India vs Pakistan: ಟೀಮ್ ಇಂಡಿಯಾಗೆ ಚಿನ್ನದ ಪದಕ
Asian Games 2026 IND vs PAK Final: ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಫೈನಲ್ ಪಂದ್ಯವು ಕೊನೆಗೊಂಡಿದೆ. ನಿಶ್ಶಿನ್ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸುವಲ್ಲಿ ಶ್ರೇಯಸ್ ಅಯ್ಯರ್ ಪಡೆ ಯಶಸ್ವಿಯಾಗಿದೆ.

ಜಪಾನ್ನ ನಿಶ್ಶಿನ್ನಲ್ಲಿನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನ್ ತಂಡವನ್ನು 19 ರನ್ಗಳಿಸಿ ಸೋಲಿಸಿ ಟೀಮ್ ಇಂಡಿಯಾ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 211 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 192 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 19 ರನ್ಗಳ ಗೆಲುವು ದಾಖಲಿಸಿದೆ.
ಏಷ್ಯನ್ ಗೇಮ್ಸ್ ಕ್ರಿಕೆಟ್ ಪದಕ:
- ಭಾರತ- ಚಿನ್ನದ ಪದಕ
- ಪಾಕಿಸ್ತಾನ್- ಬೆಳ್ಳಿ ಪದಕ
- ಶ್ರೀಲಂಕಾ- ಕಂಚಿನ ಪದಕ
ಭಾರತ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ್ (ಪ್ಲೇಯಿಂಗ್ XI): ಸಾಹಿಬ್ಝಾದ ಫರ್ಹಾನ್ (ನಾಯಕ), ಮಾಝ್ ಸದಾಕತ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಹಸನ್ ನವಾಝ್, ಅಬ್ದುಲ್ ಸಮದ್, ಅರಾಫತ್ ಮಿನ್ಹಾಸ್, ಅಹ್ಮದ್ ದಾನಿಯಾಲ್, ಸಾದ್ ಮಸೂದ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್.
LIVE NEWS & UPDATES
-
India vs Pakistan Live Cricket Score: ಟೀಮ್ ಇಂಡಿಯಾಗೆ ಚಿನ್ನದ ಪದಕ
ಏಷ್ಯನ್ ಗೇಮ್ಸ್ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 19 ರನ್ಗಳ ಅಂತರದಿಂದ ಮಣಿಸಿ ಟೀಮ್ ಇಂಡಿಯಾ ಚಿನ್ನದ ಪದಕ ಗೆದ್ದುಕೊಂಡಿದೆ.
-
ಭಾರತ– 211/6 (20)
-
ಪಾಕಿಸ್ತಾನ್– 192/6(20)
-
-
India vs Pakistan Live Cricket Score: 33 ರನ್ಗಳ ಅವಶ್ಯಕತೆ
- 19ನೇ ಓವರ್ನಲ್ಲಿ ಕೇವಲ 11 ರನ್ ನೀಡಿದ ಬುಮ್ರಾ
- ಪಾಕಿಸ್ತಾನ್ ತಂಡಕ್ಕೆ 6 ಎಸೆತಗಳಲ್ಲಿ 33 ರನ್ಗಳ ಅವಶ್ಯಕತೆ
- ಕ್ರೀಸ್ನಲ್ಲಿ ಹಸನ್ ನವಾಝ್, ಸಾದ್ ಮಸೂದ್ ಬ್ಯಾಟಿಂಗ್
-
-
India vs Pakistan Live Cricket Score: ಟೀಮ್ ಇಂಡಿಯಾಗೆ 5ನೇ ಯಶಸ್ಸು
- ಭಾರತ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟ ವಾಷಿಂಗ್ಟನ್ ಸುಂದರ್.
- 9 ರನ್ಗಳಿಸಿ ವಿಕೆಟ್ ಒಪ್ಪಿಸಿದ ಅಬ್ದುಲ್ ಸಮದ್
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಸಾದ್ ಮಸೂದ್ ಬ್ಯಾಟಿಂಗ್.
ಪಾಕಿಸ್ತಾನ್- 162/5 (17.3)
-
India vs Pakistan Live Cricket Score: ಕೊನೆಯ 18 ಎಸೆತಗಳು
- 17 ಓವರ್ಗಳ ಮುಕ್ತಾಯದ ವೇಳೆಗೆ ಪಾಕ್ ಸ್ಕೋರ್ 160 ರನ್ಗಳು.
- 18 ಎಸೆತಗಳಲ್ಲಿ ಪಾಕಿಸ್ತಾನಕ್ಕೆ 52 ರನ್ಗಳ ಗುರಿ
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.
ಪಾಕಿಸ್ತಾನ್- 160/4 (17)
-
India vs Pakistan Live Cricket Score: ಕೊನೆಯ 5 ಓವರ್ಗಳು ಬಾಕಿ
- 15 ಓವರ್ಗಳಲ್ಲಿ 130 ರನ್ ಕಲೆಹಾಕಿದ ಪಾಕಿಸ್ತಾನ್
- ಪಾಕ್ ತಂಡಕ್ಕೆ ಗೆಲ್ಲಲು 30 ಎಸೆತಗಳಲ್ಲಿ 82 ರನ್ಗಳ ಅವಶ್ಯಕತೆ
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.
ಪಾಕಿಸ್ತಾನ್- 130/4 (15)
-
-
India vs Pakistan Live Cricket Score: ಟೀಮ್ ಇಂಡಿಯಾಗೆ 4ನೇ ಯಶಸ್ಸು
- ಶಿವಂ ದುಬೆ ಎಸೆತದಲ್ಲಿ ಕ್ಯಾಚ್ ನೀಡಿದ ಸೈಮ್ ಅಯ್ಯೂಬ್ (29)
- 4 ವಿಕೆಟ್ ಕಳೆದುಕೊಂಡ ಪಾಕಿಸ್ತಾನ್ ತಂಡ.
- ಪಾಕ್ ತಂಡಕ್ಕೆ ಗೆಲ್ಲಲು 35 ಎಸೆತಗಳಲ್ಲಿ 86 ರನ್ಗಳ ಅವಶ್ಯಕತೆ
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್
ಪಾಕಿಸ್ತಾನ್- 126–4(14.1)
-
India vs Pakistan Live Cricket Score: ಶತಕ ಪೂರೈಸಿದ ಪಾಕ್
- ರವಿ ಬಿಷ್ಣೋಯ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹಸನ್ ನವಾಝ್
- ಈ ಸಿಕ್ಸರ್ನೊಂದಿಗೆ 12.2 ಓವರ್ಗಳಲ್ಲಿ ಶತಕ ಪೂರೈಸಿದ ಪಾಕಿಸ್ತಾನ್
- 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹಸನ್ ನವಾಝ್
- 13 ಓವರ್ಗಳಲ್ಲಿ 117 ರನ್ ಕಲೆಹಾಕಿದ ಪಾಕಿಸ್ತಾನ್
-
India vs Pakistan Live Cricket Score: 10 ಓವರ್ ಮುಕ್ತಾಯ
- 10 ಓವರ್ಗಳಲ್ಲಿ 76 ರನ್ ಕಲೆಹಾಕಿದ ಪಾಕಿಸ್ತಾನ್
- 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ
- ಪಾಕಿಸ್ತಾನ್ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 136 ರನ್ಗಳ ಗುರಿ
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಸೈಮ್ ಅಯ್ಯೂಬ್ ಬ್ಯಾಟಿಂಗ್.
-
India vs Pakistan Live Cricket Score: ಪಾಕ್ ತಂಡದ 3ನೇ ವಿಕೆಟ್ ಪತನ
- ಬೌಂಡರಿ ಲೈನ್ನಲ್ಲಿ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಕ್ಯಾಚ್
- 18 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾಝ್ ಸದಾಕತ್
- ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟ ಅಕ್ಷರ್ ಪಟೇಲ್
- ಕ್ರೀಸ್ನಲ್ಲಿ ಸೈಮ್ ಅಯ್ಯೂಬ್ ಹಾಗೂ ಹಸನ್ ನವಾಝ್ ಬ್ಯಾಟಿಂಗ್
ಪಾಕಿಸ್ತಾನ್- 39/3 (6.1)
-
India vs Pakistan Live Cricket Score: ಪವರ್ಪ್ಲೇ ಮುಕ್ತಾಯ
- ಪವರ್ಪ್ಲೇನಲ್ಲಿ ಕೇವಲ 39 ರನ್ ಕಲೆಹಾಕಿದ ಪಾಕಿಸ್ತಾನ್
- ಮೊದಲ 6 ಓವರ್ಗಳಲ್ಲಿ 2 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ
- ಕ್ರೀಸ್ನಲ್ಲಿ ಹಸನ್ ನವಾಝ್ ಹಾಗೂ ಮಾಝ್ ಸದಾಕತ್ ಬ್ಯಾಟಿಂಗ್
ಪಾಕಿಸ್ತಾನ್- 39/2 (6)
-
India vs Pakistan Live Cricket Score: ಪಾಕ್ ತಂಡದ 2ನೇ ವಿಕೆಟ್ ಪತನ
- ಉಸ್ಮಾನ್ ಖಾನ್ (3) ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್
- ಟೀಮ್ ಇಂಡಿಯಾಗೆ ಎರಡನೇ ಯಶಸ್ಸು.
- 5 ಓವರ್ಗಳ ಮುಕ್ತಾಯದ ವೇಳೆಗೆ ಪಾಕ್ ಸ್ಕೋರ್ 36 ರನ್ಗಳು.
- ಕ್ರೀಸ್ನಲ್ಲಿ ಮಾಝ್ ಸದಾಕತ್, ಹಸನ್ ನವಾಝ್ ಬ್ಯಾಟಿಂಗ್
ಪಾಕಿಸ್ತಾನ್ – 36/2 (5)
-
India vs Pakistan Live Cricket Score: ಪಾಕ್ ತಂಡದ ಮೊದಲ ವಿಕೆಟ್ ಪತನ
- ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ವಾಷಿಂಗ್ಟನ್ ಸುಂದರ್
- ಸುಂದರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಫರ್ಹಾನ್ (10)
- ಕ್ರೀಸ್ನಲ್ಲಿ ಮಾಝ್ ಸದಾಕತ್ ಹಾಗೂ ಉಸ್ಮಾನ್ ಖಾನ್ ಬ್ಯಾಟಿಂಗ್
ಪಾಕಿಸ್ತಾನ್- 33/1 (3.4)
-
India vs Pakistan Live Cricket Score: ಪಾಕಿಸ್ತಾನ್ ಉತ್ತಮ ಆರಂಭ
- 2 ಓವರ್ಗಳಲ್ಲಿ 21 ರನ್ ಕಲೆಹಾಕಿದ ಪಾಕಿಸ್ತಾನ್
- ಕ್ರೀಸ್ನಲ್ಲಿ ಮಾಝ್ ಸದಾಕತ್ ಹಾಗೂ ಫರ್ಹಾನ್ ಬ್ಯಾಟಿಂಗ್
- ಪಾಕಿಸ್ತಾನಕ್ಕೆ 212 ರನ್ಗಳ ಗುರಿ ನೀಡಿದ ಟೀಮ್ ಇಂಡಿಯಾ
ಪಾಕಿಸ್ತಾನ್- 21/0 (2)
-
India vs Pakistan Live Cricket Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ
- 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿದ ಟೀಮ್ ಇಂಡಿಯಾ
- ಪಾಕಿಸ್ತಾನ್ ತಂಡಕ್ಕೆ 20 ಓವರ್ಗಳಲ್ಲಿ 212 ರನ್ಗಳ ಗುರಿ
- ಟೀಮ್ ಇಂಡಿಯಾ ಪರ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ (61), ತಿಲಕ್ ವರ್ಮಾ (51)
- ಪಾಕಿಸ್ತಾನ್ ಪರ ತಲಾ 2 ವಿಕೆಟ್ ಪಡೆದ ಅಹ್ಮದ್ ದಾನಿಯಾಲ್ ಹಾಗೂ ಅರಾಫತ್ ಮಿನ್ಹಾಸ್.
ಭಾರತ – 211/6 (20)
-
India vs Pakistan Live Cricket Score: ಹ್ಯಾಟ್ರಿಕ್ ಬೌಂಡರಿ
- ಸೈಮ್ ಅಯ್ಯೂಬ್ ಎಸೆದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ದುಬೆ
- ಎರಡನೇ ಎಸೆತದಲ್ಲೂ ದುಬೆ ಬ್ಯಾಟ್ನಿಂದ ಭರ್ಜರಿ ಸಿಕ್ಸರ್
- ಮೂರನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್
- 19ನೇ ಓವರ್ನಲ್ಲಿ 23 ರನ್ ಕಲೆಹಾಕಿದ ಟೀಮ್ ಇಂಡಿಯಾ
- ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್
ಭಾರತ- 195/5 (19)
-
India vs Pakistan Live Cricket Score: ವೆಲ್ಕಂ ಬೌಂಡರಿ
- ಸುಫಿಯಾನ್ ಎಸೆದ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ತಿಲಕ್ ವರ್ಮಾ
- ಐದನೇ ಎಸೆತದಲ್ಲಿ ತಿಲಕ್ ವರ್ಮಾ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್
- 18 ಓವರ್ಗಳ ಮುಕ್ತಾಯದ ವೇಳೆಗೆ 172 ರನ್ಗಳು
- ಕ್ರೀಸ್ನಲ್ಲಿ ಶಿವಂ ದುಬೆ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್
-
India vs Pakistan Live Cricket Score: ಬೌಂಡರಿ ಇಲ್ಲದ 4 ಓವರ್!
- ಕಳೆದ 4 ಓವರ್ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಿದ ಟೀಮ್ ಇಂಡಿಯಾ
- ನಿಧಾನಗತಿಯ ಬ್ಯಾಟಿಂಗ್ ಮುಂದುವರೆಸಿದ ಟೀಮ್ ಇಂಡಿಯಾ
- ಕ್ರೀಸ್ನಲ್ಲಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಬ್ಯಾಟಿಂಗ್.
- 16 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 142 ರನ್ಗಳು
-
India vs Pakistan Live Cricket Score: ದಿಢೀರ್ ಕುಸಿತಕ್ಕೊಳಗಾದ ಟೀಮ್ ಇಂಡಿಯಾ
- ಟೀಮ್ ಇಂಡಿಯಾದ 5ನೇ ವಿಕೆಟ್ ಪತನ
- ಅಬ್ರಾರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಔಟಾದ ಶ್ರೇಯಸ್ ಅಯ್ಯರ್
- 24 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಟೀಮ್ ಇಂಡಿಯಾ ನಾಯಕ
- ಅಭಿಷೇಕ್ ಶರ್ಮಾ ಔಟಾದ ಬೆನ್ನಲ್ಲೇ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಔಟ್.
- ಕ್ರೀಸ್ನಲ್ಲಿ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಬ್ಯಾಟಿಂಗ್
ಭಾರತ- 133–5(14.1)
-
India vs Pakistan Live Cricket Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ
- ಅರಾಫತ್ ಎಸೆತದಲ್ಲಿ ಇಶಾನ್ ಕಿಶನ್ ಕ್ಲೀನ್ ಬೌಲ್ಡ್
- 18 ಎಸೆತಗಳಲ್ಲಿ ಕೇವಲ 20 ರನ್ಗಳಿಸಿದ ಇಶಾನ್ ಕಿಶನ್
- ಟೀಮ್ ಇಂಡಿಯಾದ 4 ವಿಕೆಟ್ಗಳು ಪತನ
- ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್
ಭಾರತ – 128-4(13.1)
-
India vs Pakistan Live Cricket Score: ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ
- 12 ಓವರ್ಗಳಲ್ಲಿ 124 ರನ್ ಕಲೆಹಾಕಿದ ಟೀಮ್ ಇಂಡಿಯಾ
- 12ನೇ ಓವರ್ನಲ್ಲಿ ಯಾವುದೇ ಬೌಂಡರಿ ಇಲ್ಲ.
- ಕೊನೆಯ 8 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿ ಭಾರತ
- ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್
-
India vs Pakistan Live Cricket Score: 10 ಓವರ್ ಮುಕ್ತಾಯ
- 10 ಓವರ್ಗಳು ಮುಕ್ತಾಯ
- ಹತ್ತು ಓವರ್ಗಳಲ್ಲಿ 114 ರನ್ ಕಲೆಹಾಕಿದ ಟೀಮ್ ಇಂಡಿಯಾ
- ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
ಭಾರತ – 114–3 (10)
-
India vs Pakistan Live Cricket Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
- 28 ಎಸೆತಗಳಲ್ಲಿ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ
- ಟೀಮ್ ಇಂಡಿಯಾದ ಮೂರನೇ ವಿಕೆಟ್ ಪತನ
- 8 ಓವರ್ಗಳಲ್ಲಿ 98 ರನ್ ಕಲೆಹಾಕಿರುವ ಟೀಮ್ ಇಂಡಿಯಾ
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
-
India vs Pakistan Live Cricket Score: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
- ಪವರ್ಪ್ಲೇನಲ್ಲಿ ಬರೋಬ್ಬರಿ 81 ರನ್ ಕಲೆಹಾಕಿದ
- ಮೊದಲ 6 ಓವರ್ಗಳಲ್ಲಿ 2 ವಿಕೆಟ್ ಕಬಳಿಸಿದ ಪಾಕಿಸ್ತಾನ್
- ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ
- ವೈಭವ್ ಸೂರ್ಯವಂಶಿ (15) ಹಾಗೂ ಸಂಜು ಸ್ಯಾಮ್ಸನ್ ಔಟ್
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಭಾರತ- 81–2(6)
Published On - Oct 03,2026 10:33 AM




