AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ? ಇಲ್ಲಿದೆ ಕಾರಣ

ಹಣಕಾಸು ಪರಿಸ್ಥಿತಿ ಎದುರಾದಾಗ ಸಾಲದ ಮೊರೆ ಹೋಗುವುದು ಸಹಜ. ವೈಯುಕ್ತಿಕ ಸಾಲ, ಆಸ್ತಿ ಮೇಲೆ ಸಾಲ ಪಡೆಯುತ್ತಾರೆ. ಆದರೆ ಈ ಸಾಲಗಳಿಗೆ ಹೋಲಿಸಿದ್ರೆ ಚಿನ್ನದ ಸಾಲವು ಸುರಕ್ಷಿತ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ನಿಮ್ಮ ಬಳಿಯಿರುವ ಚಿನ್ನವನ್ನು ಅಡಮಾನವಿಟ್ಟು ತಕ್ಷಣವೇ ಹಣ ಪಡೆಯುವ ಸುಲಭ ಮಾರ್ಗ ಇದಾಗಿದೆ. ಈ ಸಾಲವು ಬಹುಬೇಗನೆ ಮಂಜೂರು ಆಗುತ್ತದೆ. ಇನ್ನಿತ್ತರ ಸಾಲಗಳಿಗೆ ಹೋಲಿಕೆ ಮಾಡಿದ್ರೆ ಇದರ ಮೇಲಿನ ಬಡ್ಡಿದರವು ಕಡಿಮೆಯಿರುತ್ತದೆ.

ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ? ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Oct 02, 2026 | 6:19 PM

Share

ಮುಖ್ಯಾಂಶಗಳು

  • ಕೆಲವೊಮ್ಮೆ ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್‌ ಸಾಲದ ಮೊರೆ ಹೋಗುತ್ತೇವೆ
  • ಇತರ ಸಾಲಗಳಿಗಿಂತ ನೀವು ಚಿನ್ನ ಅಡವಿಟ್ಟು ಸಾಲ ಪಡೆಯುವುದು ಉತ್ತಮ
  • ಚಿನ್ನದ ಸಾಲದ ಮೇಲಿನ ಬಡ್ಡಿ ದರವು ಕಡಿಮೆಯಾಗಿದ್ದು, ತ್ವರಿತವಾಗಿ ನಿಮ್ಮ ಕೈ ಸೇರುತ್ತದೆ

ಕೆಲವೊಮ್ಮೆ ಆರ್ಥಿಕ ಸ್ಥಿತಿ ಹದಗೆಟ್ಟಾಗ ಸಾಲದ ಮೊರೆ ಹೋಗುತ್ತೇವೆ. ಆದರೆ, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಸಾಲ ನೀಡುವಾಗ ನಿಮ್ಮ ಸ್ಯಾಲರಿ, ಸಿಬಿಲ್ ಸ್ಕೋರ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ನಿಮ್ಮ ಕಷ್ಟಕಾಲದ ಆಸ್ತಿ ಎಂದರೆ ಅದುವೇ ಚಿನ್ನ. ನೀವು ಚಿನ್ನದ ಸಾಲಕ್ಕೆ (Gold Loan) ಅಡವಿಡುವ ಚಿನ್ನದ ಜತೆಗೆ ಕನಿಷ್ಠ ದಾಖಲೆಗಳನ್ನು ನೀಡಬೇಕು. ಚಿನ್ನದ ಸಾಲದ ಮೇಲಿನ ಬಡ್ಡಿ ದರವು ಕಡಿಮೆಯಾಗಿದ್ದು, ತ್ವರಿತವಾಗಿ ಹಣವು ನಿಮ್ಮ ಕೈ ಸೇರುತ್ತದೆ.

ಚಿನ್ನದ ಸಾಲ ಉತ್ತಮ ಏಕೆ?

  •  ತ್ವರಿತ ಮಂಜೂರಾತಿ: ಇತರ ಸಾಲಗಳಿಗೆ ಹೋಲಿಸಿದ್ರೆ ನೀವು ತುರ್ತು ಹಣದ ಅವಶ್ಯಕತೆ ಇದ್ದಾಗ ಚಿನ್ನದ ಸಾಲ ಅತ್ಯುತ್ತಮ ಆಯ್ಕೆ. ನಿಮ್ಮ ಬಳಿಯಿರುವ ಚಿನ್ನವನ್ನು ಬ್ಯಾಂಕಿಗೆ ತಗೆದುಕೊಂಡು ಹೋದರೆ ಅರ್ಧ ಗಂಟೆಯಲ್ಲಿ ಸಾಲ ಮಂಜೂರಾಗಿ ಹಣ ನಿಮ್ಮ ಕೈ ಸೇರುತ್ತದೆ.
  •  ಆದಾಯದ ಪುರಾವೆ ಬೇಡ: ಇತರ ಸಾಲಗಳಿಗೆ ನಿಮ್ಮ ಉದ್ಯೋಗ ಹಾಗೂ ಆದಾಯದ ದಾಖಲೆ ತೋರಿಸಬೇಕು. ಆದರೆ ಈ ಸಾಲದಲ್ಲಿ ಚಿನ್ನದ ಮೌಲ್ಯದ ಆಧಾರದ ಮೇಲೆ ಸಾಲದ ಹಣವನ್ನು ನೀಡಲಾಗುತ್ತದೆ.
  • ಕ್ರೆಡಿಟ್ ಸ್ಕೋರ್ ಸುಧಾರಣೆಗೆ ದಾರಿ: ಕಡಿಮೆ ಸಿಬಿಲ್ ಸ್ಕೋರ್ ಇರುವವರು ಚಿನ್ನದ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬಹುದು
  •  ಕಡಿಮೆ ಪ್ರೋಸೆಸ್ಸಿಂಗ್ ಫೀಸ್ : ಇತರ ಸಾಲಗಳಿಗೆ ಹೋಲಿಸಿದರೆ ಈ ಸಾಲದ ಪ್ರೊಸೆಸಿಂಗ್ ಶುಲ್ಕ ತುಂಬಾ ಕಡಿಮೆ ಇರುತ್ತದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ದಿ, ಕೆವಿಪಿ, ಎನ್​ಎಸ್​ಸಿ, ಪಿಪಿಎಫ್, ಟೈಮ್ ಡೆಪಾಸಿಟ್ ಸ್ಕೀಮ್​ಗಳಿಂದ ಸಿಗುವ ಲಾಭವೆಷ್ಟು? ಇಲ್ಲಿದೆ ಲೆಕ್ಕಾಚಾರ

  • *ಸುರಕ್ಷಿತ ಹಾಗೂ ಬಡ್ಡಿ ಕಡಿಮೆ: ಚಿನ್ನದ ಸಾಲವು ಹೆಚ್ಚು ಸುರಕ್ಷಿತ ಹಾಗೂ ವಿಶ್ವಾಸರ್ಹವಾಗಿದೆ. ಅಡವಿಟ್ಟ ಚಿನ್ನವು ಬ್ಯಾಂಕಿನ ಲಾಕರ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಈ ಸಾಲವು ಕಡಿಮೆ ಬಡ್ಡಿದರದಲ್ಲಿ ದೊರೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More