ಪಾಠ ಕಲಿಸಿದ ಗುರುಗಳ ಫೋಟೋ ಹುಡುಕುತ್ತಿದೆ ಇಡೀ ಸ್ಯಾಂಡಲ್​ವುಡ್​! ಈ ಟ್ರೆಂಡ್​ಗೆ ಕಾರಣ ಏನು?

ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಒಂದಿಲ್ಲೊಂದು ಚಾಲೆಂಜ್​ ಸದ್ದು ಮಾಡುತ್ತಲೇ ಇರುತ್ತದೆ. ಈಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ವಿಶೇಷವಾದ ಒಂದು ಟ್ರೆಂಡ್​ ಪ್ರಾರಂಭಿಸಿದ್ದಾರೆ.

ಪಾಠ ಕಲಿಸಿದ ಗುರುಗಳ ಫೋಟೋ ಹುಡುಕುತ್ತಿದೆ ಇಡೀ ಸ್ಯಾಂಡಲ್​ವುಡ್​! ಈ ಟ್ರೆಂಡ್​ಗೆ ಕಾರಣ ಏನು?
ಸಂತೋಷ್​ ಆನಂದ್​ರಾಮ್​, ಪುನೀತ್​ ರಾಜ್​ಕುಮಾರ್, ಧ್ರುವ ಸರ್ಜಾ
Rajesh Duggumane

|

Mar 06, 2021 | 6:36 PM

ಸಿನಿಮಾ ಸೆಲೆಬ್ರಿಟಿಗಳು ಯಾವಾಗಲೂ ತಮ್ಮ ತಮ್ಮ ಫೋಟೋಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿಕೊಂಡು ಮಿಂಚುತ್ತಾರೆ. ಆದರೆ ಈಗ ತಮಗೆ ಪಾಠ ಕಲಿಸಿದ ಗುರುಗಳ ಫೋಟೋವನ್ನು ಹುಡುಕಿ ತೆಗೆಯುವಲ್ಲಿ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಬ್ಯುಸಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ!

ಈಗಾಗಲೇ ಸಿಕ್ಕಿರುವ ಸುಳಿವಿನ ಪ್ರಕಾರ ‘ಯುವರತ್ನ’ ಸಿನಿಮಾದಲ್ಲಿ ಗುರು-ಶಿಷ್ಯರ ನಡುವಿನ ಕಥೆ ಇದೆ. ಅದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ‘ಪಾಠಶಾಲಾ…’ ಹಾಡು ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸುತ್ತಿದೆ. ಇದರ ನಡುವೆ ಈ ಚಿತ್ರತಂಡದವರು #MyGuruChallenge ಆರಂಭಿಸಿದ್ದಾರೆ. ಬದುಕಿನಲ್ಲಿ ಪಾಠ ಕಲಿಸಿದ ಶಿಕ್ಷಕರು ಅಥವಾ ಗುರುವಿನ ಸ್ಥಾನ ತುಂಬಿದ ವ್ಯಕ್ತಿಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

‘ಅ ಆ ಇ ಈ ಅಕ್ಷರ ಕಲಿಸಿದ ಕನ್ನಡ ಟೀಚರ್ ಕಮಲ ಮಿಸ್. ನನ್ನ ಗುರು ನನ್ನ ಹೆಮ್ಮೆ. ಮೈ ಗುರು ಚಾಲೆಂಜ್​ ಆರಂಭಿಸಲು ಖುಷಿ ಆಗುತ್ತಿದೆ’ ಎಂದು ಟ್ವೀಟ್​ ಮಾಡಿರುವ ಯುವರತ್ನ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ‘ಡಾಲಿ’ ಧನಂಜಯ, ಪವನ್​ ಒಡೆಯರ್​, ಕಾರ್ತಿಕ್​ ಗೌಡ ಅವರನ್ನು ನಾಮಿನೇಟ್​ ಮಾಡಿದ್ದಾರೆ. ಸದ್ಯಕ್ಕೆ ಇದು ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ. ಪವನ್​ ಒಡೆಯರ್​ ಮತ್ತು ಕಾರ್ತಿಕ್​ ಗೌಡ ಪ್ರತಿಕ್ರಿಯಿಸಿ, ಇನ್ನಷ್ಟು ಸೆಲೆಬ್ರಿಟಿಗಳಿಗೆ ಚಾಲೆಂಜ್​​ ದಾಟಿಸಿದ್ದಾರೆ. ಇಂಥ ಒಳ್ಳೆಯ ಚಾಲೆಂಜ್​ ಆರಂಭಿಸಿರುವುದಕ್ಕೆ ನೆಟ್ಟಿಗರು ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಡಾ. ರಾಜ್​ಕುಮಾರ್​ ಅವರೇ ನಮ್ಮ ಗುರು ಎನ್ನುತ್ತಿದ್ದಾರೆ ಅಣ್ಣಾವ್ರ ಅಭಿಮಾನಿಗಳು. ಲೆಕ್ಕಶಾಸ್ತ್ರ ಕಲಿಸಿದ ಗುರುವಿನ ಫೋಟೋ ಹಾಕಿಕೊಂಡು ಪವನ್​ ಒಡೆಯರ್​ ಖುಷಿಪಟ್ಟಿದ್ದಾರೆ. ಚಿರಂಜೀವಿ ಸರ್ಜಾ ಜೊತೆಗಿನ ಫೋಟೋವನ್ನು ಶೇರ್ ​ಮಾಡಿಕೊಂಡಿರುವ ಧ್ರುವ ಸರ್ಜಾ, ಅಣ್ಣನೇ ನನ್ನ ಗುರು ಎಂದಿದ್ದಾರೆ. ‘ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ. ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ. ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’ ಎಂದು ಧ್ರುವ ಟ್ವೀಟ್​ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ಗೆ ಅವರು ಚಾಲೆಂಜ್​ ದಾಟಿಸಿದ್ದಾರೆ.

ಇದನ್ನೂ ಓದಿ: Paatashaala Song: ಪಾಠಶಾಲಾ ಹಾಡಿಗೆ ತಲೆದೂಗಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​! ನಿಮಗೂ ಇಷ್ಟವಾಯ್ತಾ ಯುವರತ್ನ ಹೊಸ ಗೀತೆ?

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada