AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಸಂದ್ರ-ಮಾದಾವರ ಮೆಟ್ರೋ ಮಾರ್ಗ ಉದ್ಘಾಟನಾ ದಿನಾಂಕ ನಿಗದಿಗೆ ಸರ್ಕಾರಕ್ಕೆ ಪತ್ರ ಬರೆದ BMRCL

ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗದಲ್ಲಿ ಈ ತಿಂಗಳಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಉದ್ಘಾಟನಾ ದಿನಾಂಕವನ್ನು ಕರ್ನಾಟಕ ಸರ್ಕಾರ ನಿಗದಿ ಮಾಡಬೇಕಿದೆ.

ನಾಗಸಂದ್ರ-ಮಾದಾವರ ಮೆಟ್ರೋ ಮಾರ್ಗ ಉದ್ಘಾಟನಾ ದಿನಾಂಕ ನಿಗದಿಗೆ ಸರ್ಕಾರಕ್ಕೆ ಪತ್ರ ಬರೆದ BMRCL
ನಮ್ಮ ಮೆಟ್ರೋ
ಆಯೇಷಾ ಬಾನು
|

Updated on: Oct 15, 2024 | 7:50 AM

Share

ಬೆಂಗಳೂರು, ಅ.15: ಬಹು ನಿರೀಕ್ಷಿತ ನಾಗಸಂದ್ರದಿಂದ ಮಾದಾವರವರೆಗಿನ ( nagasandra Madavara Metro) ನಮ್ಮ ಮೆಟ್ರೋ ರೈಲು ಸಂಚಾರ ಸಂಪೂರ್ಣ ಸಿದ್ಧವಾಗಿದೆ. ನಮ್ಮ ಮೆಟ್ರೋದ (Namma Metro) ಗ್ರೀನ್ ಲೈನ್ ವಿಸ್ತರಣೆಯು ಮುಂದಿನ ಕೆಲವು ದಿನಗಳಲ್ಲಿ ತೆರೆಯುವ ಸಾಧ್ಯತೆಯಿದೆ, ಏಕೆಂದರೆ ಬಿಎಂಆರ್‌ಸಿಎಲ್ (BMRCL) 3.14 ಕಿ.ಮೀ ಉದ್ದದ ಮಾರ್ಗವನ್ನು ಉದ್ಘಾಟಿಸಲು ಸರ್ಕಾರದ ಹಿರಿಯ ಸಚಿವರಿಂದ ದಿನಾಂಕವನ್ನು ಕೇಳಿದೆ.

ತುಮಕೂರು ರಸ್ತೆಯ ಹಸಿರು ಮಾರ್ಗದಲ್ಲಿ ಈ ತಿಂಗಳಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಉದ್ಘಾಟನಾ ದಿನಾಂಕವನ್ನು ಕರ್ನಾಟಕ ಸರ್ಕಾರ ನಿಗದಿ ಮಾಡಬೇಕಿದೆ.

298.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಲಿವೇಟೆಡ್ ಮೆಟ್ರೊ ಮಾರ್ಗವು ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಸೇರಿ ಮೂರು ನಿಲ್ದಾಣಗಳನ್ನು ಒಳಗೊಂಡಿದೆ. ಇದರ ಉದ್ಘಾಟನೆಯ ನಂತರ ಬೆಂಗಳೂರು ಮೆಟ್ರೋ ಜಾಲವು 76.95 ಕಿಮೀಗೆ ವಿಸ್ತರಿಸುತ್ತದೆ ಮತ್ತು ತುಮಕೂರು ರಸ್ತೆಯಲ್ಲಿನ ತೀವ್ರ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋ ಹಳದಿ ಲೈನ್: ಮಹತ್ವದ ಅಪ್​ಡೇಟ್ ನೀಡಿದ ಬಿಎಂಆರ್​ಸಿಎಲ್

ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಅಕ್ಟೋಬರ್ 4ರಂದು ಪರಿಶೀಲನೆ ನಡೆಸಿ, ಸಂಚಾರಕ್ಕೆ ಅನುಮತಿ ನೀಡಿದ್ದರೂ ಔಪಚಾರಿಕ ಉದ್ಘಾಟನೆಯು ಸರ್ಕಾರದ ಅನುಮತಿಯ ಕೊರತೆಯಿಂದಾಗಿ ವಿಳಂಬವಾಗಿದೆ.

ನಮ್ಮ ಮೆಟ್ರೋ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಉದ್ಯಮವಾಗಿರುವುದರಿಂದ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕರ್ನಾಟಕದ ನಗರಾಭಿವೃದ್ಧಿ ಇಲಾಖೆ (UDD) ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ನಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ.

ಸರ್ಕಾರದ ಅನುಮತಿ ಬಳಿಕ ಉದ್ಘಾಟನೆ

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ಅವರು ಕಳೆದ ವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವಂತೆ ಪತ್ರ ಬರೆಯಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.

UDD ಯ ಉನ್ನತ ಮೂಲವು BMRCL ನಿಂದ ಪತ್ರವನ್ನು ದೃಢಪಡಿಸಿದೆ ಮತ್ತು ಅಧಿಕೃತ ಉದ್ಘಾಟನೆಯನ್ನು ನಡೆಸಲು ದಿನಾಂಕವನ್ನು ನೀಡುವಂತೆ ಉಪಮುಖ್ಯಮಂತ್ರಿಗಳ ಕಚೇರಿ (DCMO) ಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

“ನಾಗಸಂದ್ರದಿಂದ ಮಾದಾವರ ಮಾರ್ಗ ತೆರೆಯಲು ಸಿದ್ಧವಾಗಿದೆ. ಉದ್ಘಾಟನಾ ದಿನಾಂಕವನ್ನು ಡಿಸಿಎಂಒ ಮತ್ತು ಸಚಿವಾಲಯದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು ಎಂದರು. ಭೂಸ್ವಾಧೀನ ಸವಾಲುಗಳು ಮತ್ತು ಗುತ್ತಿಗೆದಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದಾಗಿ ನಾಗಸಂದ್ರ-ಮಾದಾವರ ಮೆಟ್ರೊ ಮಾರ್ಗವು ನಮ್ಮ ಮೆಟ್ರೊ ಇತಿಹಾಸದಲ್ಲಿಯೇ ಅತ್ಯಂತ ನಿಧಾನಗತಿಯಲ್ಲಿ ನಿರ್ಮಾಣವಾಗಿದೆ. ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ಗೆ ಫೆಬ್ರವರಿ 2017 ರಲ್ಲಿ 27-ತಿಂಗಳ ಡೆಡ್‌ಲೈನ್‌ನೊಂದಿಗೆ ಸಿವಿಲ್ ಕೆಲಸದ ಗುತ್ತಿಗೆಯನ್ನು ನೀಡಲಾಯಿತು, ಆದರೆ ಈ ಮಾರ್ಗ ಪೂರ್ಣಗೊಳ್ಳಲು 91 ತಿಂಗಳುಗಳನ್ನು ತೆಗೆದುಕೊಂಡಿದೆ. ಅಂದರೆ 7 ವರ್ಷಗಳಿಗೂ ಅಧಿಕ ಸಮಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ