ಬಿಗ್ಬಾಸ್ ಸೀಸನ್ 8 ಈಗಾಗಲೇ ಶುರುವಾಗಿದ್ದು ಮನೆಯಂತೂ ತುಂಬ ವಿಭಿನ್ನವಾಗಿದ್ದು, ಹಸಿರು ಬಣ್ಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮನೆಯನ್ನು ತುಂಬ ಸುಂದರವಾಗಿ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಎಂಡಮೋಲ್ ಶೈನ್ ಇಂಡಿಯಾದ ಕಲಾ ನಿರ್ದೇಶಕಿ ವರ್ಷಾ ಜೈನ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಹಿಂದೆ ಹಾಕಿದ್ದ ಬಣ್ಣಗಳಲ್ಲಿ ಬದಲಾವಣೆ ಮಾಡಿ, ವಿಭಿನ್ನವಾಗಿ ವಿನ್ಯಾಸ ಮಾಡಲು ಪ್ರಯತ್ನ ಮಾಡಿದ್ದೇವೆ. ಸೃಜನಶೀಲತೆಯನ್ನು ತುಂಬಲು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದ್ದಾರೆ.