ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್​ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ

ರಮೇಶ್ ಜಾರಕಿಹೊಳಿಯವರ ವಿಡಿಯೋ ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತ ಯುವತಿ ಇದಕ್ಕೆ ಸಹಮತ ಇದೆ ಎಂದು ಹೇಳಿದ್ರೆ ನನಗೆ ಮಾಹಿತಿ ನೀಡಿದವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆಂದು ಹೇಳಿದ್ದಾರೆ.

ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್​ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ
ದಿನೇಶ್ ಕಲ್ಲಹಳ್ಳಿ
Ayesha Banu

| Edited By: sadhu srinath

Mar 04, 2021 | 2:45 PM


ಬೆಂಗಳೂರು: ರಮೇಶ್ ಜಾರಕಿಕೊಳಿ ಪಟ್ಟು ಹಿಡಿದು ಮಂತ್ರಿಗಿರಿ ಪಡೆದಿದ್ರು.. ಸರ್ಕಾರವನ್ನೇ ಕೆಡವಿ ಸ್ಥಾನಮಾನ ದಕ್ಕಿಸಿಕೊಂಡಿದ್ರು.. ಆದ್ರೆ, ಒಂದೇ ಒಂದು ವಿಡಿಯೋ  ಅವರನ್ನು ನೆಲಕ್ಕೆ ಕೆಡವಿಬಿಟ್ಟಿದೆ. ಮಂತ್ರಿ ಆಗಿದ್ದವ್ರು, ಈಗ ಮಾಜಿ ಆಗಿದ್ದಾರೆ, ಸಿಕ್ಕ ಸಿಕ್ಕವ್ರಿಗೆ ಆಹಾರ ಆಗಿದ್ದಾರೆ. ಸೆಕ್ಸ್ ಸಿಡಿ ಬಿಡುಗಡೆಯಾದ ಕೇವಲ 20 ಗಂಟೆಯಲ್ಲಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.  ಇದರ ನಡುವೆ ರಮೇಶ್ ಜಾರಕಿಹೊಳಿಯವರ ವಿಡಿಯೋ ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತ ಯುವತಿ ತಮ್ಮದು  ಸಹಮತ ಸೆಕ್ಸ್​​ ಎಂದು ಹೇಳಿದ್ರೆ, ಆವಾಗ ನನಗೆ ಮಾಹಿತಿ ನೀಡಿದವರ ವಿರುದ್ಧವೇ ನಾನು ಕಾನೂನು ಹೋರಾಟ ನಡೆಸುತ್ತೇನೆಂದು ಹೇಳಿದ್ದಾರೆ.

ಇದೂವರೆಗೂ ರಾಸಲೀಲೆಯಲ್ಲಿದ್ದ ಯುವತಿ ನನಗೆ ಅನ್ಯಾಯವಾಗಿದೆ ಎಂದು ಎಲ್ಲೂ ಹೇಳಿಲ್ಲ. ಅವರನ್ನ ನಾನು ಭೇಟಿಯಾಗಿಲ್ಲ. ಒಂದೊಮ್ಮೆ ಯುವತಿ ರಾಸಲೀಲೆ ಮಾಡಿರೋದಕ್ಕೆ ನನ್ನ ಒಪ್ಪಿಗೆ ಇತ್ತು. ಪರಸ್ಪರ ಒಪ್ಪಿಗೆಯಿಂದ ಆಗಿರುವ ಲೈಂಗಿಕ ಕ್ರಿಯೆ ಅಂತಾ ಒಪ್ಪಿಕೊಂಡರೇ.. ಆಗ ನಾನು ನನಗೆ ಮಾಹಿತಿ ನೀಡಿದ ಸಂತ್ರಸ್ತೆಯ ಕುಟುಂಬಸ್ಥರ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದು ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಾನೂನು ಹೋರಾಟಕ್ಕೆ ಬೇಕಾದ ಸಕಲ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಂತ್ರಸ್ತೆ ಅಥವಾ ಸಂತ್ರಸ್ತೆ ಕುಟುಂಬಸ್ಥರನ್ನ ಮಾಧ್ಯಮಗಳ ಮುಂದೆ ತರಲು ದಿನೇಶ್ ಕಲ್ಲಹಳ್ಳಿ ಪ್ರಯತ್ನಿಸುತ್ತಿದ್ದಾರೆ. ಮಾಹಿತಿ ನೀಡಿದ ವ್ಯಕ್ತಿ ಈವರೆಗೂ ದಿನೇಶ್​ಗೆ ಕರೆ ಮಾಡಿಲ್ಲ. ಹೀಗಾಗಿ ಪೊಲೀಸರ ವಿಚಾರಣೆಗೆ ಸಹಕಾರಿಯಾಗುವಂತೆ, ಆತನ‌ ಮೂಲಕ ವಿಚಾರಣೆಗೆ ಬಲ ತುಂಬಲು ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಬಹಿರಂಗಗೊಳಿಸಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ ಪುಟ್ಟೇಗೌಡ


ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada