AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Pandit Birthday : ಮನೆ ಬಳಿ ಬರಬೇಡಿ ಅಂತೀರಿ, ಹಾಗಾದ್ರೆ ಸಿನಿಮಾ ಯಾಕೆ ರಿಲೀಸ್​ ಮಾಡ್ತೀರಿ? ಫ್ಯಾನ್ಸ್​ ಖಡಕ್​ ಪ್ರಶ್ನೆ!

ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗೆ ಇಂದು (ಮಾ.7) ಜನ್ಮದಿನದ ಸಂಭ್ರಮ. ಆದರೆ ಬರ್ತ್​ಡೇ ಆಚರಿಸಲು ಮನೆ ಬಳಿ ಬರುವುದು ಬೇಡ ಎಂದು ಅಭಿಮಾನಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

Radhika Pandit Birthday : ಮನೆ ಬಳಿ ಬರಬೇಡಿ ಅಂತೀರಿ, ಹಾಗಾದ್ರೆ ಸಿನಿಮಾ ಯಾಕೆ ರಿಲೀಸ್​ ಮಾಡ್ತೀರಿ? ಫ್ಯಾನ್ಸ್​ ಖಡಕ್​ ಪ್ರಶ್ನೆ!
ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಅಭಿಮಾನಿ ಕಾಮೆಂಟ್​
Follow us
ರಾಜೇಶ್ ದುಗ್ಗುಮನೆ
| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2021 | 12:15 PM

ನಟಿ ರಾಧಿಕಾ ಪಂಡಿತ್​ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಆ ಅಭಿಮಾನಿಗಳು ಇಂದು ತಮ್ಮ ನೆಚ್ಚಿನ ನಟಿಯ ಬರ್ತ್​ಡೇ ಆಚರಿಸಲು ಮನೆ ಬಳಿ ಹೋಗೋಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ; ಕೊರೊನಾ ಭಯ. ಹಾಗಾಗಿ ಸೋಶಿಯಲ್​ ಮೀಡಿಯಾ ಮೂಲಕ ಎಲ್ಲ ಫ್ಯಾನ್ಸ್​ಗೆ ರಾಧಿಕಾ ಒಂದು ಪತ್ರ ಬರೆದಿದ್ದಾರೆ. ಅದನ್ನು ಓದಿದ ಅಭಿಮಾನಿಗಳು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟಕ್ಕೂ ರಾಧಿಕಾ ಬರೆದ ಪತ್ರದಲ್ಲಿ ಏನಿದೆ?

‘ನಮಸ್ಕಾರ ಎಲ್ಲರಿಗೂ… ಪ್ರತಿ ವರ್ಷ ಬೇರೆ ಜಾಗಗಳಿಂದ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು, ಭೇಟಿ ಮಾಡಲು ಬರುತ್ತಿದ್ದಿರಿ. ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕೊರೊನಾ ಎಲ್ಲೆಡೆ ಇರುವುದರಿಂದ ನಮ್ಮ-ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ. ದಯವಿಟ್ಟು ಯಾರೂ ಬೇಜಾರಾಗಬೇಡಿ. ಆದರೂ ನಿಮ್ಮ ಎಲ್ಲ ಸೋಶಿಯಲ್​ ಮೀಡಿಯಾ ಮೆಸೇಜ್​ ನೋಡುತ್ತಿದ್ದೇನೆ. ಸಾಧ್ಯವಾದಷ್ಟು ರಿಪ್ಲೈ ಕೊಡುತ್ತೇನೆ. ಮತ್ತು ಎಲ್ಲ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನಿಮ್ಮ ರಾಧಿಕಾ ಪಂಡಿತ್’ ಎಂದು ಅವರು ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಅಭಿಮಾನಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಧಿಕಾ ಮಾತಿಗೆ ಬೆಲೆಕೊಟ್ಟು ಎಲ್ಲರೂ ಸೋಶಿಯಲ್​ ಮೀಡಿಯಾ ಮೂಲಕವೇ ಶುಭಕೋರುತ್ತಿದ್ದಾರೆ. ಆದರೆ ಅಭಿಮಾನಿಯೊಬ್ಬರು ಒಂದು ಖಡಕ್​ ಪ್ರಶ್ನೆ ಕೇಳಿದ್ದಾರೆ. ‘ಎಲ್ಲ ಸೆಲೆಬ್ರಿಟಿಗಳು ಇದೇ ಮಾತು ಹೇಳ್ತೀರ. ಮತ್ತೆ ಸಿನಿಮಾ ಯಾಕೆ ರಿಲೀಸ್​ ಮಾಡ್ತೀರಾ? ಅದು ನಮ್ಮ ಆರೋಗ್ಯದ ದೃಷ್ಟಿಯಲ್ಲಿ ಇಲ್ವಾ? ಅಭಿಮಾನಿ ಮೇಡಂ. ಅರ್ಥ ಮಾಡಿಕೊಳ್ಳಿ’ ಎಂದು ಕಾಮೆಂಟ್​ ಮಾಡಿದ್ದಾರೆ.

Radhika Pandit

ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಮ್​ ಪೋಸ್ಟ್​

ಈ ವಿಚಾರವಾಗಿ ಅಭಿಮಾನಿಗಳ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಪರವಿರೋಧದ ಚರ್ಚೆ ನಡೆಯುತ್ತಿದೆ. ‘ಸಿನಿಮಾ ರಿಲೀಸ್​ ಮಾಡೋದು ಬಿಡೋದು ಕಲಾವಿದರ ಕೈಯಲ್ಲಿ ಇರಲ್ಲ. ಅದು ನಿರ್ಮಾಪಕರ ನಿರ್ಧಾರ’ ಎಂದು ರಾಧಿಕಾ ಪರವಾಗಿ ಕೆಲವರು ಕಾಮೆಂಟ್​ ಮಾಡಿದ್ದಾರೆ. ಅದೇನೇ ಇರಲಿ, 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಧಿಕಾ ಪಂಡಿತ್​ ಸದ್ಯಕ್ಕೆ ಸಿನಿಮಾಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ. ಮುದ್ದಿನ ಮಕ್ಕಳ ಪಾಲನೆಯಲ್ಲಿ ಅವರು ನಿರತರಾಗಿದ್ದಾರೆ. ಆದಷ್ಟು ಬೇಗ ಅವರು ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಲಿ ಎಂಬುದು ಅಭಿಮಾನಿಗಳ ಬಯಕೆ.

ಇದನ್ನೂ ಓದಿ: ಯಶ್-ರಾಧಿಕಾ ದಂಪತಿ ಮತ್ತೆ ಬೆಳ್ಳಿತೆರೆಗೆ? ನಾವು ಮತ್ತೆ ಒಟ್ಟಾಗಿದ್ದೇವೆ ಎಂದ ನಟಿ ರಾಧಿಕಾ ಪಂಡಿತ್

Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ