AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSSನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್​​ ಜಾರಕಿಹೊಳಿ

RSSನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್​​ ಜಾರಕಿಹೊಳಿ

Anil Kalkere
| Edited By: |

Updated on:Mar 09, 2026 | 12:34 PM

Share

ಸಚಿವ ಸತೀಶ್ ಜಾರಕಿಹೊಳಿ ಅವರು ಆರ್​ಎಸ್​ಎಸ್​ ನಿಷೇಧದ ಕುರಿತು ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಆರ್​ಎಸ್​ಎಸ್​ ಅನ್ನು ನಿಷೇಧಿಸುವುದು ಅಸಾಧ್ಯ ಎಂದು ಜಾರಕಿಹೊಳಿ ಹೇಳಿದ್ದಾರೆ. ಸಂಘಟನೆ ನಿಷೇಧಕ್ಕೂ ಮತ್ತು ಚಟುವಟಿಕೆ ನಿರ್ಬಂಧಕ್ಕೂ ವ್ಯತ್ಯಾಸವಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ಮಾರ್ಚ್​​ 09: ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಆರ್​ಎಸ್​ಎಸ್​ ನಿಷೇಧದ ಕುರಿತ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಆರ್​ಎಸ್​ಎಸ್​ ಅನ್ನು ಯಾರೂ ಬ್ಯಾನ್ ಮಾಡಿಲ್ಲ, ಯಾರೂ ಬ್ಯಾನ್ ಮಾಡೋಕೆ ಆಗಲ್ಲ ಎಂದು ಅವರು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಆರ್​ಎಸ್​ಎಸ್​ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿದ ಅವರು, ಸಂಘಟನೆ ನಿಷೇಧಕ್ಕೂ ಮತ್ತು ಚಟುವಟಿಕೆ ನಿರ್ಬಂಧಕ್ಕೂ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸರ್ಕಾರವಾಗಲೀ ಅಥವಾ ಯಾವುದೇ ಸರ್ಕಾರವಾಗಲೀ ಆರ್​ಎಸ್​ಎಸ್​ ಅನ್ನು ನಿಷೇಧಿಸುವ ಬಗ್ಗೆ ಎಲ್ಲೂ ಹೇಳಿಲ್ಲ. ಇದು ಅನಗತ್ಯ ಚರ್ಚೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 09, 2026 12:33 PM
Follow Us