Darshan: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?

ದರ್ಶನ್​ ಕೆಲ ವರ್ಷಗಳ ಹಿಂದೆ ಸ್ಪೋರ್ಟ್ಸ್​ ಕಾರಾದ ಲ್ಯಾಂಬೋರ್ಗಿನಿ ಖರೀದಿಸಿದ್ದರು. ಈ ಕಾರಿನಲ್ಲೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದರು.

Darshan: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?
ದರ್ಶನ್​
Follow us
ರಾಜೇಶ್ ದುಗ್ಗುಮನೆ
|

Updated on: Mar 04, 2021 | 1:47 PM

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ಜತೆಗೆ ವನ್ಯಜೀವಿಗಳನ್ನು ದತ್ತು ಪಡೆದು ಅವನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ. ದರ್ಶನ್​ ಸಿನಿಮಾ ಹಾಗೂ ವನ್ಯಜೀವಿಗಳ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೋ ಅಷ್ಟೇ ಪ್ರೀತಿಯನ್ನು ಕಾರುಗಳ ಮೇಲೂ ಹೊಂದಿದ್ದಾರೆ. ದರ್ಶನ್​ಗೆ ಕಾರೆಂದರೆ ಕ್ರೇಜ್​. ಅವರ ಗರಾಜಿನಲ್ಲಿ ನಾಲ್ಕೈದು ಕಾರುಗಳಿವೆ. ಈಗ ದರ್ಶನ್​ ಮತ್ತೊಂದು ಐಷಾರಾಮಿ ಕಾರನ್ನು ಖರೀದಿಸೋ ಆಸೆ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್​ ಈ ವಿಚಾರ ಬಿಚ್ಚಿಟ್ಟಿದ್ದಾರೆ. ನನ್ನ ಬಳಿ ನಾಲ್ಕೈದು ಕಾರುಗಳಿವೆ. ಬೆಂಟ್ಲಿ ನನ್ನ ಡ್ರೀಮ್​ ಕಾರ್​. ಅದನ್ನು ಕೊಂಡುಕೊಳ್ಳಬೇಕು ಎಂಬ ಆಸೆ ಇದೆ. ಅದನ್ನು ಖರೀದಿಸೋದು ದೊಡ್ಡ ವಿಚಾರವಲ್ಲ. ಆದರೆ, ಬೆಂಟ್ಲಿ ಶೋ ರೂಂ ಬೆಂಗಳೂರಿನಲ್ಲಿಲ್ಲ. ಅದನ್ನು ಖರೀದಿಸಬೇಕು ಎಂದರೆ ಮುಂಬೈಗೆ ಹೋಗಬೇಕು ಎಂದಿದ್ದಾರೆ ದರ್ಶನ್​.

ದರ್ಶನ್​ ಖರೀದಿಸಿದ ಹಮ್ಮರ್​ ವಾಹನಕ್ಕೆ ಬೆಂಗಳೂರಿನಲ್ಲಿ ಶೋರೂಂ ಇಲ್ಲವಂತೆ. ಹೀಗಾಗಿ, ಸರ್ವಿಸ್​ ಮಾಡಿಸಬೇಕು ಎಂದರೆ, ಮುಂಬೈನಿಂದ ಮೆಕ್ಯಾನಿಕ್​ ಕರೆಸಬೇಕು. ಐಷಾರಾಮಿ ಹೋಟೆಲ್​ನಲ್ಲಿ ಆತನಿಗೆ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಬೇಕು. ಆ ಗಾಡಿ ಪೆಟ್ರೋಲ್​ ಕುಡಿಯೋದ ನೋಡಿದ್ರೆ ನಮಗೆ ಹೊಟ್ಟೆ ಉರಿಯುತ್ತದೆ. ಹೀಗಾಗಿ, ಬೆಂಗಳೂರಿನಲ್ಲಿ ಶೋ ರೂಂ ಇರುವ ಕಾರನ್ನು ಮಾತ್ರ ಖರೀದಿಸುವ ಆಲೋಚನೆ ನನ್ನದು. ಹೀಗಾಗಿ, ಬೆಂಟ್ಲಿ ಕಾರನ್ನು ಖರೀದಿಸೋಕೆ ಹಿಂದೇಟು ಹಾಕುತ್ತಿದ್ದೇನೆ ಎಂದಿದ್ದಾರೆ.

ದರ್ಶನ್​ ಕೆಲ ವರ್ಷಗಳ ಹಿಂದೆ ಸ್ಪೋರ್ಟ್ಸ್​ ಕಾರಾದ ಲ್ಯಾಂಬೋರ್ಗಿನಿ ಖರೀದಿಸಿದ್ದರು. ಈ ಕಾರಿನಲ್ಲೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು.

ರಾಬರ್ಟ್​ ಸಿನಿಮಾ ಶಿವರಾತ್ರಿ ಪ್ರಯುಕ್ತ ಮಾರ್ಚ್​ 11ರಂದು ರಿಲೀಸ್​ ಆಗುತ್ತಿದೆ. ಟ್ರೈಲರ್​ ಹಾಗೂ ಹಾಡಿನ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ತರುಣ್​ ಸುಧೀರ್​ ನಿರ್ದೇಶನ ಇರುವ ಈ ಚಿತ್ರಕ್ಕೆ ಆಶಾ ಭಟ್​ ನಾಯಕಿ. ಟಾಲಿವುಡ್​ನ ಖಳನಟ ಜಗಪತಿ ಬಾಬು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Darshan: ‘ರಾಬರ್ಟ್​’ ಬಿಡುಗಡೆಗೂ ಮುನ್ನ ಮತ್ತೊಂದು ಮುಖ್ಯ ವಿಚಾರದ ಬಗ್ಗೆ ‘ಚಾಲೆಂಜಿಂಗ್​ ಸ್ಟಾರ್’​ ದರ್ಶನ್​ ಪ್ರಸ್ತಾಪ!