AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ ಪ್ರಿಯಾಂಕಾ ಚೋಪ್ರಾ: ಹೇಳಿದ್ದೇನು?

Priyanka Chopra: ಪ್ರಿಯಾಂಕಾ ಚೋಪ್ರಾ ಪ್ರಸ್ತುತ ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಪ್ರಿಯಾಂಕಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಅನ್ನು ಹೊಲಸಿಗೆ ಹೋಲಿಸಿದ್ದಾರೆ.

ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ ಪ್ರಿಯಾಂಕಾ ಚೋಪ್ರಾ: ಹೇಳಿದ್ದೇನು?
Priyanka Chopra
ಮಂಜುನಾಥ ಸಿ.
|

Updated on: Mar 12, 2026 | 12:22 PM

Share

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ನಟಿ. ಬಾಲಿವುಡ್​​ನಲ್ಲಿ ಹಲವು ವರ್ಷ ಸ್ಟಾರ್ ನಟಿಯಾಗಿ ಮೆರೆದ ಬಳಿಕ 2015 ರ ಸುಮಾರಿಗೆ ಅವರು ಹಾಲಿವುಡ್​​ಗೆ ಎಂಟ್ರಿ ನೀಡಿದರು. ಆಗಿನಿಂದ ಅವರು ಬಾಲಿವುಡ್ ಜೊತೆಗೆ ಸಂಪರ್ಕನ್ನೇ ಕಡಿದುಕೊಂಡರು. 2019 ರಲ್ಲಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸಿದ್ದು ಬಿಟ್ಟರೆ ಅದಾದ ಬಳಿಕ ಅವರು ಯಾವೊಂದು ಹಿಂದಿ ಸಿನಿಮಾನಲ್ಲಿಯೂ ನಟಿಸಿಲ್ಲ. ಇದೀಗ ಅವರು ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಪ್ರಿಯಾಂಕಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಅನ್ನು ಹೊಲಸಿಗೆ ಹೋಲಿಸಿದ್ದಾರೆ.

ಖ್ಯಾತ ಪಾಡ್​​ಕಾಸ್ಟರ್ ಜೋ ರೋಗನ್ ಅವರ ಪಾಡ್​​ಕಾಸ್ಟ್​​ನಲ್ಲಿ ಭಾಗಿ ಆಗಿದ್ದ ಪ್ರಿಯಾಂಕಾ ಚೋಪ್ರಾ ಪಾಡ್​​ಕಾಸ್ಟ್​​ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ, ತಮ್ಮ ಕುಟುಂಬ, ಭಾರತದ ಇತಿಹಾಸ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ಇದೇ ಸಂದರ್ಶನದಲ್ಲಿ ಅವರು ಬಾಲಿವುಡ್ ಬಗ್ಗೆಯೂ ಮಾತನಾಡಿದ್ದು, ಬಾಲಿವುಡ್​ನಿಂದ ತಾವು ಹೊರಗೆ ಬಂದಿದ್ದೇಕೆ ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ್ದಾರೆ.

ಬಾಲಿವುಡ್​​ನಲ್ಲಿ ತಮ್ಮನ್ನು ಕಾರ್ನರ್ ಮಾಡಲಾಗಿತ್ತು ಎಂದಿರುವ ಪ್ರಿಯಾಂಕಾ ಚೋಪ್ರಾ, ‘ತಾವು “ಕೆಟ್ಟ ಪರಿಸ್ಥಿತಿಯಲ್ಲಿ ಅಥವಾ ಕೊಳಕಿನಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಅಲ್ಲಿಯೇ ಉಳಿದರೆ ಆ ಕೆಟ್ಟ ವಾಸನೆ ನಿಮಗೆ ಅಭ್ಯಾಸ ಆಗಿಬಿಡುತ್ತದೆ, ಹಾಗಾಗಿ ನಾನು ಅಲ್ಲಿಂದ ಹೊರಗೆ ಬಂದೆ, ಹೊಸ ಅವಕಾಶಗಳನ್ನು ಹುಡುಕಿಕೊಂಡೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ:ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ಡ್ರಿಂಕ್ಸ್ ಮಾಡಿಕೊಟ್ಟ ನಿಕ್ ಜೋನಸ್: ವಿಡಿಯೋ

‘ಭಾರತದಲ್ಲಿ ಕೆಲಸ ಮಾಡುವಾಗ ತಮಗೆ ಮಿತಿಗಳಿರುವಂತೆ ಭಾಸವಾಯಿತು. ಮಿಂಡಿ ಕಾಲಿಂಗ್ ಮತ್ತು ಐಶ್ವರ್ಯಾ ರೈ ಅವರನ್ನು ಹೊರತುಪಡಿಸಿ ಹಾಲಿವುಡ್‌ನಲ್ಲಿ ಭಾರತೀಯ ನಟರ ಪ್ರಾತಿನಿಧ್ಯ ಕಡಿಮೆ ಇರುವುದನ್ನು ಗಮನಿಸಿ, ಅಲ್ಲಿ ಪ್ರಯತ್ನಿಸಲು ನಿರ್ಧರಿಸಿದೆ. ಬಾಲಿವುಡ್​​ನಲ್ಲಿ ಯಾವುದೂ ಸುಲಭವಲ್ಲ. ನಾವೆಲ್ಲರೂ ಎದುರಿಸಬೇಕಾದ ಹೋರಾಟಗಳಿರುತ್ತವೆ. ನಾನು ಕೆಟ್ಟ ಪರಿಸ್ಥಿತಿಯಲ್ಲೇ ಇರಲು ಬಯಸುವವಳಲ್ಲ, ಏಕೆಂದರೆ ಆಗ ನಮಗೆ ಆ ಕೆಟ್ಟ ವಾಸನೆಯೇ ಅಭ್ಯಾಸವಾಗಿಬಿಡುತ್ತದೆ. ಜೀವನ ಕಠಿಣವಾದಾಗ ನಾವು ಚೇತರಿಸಿಕೊಳ್ಳುವ ಶಕ್ತಿ ಹೊಂದಿರಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಹಾಲಿವುಡ್​ಗೆ ಬಂದಾಗ ತಮಗೆ ಯಾವುದೇ ಯೋಜನೆ ಅಥವಾ ಸ್ಪಷ್ಟ ಹಾದಿ ಇರಲಿಲ್ಲ. ಆದರೆ ತಮ್ಮ ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯ ಮೇಲೆ ತಮಗೆ ನಂಬಿಕೆ ಇತ್ತು ಎಂದು ಅವರು ಹೇಳಿದ್ದಾರೆ. 2015 ರಲ್ಲಿ ‘ಕ್ವಾಂಟಿಕೊ’ ಟಿವಿ ಸೀರೀಸ್​​ನಲ್ಲಿ ಪ್ರಿಯಾಂಕಾ ನಟಿಸಿದರು. ಆರಂಭದಲ್ಲಿ ಟಿವಿ ಸರಣಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ, ಈಗ ಹಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಬೇವಾಚ್’, ‘ಮ್ಯಾಟ್ರಿಕ್ಸ್: ರೆಸಲ್ಯೂಶನ್ಸ್’, ‘ಸಿಟಾಡೆಲ್’ ನಂತಹ ದೊಡ್ಡ ಯೋಜನೆಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅವರ ‘ದಿ ಬ್ಲಫ್’ ಆಕ್ಷನ್ ಸಿನಿಮಾ ಸಹ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us