರೆ ರಾಕಿಂಗ್​ ಸ್ಟಾರ್.

Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’
ಯಶ್
Follow us
| Edited By: ಸಾಧು ಶ್ರೀನಾಥ್​

Updated on: Mar 06, 2021 | 1:29 PM

‘ಕೆಜಿಎಫ್​ 2’ ನೋಡೋದಕ್ಕೆ ಇಡೀ ದೇಶದ ಸಿನಿಪ್ರಿಯರು ಕಾಯುತ್ತಾ ಇದ್ದಾರೆ. ಡಿಜಿಟಲ್ ದುನಿಯಾದಲ್ಲಿ ಮಿಸ್ಟರ್​ ರಾಮಾಚಾರಿಯ ಹವಾ ಜೋರಾಗಿದೆ. 2.o ಚಿತ್ರಕ್ಕಿಂತಲೂ ಕೆಜಿಎಫ್‌2ಗೆ 10 ಕೋಟಿ ರೂ. ಎಕ್ಸ್‌ಟ್ರಾ ಸಿಕ್ಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ರೋಬೋ 2.0 ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ವಸೂಲಿ ಮಾಡಿದಷ್ಟು ಹಣವನ್ನು ಸೌತ್ ಭಾಷೆಯಲ್ಲಿ ಮಾಡಲಿಲ್ಲ. ಆದ್ರೂ ಈ ಸಿನಿಮಾಗಿದ್ದ ಹೈಪ್​ನಿಂದಾಗಿ ಎಲ್ಲೆಡೆ ಸಿಕ್ಕಾಪಟ್ಟೆ ಬಿಸಿನೆಸ್ ಮಾಡಿತ್ತು. ಅದ್ರಲ್ಲೂ ಡಿಜಿಟಲ್ ದುನಿಯಾದಲ್ಲಿ ಓಟಿಟಿ, ಸ್ಯಾಟ್​ಲೈಟ್, ಮ್ಯೂಸಿಕ್ ರೈಟ್ಸ್ ಹೀಗೆ ಎಲ್ಲವು ಸೇರಿ 110 ಕೋಟಿ ನಿರ್ಮಾಪಕರಿಗೆ ಸಿಕ್ಕಿತ್ತು ಅಂತ ಪ್ರಚಾರವಾಗಿತ್ತು.

ಇದೀಗ ಆಲ್ಮೋಸ್ಟ್ ಅದೇ ರೇಂಜ್​ನಲ್ಲಿ ಕೆಜಿಎಫ್ ಚಾಪ್ಟರ್ 2ಗೂ ನಾನ್ ಥಿಯೇಟ್ರಿಕಲ್ ರೈಟ್ಸ್ ಬಿಸಿನೆಸ್ ಆಗ್ತಿದೆ ಅಂತ ಮೂಲಗಳು ಹೇಳುತ್ತಿವೆ. ಮೂಲಗಳ ಪ್ರಕಾರ, ಥಿಯೇಟ್ರಿಕಲ್ ಅಲ್ಲದೇ ಇತರೆ ರೈಟ್ಸ್​ನಿಂದ 120 ಕೋಟಿ ರೂ. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಸಿಗುತ್ತಿದೆ ಎಂಬ ಮಾಹಿತಿ ಲೀಕ್ ಆಗಿದೆ.

‘ಕೆಜಿಎಫ್ ಚಾಪ್ಟರ್ 1’ಗೆ ಹೋಲಿಸಿದ್ರೆ ಚಾಪ್ಟರ್ 2 ಮತ್ತಷ್ಟು ಆ್ಯಕ್ಷನ್ ಜತೆ ಪ್ರೇಕ್ಷಕರಿಗೆ ಡಬಲ್ ಟ್ರೀಟ್ ಕೊಡಲಿದೆ ಅನ್ನೋ ನಿರೀಕ್ಷೆಗಳಿವೆ. ಅಲ್ಲದೆ ಬಾಲಿವುಡ್​ ನಟ ಸಂಜಯ್ ದತ್ ಅವರು ಸ್ಟಾರ್ ವಿಲನ್ ಪಾತ್ರ ಮಾಡಿರೋದ್ರಿಂದ ಹಿಂದಿಯಲ್ಲಿ ಸಿನಿಮಾಗೆ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಹೀಗಾಗಿ ಡಿಜಿಟಲ್ ರೈಟ್ಸ್- ಸ್ಯಾಟಲೈಟ್ ರೈಟ್ಸ್ ಸೇರಿ ಕೋಟಿ ಕೋಟಿ ಸಿಗುತ್ತಿದೆ ಎಂಬ ಸುದ್ದಿ ಇದೆ. ಹಾಗಾಗಿ, ರಜನಿಕಾಂತ್​ ಅವರ ರೋಬೋ 2.0 ರೆಕಾರ್ಡ್‌ನ ಇದೀಗ ಕನ್ನಡದ ಮೂವಿ ಬ್ರೇಕ್ ಮಾಡ್ತಿದೆ ಅನ್ನೋ ಹೆಮ್ಮೆಯ ಸಮಾಚಾರ ಬಂದಿದೆ.

ಇದನ್ನೂ ಓದಿ: Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ

ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ