ಎಸ್ಎಸ್ಎಲ್ಸಿಯಲ್ಲಿ ಶೇಕಡ 80%ರಷ್ಟು ಅಂಕ ಪಡೆದು ಇಡೀ ಶಾಲೆಗೆ ನಂಬರ್ ಒನ್ ಬಂದರೂ ಬಡತನಕ್ಕೆ ಸಿಕ್ಕಿ ಹಾಕಿಕೊಂಡ ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರು ಉಳಿಯಲೇ ಬೇಕಾದ ಸ್ಥಿತಿ ಬರುತ್ತದೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.
ಕಷ್ಟಗಳನ್ನು ಎದುರಿಸದೆ ಯಾರೂ ಕೂಡ ಇತಿಹಾಸದ ಪುಟ ಸೇರೋಕೆ ಆಗಲ್ಲ. ಕಷ್ಟ, ನೋವು ಎಲ್ಲವನ್ನೂ ಮೀರಿ ನಿಂತಾಗ ಮಾತ್ರವೇ ಸುಖ, ಸಂತೋಷವನ್ನು ನಮ್ಮದಾಗಿಸಿಕೊಳ್ಳಲು ಆಗೋದು. ನೀವೂ ಕೂಡ ಐಎಎಸ್ನಲ್ಲಿ ಸಫಲರಾಗಬೇಕಾದ್ರೆ ನೀವು ಈ 3 ಸೂತ್ರಗಳನ್ನು ನೆನಪಿನಲ್ಲಿಡಬೇಕು.
ಕೊರೊನಾದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟಕೊಂಡು ರೋಗಿಗಳಿಗೆ, ಆರೋಗ್ಯ ಸೇವೆಗೆ ಯಾವುದೇ ತೊಂದರೆ ಆಗಬಾರದೆಂದು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ಸ್ ಸೂಚಿಸಿತ್ತು. ಹೀಗಾಗಿ ವೈದ್ಯರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
1,800 ಕೋಟಿ ಟೆಂಡರ್ ಅನ್ನು ಆರೋಗ್ಯ ಸಚಿವರ ಸೂಚನೆಯಂತೆ ರದ್ದುಗೊಳಿಸಿದ ಹಿನ್ನೆಲೆಯಲ್ಲೆ ಹೈಕೋರ್ಟ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ಕಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ. ಮತ್ತು ಅದನ್ನು ಮಾಡಲು ಉತ್ತಮ ಮಾರ್ಗವೆಂದರೆ ನೀವು ದಿನವಿಡೀ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇಡುವುದು.....
ಮಂಡ್ಯದ ಹಲ್ಲೇಗೆರೆ ಮೂಲದವರಾದ ಡಾ.ವಿವೇಕ್ ಮೂರ್ತಿ ಅಮೆರಿಕಾದ ಸರ್ಜನ್ ಜನರಲ್ ಆಗಿದ್ದಾರೆ. ಇನ್ನು ಸ್ಕೋಪ್ ಫೌಂಡೇಷನ್ ವತಿಯಿಂದ 70 ಆಕ್ಸಿಜನ್ ಕಾನ್ಸಂಟ್ರೇಟರ್ಗಳು, 4 ವೆಂಟಿಲೇಟರ್, ಎನ್ 95 ಮಾಸ್ಕ್ಗಳು, ರೆಸ್ಪರೇಟರ್ ಮಾಸ್ಕ್ಗಳು ಸೇರಿದಂತೆ 1.40 ಕೋಟಿ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳು ಶೀಘ್ರದಲ್ಲೇ ಬರಲಿದೆ ಎಂದು ವಿವೇಕ್ ಮೂರ್ತಿ ತಂದೆ ಲಕ್ಷ್ಮೀನರಸಿಂಹ ಮೂರ್ತಿ ತಿಳಿಸಿದ್ದಾರೆ.
ಇಲಾಖೆ ವಾಹನದಲ್ಲಿ ನಿವೃತ್ತ ಚಾಲಕ ರಾಜೇಸಾಬ್ ನನ್ನ ಕೂರಿಸಿಕೊಂಡು ಸ್ವತಹ ತಹಶೀಲ್ದಾರ್ ಸಿದ್ದೇಶ್ ರವರು ಚಾಲಕನ ಮನೆಯವರೆಗೂ ಡ್ರಾಪ್ ಮಾಡಿದ್ದಾರೆ. ತಾನೇ ವಾಹನ ಡ್ರೈವ್ ಮಾಡಿ ನಿವೃತ್ತ ಚಾಲಕನಿಗೆ ಅಪರೂಪದ ಕೊಡುಗೆ ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಸಿದ್ದೇಶ್ ವಾಹನ ಚಲಾಯಿಸೋ ದ್ರಶ್ಯಗಳು ವೈರಲ್ ಆಗಿವೆ.
ಹೆಚ್ಚುವರಿ ಹಣ ಪಡೆದು ಜನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಶಾಪ್ ಮಾಲೀಕ ಮತ್ತು ವೈದ್ಯ ವಿರುದ್ಧ ಆರೋಪ ಕೇಳಿ ಬಂದಿದೆ. ದಂಧೆ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ವೈದ್ಯನನ್ನು ವಜಾಗೊಳಿಸಲಾಗಿದೆ.
ಸರ್ಜನ್ ಡಾ.ಹುಸೇನ್ ಸಾಬ್ ನಿನ್ನೆ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿಗೂ ಮುನ್ನ 7 ನರ್ಸ್ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ಮೇಲಾಧಿಕಾರಿಗಳ ತಪ್ಪಿಗೆ ಕೆಳ ಹಂತದ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡಿದೆ. ಇದರಿಂದ ಬಿಮ್ಸ್ ಆಸ್ಪತ್ರೆಯ ನರ್ಸ್ಗಳ ಕಣ್ಣೀರು ಹಾಕಿದ್ದಾರೆ.
ಅಂತಾರಾಷ್ಟೀಯ ಮಟ್ಟದಲ್ಲಿ ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಹಾಗೂ ಅರಿವು ಮೂಡಿಸಲು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 2001 ರಲ್ಲಿ ವಿಶ್ವ ಹಾಲು ದಿನವನ್ನು ಪ್ರತಿ ವರ್ಷ ಜೂನ್ 1 ರಂದು ಆಚರಿಸುವಂತಾಗಿದೆ.