ರಮೇಶ್​ ಜಾರಕಿಹೊಳಿ ಸಿಡಿ ಬಹಿರಂಗಗೊಳಿಸಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ ಪುಟ್ಟೇಗೌಡ

ಇಂಥ ವಿಡಿಯೋಗಳನ್ನು ಮಾಡುವುದೇ ತಪ್ಪು. ಅಲ್ಲದೆ ವಿಡಿಯೋವನ್ನು ರಷ್ಯಾದಿಂದ ಅಪ್ಲೋಡ್​ ಮಾಡಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಪುಟ್ಟೇಗೌಡ ಆಗ್ರಹಿಸಿದ್ದಾರೆ.

  • TV9 Web Team
  • Published On - 11:32 AM, 4 Mar 2021
ರಮೇಶ್​ ಜಾರಕಿಹೊಳಿ ಸಿಡಿ ಬಹಿರಂಗಗೊಳಿಸಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ ಪುಟ್ಟೇಗೌಡ
ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ

ರಮೇಶ್​ ಜಾರಕಿಹೊಳಿ ಸೆಕ್ಸ್​ ಸಿಡಿ ಬಹಿರಂಗಗೊಳಿಸಿದ ದಿನೇಶ್​ ಕಲ್ಲಹಳ್ಳಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ಕಬ್ಬನ್​ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಮೇಶ್​ ಜಾರಕಿಹೊಳಿಯವರದ್ದು ಎನ್ನಲಾದ ವಿಡಿಯೋದಲ್ಲಿ ಇರುವ ಯುವತಿಯನ್ನು ಸಂತ್ರಸ್ತೆ ಎಂದು ಹೇಳಲಾಗುತ್ತಿದೆ. ಆದರೆ ವಿಡಿಯೋ ನೋಡಿದರೆ ಇಬ್ಬರೂ ಪರಸ್ಪರ ಖುಷಿಯಿಂದ ಮಾತನಾಡಿಕೊಂಡು, ಒಪ್ಪಿತವಾಗಿಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇನ್ನೂ ಆಕೆ ಬಂದು ಲೈಂಗಿಕ ದೌರ್ಜನ್ಯದ ದೂರು ನೀಡಿಲ್ಲ. ಇದನ್ನೆಲ್ಲ ನೋಡಿದರೆ ಸಚಿವರ ತೇಜೋವಧೆ ಮಾಡಲೆಂದೇ ಈ ಸಿಡಿ ಬಿಡುಗಡೆ ಮಾಡಿದ್ದು ಖಚಿತವಾಗುತ್ತದೆ ಎಂದು ಪುಟ್ಟೇಗೌಡ ಆರೋಪಿಸಿದ್ದಾರೆ.