Paatashaala Song: ‘ಪಾಠಶಾಲಾ’ ಹಾಡಿಗೆ ತಲೆದೂಗಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​! ನಿಮಗೂ ಇಷ್ಟವಾಯ್ತಾ ‘ಯುವರತ್ನ’ ಹೊಸ ಗೀತೆ?

Yuvarathanaa : ಪುನೀತ್​ ರಾಜ್​ಕುಮಾರ್​ ನಟನೆಯ 'ಯುವರತ್ನ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ಹೈಪ್​ ಸೃಷ್ಟಿಸಲಾಗುತ್ತಿದೆ. ಚಿತ್ರದ ಮೂರನೇ ಹಾಡು 'ಪಾಠಶಾಲಾ' ಈಗ ರಿಲೀಸ್​ ಆಗಿದೆ.

Paatashaala Song: 'ಪಾಠಶಾಲಾ' ಹಾಡಿಗೆ ತಲೆದೂಗಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​! ನಿಮಗೂ ಇಷ್ಟವಾಯ್ತಾ 'ಯುವರತ್ನ' ಹೊಸ ಗೀತೆ?
ಪಾಠಶಾಲಾ ಲಿರಿಕಲ್​ ವಿಡಿಯೋ ಪೋಸ್ಟರ್​
Follow us
Digi Tech Desk
| Updated By: ರಾಜೇಶ್ ದುಗ್ಗುಮನೆ

Updated on:Mar 03, 2021 | 4:09 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಯುವರತ್ನ’ ಚಿತ್ರ ಕೂಡ ಇದೆ. ಪುನೀತ್ ರಾಜ್​ಕುಮಾರ್​ ನಟನೆಯ ಈ ಚಿತ್ರದ ಹಾಡುಗಳಿಗೆ ಥಮನ್​ ಎಸ್​. ಸಂಗೀತ ಸಂಯೋಜಿಸಿದ್ದು, ಮೂರನೇ ಹಾಡನ್ನು ಬಿಡುಗಡೆ ಮಾಡಲಾಗಿದೆ. ‘ಪಾಠಶಾಲಾ’ ಎಂಬ ಈ ಹಾಡಿನ ಮೇಲೆ ಅಭಿಮಾನಿಗಳಿಗೆ ಭಾರಿ ಕಾತರವಿತ್ತು. ಮಾ.3ರ ಮಧ್ಯಾಹ್ನ 3.30ಕ್ಕೆ ರಿಲೀಸ್​ ಆಗಿರುವ ಈ ಗೀತೆ ಕೇಳಿ ಫ್ಯಾನ್ಸ್​ ತಲೆದೂಗುತ್ತಿದ್ದಾರೆ.

ಸಂತೋಷ್​ ಆನಂದ್​ರಾಮ್​ ಬರೆದ ಹಾಡಿಗೆ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಧ್ವನಿ ನೀಡಿದ್ದಾರೆ. ‘ಪಾಠಶಾಲಾ’ ಎಂಬ ಪದವೇ ಸೂಚಿಸುತ್ತಿರುವಂತೆ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಲೆ, ಕಾಲೇಜು ಮತ್ತು ಪಾಠ ಕಲಿಸಿದ ಶಿಕ್ಷಕರ ಕುರಿತಾಗಿ ಹಾಡಿನಲ್ಲಿ ವಿವರಿಸಲಾಗಿದೆ. ಶಿಕ್ಷಣದ ಮಹತ್ವವನ್ನು ಚೆಂದದ ಸಾಹಿತ್ಯದ ಮೂಲಕ ಸಾರಿ ಹೇಳಿದ್ದಾರೆ ಸಂತೋಷ್​ ಆನಂದ್​ರಾಮ್​. ಹಾಡನ್ನು ಮೆಚ್ಚಿದ ಸಿನಿಪ್ರಿಯರಿಂದ ಪಾಸಿಟಿವ್​ ಕಾಮೆಂಟ್​ಗಳು ಬರುತ್ತಿವೆ.

ಪಾಠಶಾಲಾ ಕನ್ನಡ ಲಿರಿಕಲ್​ ವಿಡಿಯೋ

ಸಂತೋಷ್​ ಆನಂದ್​ರಾಮ್​ ನಿರ್ದೇಶನದಲ್ಲಿ ಮೂಡಿಬಂದಿರುವ ‘ಯುವರತ್ನ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಕಾಲೇಜು ವಿದ್ಯಾರ್ಥಿಯ ಪಾತ್ರ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಈ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಈಗ ‘ಪಾಠಶಾಲಾ’ ಲಿರಿಕಲ್​ ವಿಡಿಯೋ ಬಿಡುಗಡೆ ಆಗಿದೆ. ಕನ್ನಡದ ಜೊತೆಗೆ ತೆಲುಗು ವರ್ಷನ್​ ಕೂಡ ರಿಲೀಸ್​ ಆಗಿದೆ.

ಪಾಠಶಾಲಾ ತೆಲುಗು ಲಿರಿಕಲ್ ವಿಡಿಯೋ

ಎಲ್ಲವೂ ಪ್ಲ್ಯಾನ್​ ಪ್ರಕಾರವೇ ಆಗಿದ್ದರೆ 10 ದಿನಗಳ ಹಿಂದೆಯೇ ಈ ಸಾಂಗ್​ ಬಿಡುಗಡೆ ಆಗಿರಬೇಕಿತ್ತು. ಫೆ.21ರಂದು ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ಅಡಚಣೆಯಿಂದಾಗಿ ಅಂದು ರಿಲೀಸ್​ ಮಾಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪುನೀತ್​ ರಾಜ್​ಕುಮಾರ್​, ಸಂತೋಷ್​ ಆನಂದ್​ರಾಮ್​, ಥಮನ್​ ಎಸ್​. ಸೇರಿದಂತೆ ಇಡೀ ಚಿತ್ರತಂಡವು ಅಭಿಮಾನಿಗಳಲ್ಲಿ ಕ್ಷಮೆ ಕೇಳಿತ್ತು. ಈಗ ಹಾಡು ರಿಲೀಸ್​ ಆಗಿದ್ದು, ಅಪ್ಪು ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದೆ.

ಇದನ್ನೂ ಓದಿ: Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

Published On - 3:56 pm, Wed, 3 March 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್