Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಇರಲ್ಲ
Bangalore Power Cut Today: ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಂಗಳವಾರ ಪೂರ್ವನಿಯೋಜಿತ ವಿದ್ಯುತ್ ವ್ಯತ್ಯಯವಾಗಲಿದೆ. ದುರಸ್ತಿ ಮತ್ತು ನಿರ್ವಹಣೆಯ ಕಾರಣಕ್ಕೆ ವಿದ್ಯತ್ ಕಡಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಿದ್ದರೆ ಯಾವ ಯಾವ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ? ಇಲ್ಲಿದೆ ಮಾಹಿತಿ.
ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನ (Bengaluru) ಅನೇಕ ಪ್ರದೇಶಗಳಲ್ಲಿ ಇಂದು (ಅ.15) ಪೂರ್ವನಿಯೋಜಿತ ವಿದ್ಯುತ್ ವ್ಯತ್ಯಯವಾಗಲಿದೆ. ದುರಸ್ತಿ ಮತ್ತು ನಿರ್ವಹಣೆಯ ಕಾರಣಕ್ಕೆ ವಿದ್ಯತ್ ಕಡಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿ ನೀಡಿದೆ. ವಿದ್ಯುತ್ ಕಡಿತ ಪ್ರದೇಶ ಹಾಗೂ ಸಮಯದ ವಿವರವನ್ನು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಲೈನ್ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಸಲುವಾಗಿ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ http://bescom.karnataka.gov.in ಸಂಪರ್ಕಿಸಿ ಎಂದು ಬೆಸ್ಕಾಂ ಮನವಿ ಮಾಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ರಾಜಾಜಿನಗರ ವ್ಯಾಪ್ತಿಯ ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಇ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮೇನ್ನಿಂದ 13ನೇ ಮೇನ್ವರೆಗೆ, ಈಸ್ಟ್ ಸ್ಟೇಜ್ ತಿಮ್ಮೇನಹಳ್ಳಿ. ಎಮ್ಸಿ ಲೇಔಟ್‌ನ ಭಾಗ, ಬಿನ್ನಿ ಲೇಔಟ್, ಮಾರೇನಹಳ್ಳಿ, ವಿನಾಯಕ ಲೇಔಟ್.
ಬಲ್ಲಯ್ಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11ನೇ ಬ್ಲಾಕ್, ಕೆಎಚ್‌ಬಿ ಕಾಲೋನಿ, ಹೆಚ್ವಿಆರ್ ಲೇಔಟ್, ಸಿಂಡಿಕೇಟ್ ಕಾಲೋನಿ, ಸಿಂಡಿಕೇಟ್ ಬ್ಯಾಂಕಿಂಗ್ ಸುತ್ತಮುತ್ತಲಿನ ಪ್ರದೇಶ, ಪಾಪಯ್ಯ ಗಾರ್ಡನ್ ಕೆಹೆಚ್ಬಿ ಕಾಲೋನಿ, ಕೆಹೆಚ್ಬಿ ಕಾಲೋನಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಸರಾ ಹಳ್ಳಿ. ಈ ಎಲ್ಲ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ.
ಇದನ್ನೂ ಓದಿ: ಬೆಂಗಳೂರಿಗರಿಗೊಂದು ಬೆಸ್ಕಾಂ ಪ್ರಕಟಣೆ: ಸೆ 1 ರಿಂದಲೇ ಈ ಕಟ್ಟುನಿಟ್ಟಿನ ನಿಯಮಗಳು ಜಾರಿ
ಕೋರಮಂಗಲ ವ್ಯಾಪ್ತಿಯ ರಮೇಶನಗರ ಮತ್ತು ವಿಭೂತಿಪುರದಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಪವರ್ ಕಟ್ ಆಗಲಿದೆ.
ಬೆಂಗಳೂರು ಗ್ರಾಮಾಂತರ ಪವರ್ ಕಟ್
ಬೆಂಗಳೂರು ಗ್ರಾಮಾಂತರ ಭಾಗದ ಹಲವು ಪ್ರದೇಶಗಳಲ್ಲೂ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಹೊಸಕೋಟೆ ವ್ಯಾಪ್ತಿಯ ದೇವನಹಳ್ಳಿ ಮತ್ತು ವಿಜಯಪುರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪವರ್ ಕಟ್ ಆಗಲಿದೆ.
ನೆಲಮಂಗಲ ವ್ಯಾಪ್ತಿಯ ದೊಡ್ಡಬಳ್ಳಾಪುರ ಗ್ರಾಮಾಂತರ ಭಾಗದ ವಿಜಯಣ್ಣ ಮನೆ, ಹೊನ್ನಾವರ, ಹೊನ್ನಾವರ ಕಾಲೋನಿ, ಇಸ್ತೂರು ಕಾಲೋನಿ, ಇಸ್ತೂರು. ಗಂದರಗೋಳಿಪುರ, ಹೊನ್ನಾದೇವಿಪುರ. ಸಿಂಪಾಡಿಪುರ, ಗೂಳ್ಯ, ನಲ್ಲೇನಹಳ್ಳಿ, ಕಾರ್ಯಾಪುರ, ಕಾರ್ಯಾಪುರ ಕಾಲೋನಿ, ಪುಟ್ಟೇನಹಳ್ಳಿ, ದೊಡ್ಡ ಬೆಳವಂಗಲ, ಚಿಕ್ಕವಡಗೆರೆ, ತಿಮ್ಮಸಂದ್ರ, ಹಳ್ಳೇನಹಳ್ಳಿ, ಭಂಡಿಪಾಳ್ಯ, ಲಿಯೋನಹಳ್ಳಿ, ಅಂಬಲಗೆರೆ, ಗುತ್ತೇಪಾಳ್ಯ.
ಎಸ್ ಗತಿ, ನಾಗೇನಹಳ್ಳಿ, ಹಾಡೋನಹಳ್ಳಿ. ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಪಲ್ ಪಲ್ ದಿನ್ನೆ, ಗಂಗಸಂದ್ರ, ಮಲ್ಲತ್ತಹಳ್ಳಿ, ವಡ್ಡರಹಳ್ಳಿ, ಪೆರುಮಗೊಂಡನಹಿಲಿ ತಿರುಮಗೊಂಡನಹಳ್ಳಿ, ಹಾಡೋನಹಳ್ಳಿ ವಡ್ಡರಹಳ್ಳಿ ಕಾಲೋನಿ. ಮಲ್ಲತ್ತಹಳ್ಳಿ, ವಡ್ಡರಹಳ್ಳಿ, ಪೆರುಮಗೊಂಡನಹಳ್ಳಿ ತಿರುಮಗೊಂಡನಹಳ್ಳಿ, ಹಾಡೋನಹಳ್ಳಿ ಅಂತರಹಳ್ಳಿ, ಮಲ್ಲತಹಳ್ಳಿ, ವಡ್ಡರಹಳ್ಳಿ, ಪೆರುಮಗೊಂಡನಹಿಲಿ ತಿರುಮಗೊಂಡನಹಳ್ಳಿ, ಹಾಡೋನಹಳ್ಳಿ. ಈ ಎಲ್ಲ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕರೆಂಟ್ ಕಟ್ ಆಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ