AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

LPG supply crisis, HCLTech offers Work from Home for its employees: ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಮತ್ತು ಅನಿಲದ ಅಭಾವ ಜಾಗತಿಕವಾಗಿ ಕಾಡುತ್ತಿದೆ. ಎಲ್​ಪಿಜಿ ಸಿಗುವುದು ಬಹಳ ಕಷ್ಟವಾಗಿದೆ. ಹಲವು ಹೋಟೆಲ್, ರೆಸ್ಟೋರೆಂಟ್​ಗಳು ಗ್ಯಾಸ್ ಇಲ್ಲದ ಕಾರಣ ಬಾಗಿಲು ಮುಚ್ಚುವ ಪರಿಸ್ಥಿತಿಯಲ್ಲಿವೆ. ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೂ ಎಲ್​ಪಿಜಿ ಕೊರತೆ ಇದೆ. ಹೀಗಾಗಿ, ಎಚ್​ಸಿಎಲ್​ಟೆಕ್ ಕಂಪನಿಯು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದೆ.

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ
ಎಚ್​ಸಿಎಲ್​ಟೆಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2026 | 3:30 PM

Share

ನವದೆಹಲಿ, ಮಾರ್ಚ್ 12: ಅಡುಗೆ ಅನಿಲದ ಕೊರತೆ ಭಾರತಾದ್ಯಂತ ಕಾಡುತ್ತಿದೆ. ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು (LPG cylinder) ದುಬಾರಿಯಾಗಿರುವುದು ಮಾತ್ರವಲ್ಲ, ಅವು ಸಿಗುವುದೇ ದುಸ್ತರವಾಗಿದೆ. ಬೆಂಗಳೂರಿನ ಅನೇಕ ಹೋಟೆಲ್​ಗಳು ಈ ಬಿಕ್ಕಟ್ಟು ಬಗೆಹರಿಯುವವರೆಗೂ ಬಾಗಿಲು ಬಂದ್ ಮಾಡಲು ನಿರ್ಧರಿಸಿವೆ. ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಈ ಬಿಸಿ ತಾಕಿಸಿಕೊಂಡಿವೆ. ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುವುದು ಕಷ್ಟವಾಗಿದೆ. ಹೀಗಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಯೋಜಿಸಿವೆ. ವರದಿಗಳ ಪ್ರಕಾರ ಎಚ್​ಸಿಎಲ್​ಟೆಕ್ (HCLTech) ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿವೆ.

ಇಂದು ಮತ್ತು ನಾಳೆ, ಮಾರ್ಚ್ 12 ಮತ್ತು 13ರಂದು ಎಚ್​ಸಿಎಲ್​ಟೆಕ್​ನ ಚೆನ್ನೈ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಮಿಂಟ್ ಪತ್ರಿಕೆಯ ವರದಿ ಮಾಡಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಎಚ್​ಸಿಎಲ್​ಟೆಕ್​ನಂತಹ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟರೆ, ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೇಫ್ಟಿ ಪ್ರೋಟೋಕಾಲ್​ಗಳನ್ನು ಅಳವಡಿಸಿವೆ. ಇಂಟರ್ನಲ್ ವಾರ್ ರೂಮ್​ಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಲೈವ್ ಆಗಿ ನಿಭಾಯಿಸುವ ಪ್ರಯತ್ನ ಮಾಡುತ್ತಿವೆ.

ಇನ್​ಫೋಸಿಸ್ ಸಂಸ್ಥೆ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಲ್​ಪಿಜಿ ಕೊರತೆಯಿಂದ ಕೆಫೆಟೇರಿಯಾದಲ್ಲಿ ಆಹಾರದ ಕೊರತೆ ಇರುವ ವಿಚಾರವನ್ನು ಮನದಟ್ಟು ಮಾಡಿದೆ. ಲೈವ್ ಫೂಡ್ ಕೌಂಟರ್​ಗಳನ್ನು ನಿಲ್ಲಿಸಲಾಗಿದೆ. ಮನೆಯಿಂದಲೇ ಅಡುಗೆ ಮಾಡಿಕೊಂಡು ಪಾರ್ಸಲ್ ತರಬೇಕೆಂದು ಕಂಪನಿ ತಿಳಿಸಿದೆ. ಚೆನ್ನೈನಲ್ಲಿರುವ ಇನ್ಫೋಸಿಸ್ ಕಚೇರಿಯ ಉದ್ಯೋಗಿಗಳಿಗೂ ಇದೇ ಸಲಹೆ ನೀಡಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಅಡುಗೆ ಅನಿಲದ ಪೂರೈಕೆಯಲ್ಲಿ ಸದ್ಯ ಯಾವ ಸಮಸ್ಯೆಯೂ ಇಲ್ಲ ಎಂದು ಸರ್ಕಾರ ಹೇಳಿದರೂ ದೇಶದ ಹೆಚ್ಚಿನ ಕಡೆ ಎಲ್​ಪಿಜಿ ಸಿಲಿಂಡರ್ ಸರಬರಾಜಿಗೆ ಧಕ್ಕೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಮತ್ತು ಗೃಹಬಳಕೆ ಎಲ್​ಪಿಜಿ ಎರಡೂ ಕೂಡ ಅಡುಗೆ ಅನಿಲಗಳೇ ಆಗಿವೆ. ಗೃಹಬಳಕೆ ಗ್ಯಾಸ್ ಕೂಡ ಸಿಗುವುದು ದುಸ್ತರವೆನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು