RSS
RSS – Rashtriya Swayamsevak Sangh
ನಮ್ಮ ಪಕ್ಷದಲ್ಲೂ ಶಿಸ್ತು ಬೇಕು; ಆರ್ಎಸ್ಎಸ್ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಇತ್ತೀಚಿನ ಹೇಳಿಕೆಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿಯ ಸಾಂಸ್ಥಿಕ ಬಲದ ಕುರಿತು ದಿಗ್ವಿಜಯ ಸಿಂಗ್ ಹೇಳಿಕೆ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಂಗ್ರೆಸ್ನೊಳಗೆ ಬಲವಾದ ಸಂಘಟನೆಗಾಗಿ ಶಿಸ್ತು ಬಹಳ ಮುಖ್ಯ ಎಂದು ದಿಗ್ವಿಜಯ ಸಿಂಗ್ ಅವರಿಗೆ ಶಶಿ ತರೂರ್ ಬೆಂಬಲಿಸಿದ್ದಾರೆ.
- Sushma Chakre
- Updated on: Dec 29, 2025
- 8:18 pm
ಕಿಡಿಗೇಡಿತನ; ಆರ್ಎಸ್ಎಸ್-ಬಿಜೆಪಿ ಕುರಿತ ದಿಗ್ವಿಜಯ ಸಿಂಗ್ ಹೊಗಳಿಕೆಗೆ ರಾಹುಲ್ ಗಾಂಧಿ ಅಸಮಾಧಾನ
ಆರ್ಎಸ್ಎಸ್-ಬಿಜೆಪಿ ಕುರಿತು ಹೊಗಳಿ ಪೋಸ್ಟ್ ಮಾಡುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ಉಂಟುಮಾಡಿದ್ದರು. ಈ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಬಿಜೆಪಿ ಮತ್ತು ಆರ್ಎಸ್ಎಸ್ನ ಸಂಘಟನಾತ್ಮಕ ಬಲವನ್ನು ಸಾರ್ವಜನಿಕವಾಗಿ ಹೊಗಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Sushma Chakre
- Updated on: Dec 29, 2025
- 7:25 pm
ಆರ್ಎಸ್ಎಸ್ ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಬಿಜೆಪಿ ಮತ್ತು ಆರ್ಎಸ್ಎಸ್ನ ಸಂಘಟನಾ ಬಲದ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳು ಪಕ್ಷದೊಳಗೆ ಮತ್ತು ಅದರಾಚೆಗೂ ಬಿರುಗಾಳಿಯನ್ನು ಸೃಷ್ಟಿಸುತ್ತಲೇ ಇವೆ. ನಾಯಕರನ್ನು ನಿರ್ಮಿಸುವ ಸಾಮರ್ಥ್ಯಕ್ಕಾಗಿ ಆರ್ಎಸ್ಎಸ್ ಅನ್ನು ಹೊಗಳಿದ ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಕೆಲವು ಕಾಂಗ್ರೆಸ್ ನಾಯಕರು ಅವರ ಅಭಿಪ್ರಾಯವನ್ನು ಬೆಂಬಲಿಸಿದರೆ, ಮಾಣಿಕ್ಕಂ ಟ್ಯಾಗೋರ್ನಂತಹ ಇತರ ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ.
- Sushma Chakre
- Updated on: Dec 28, 2025
- 10:32 pm
ವಿಶ್ವ ಕಲ್ಯಾಣಕ್ಕಾಗಿ ಭಾರತ ವಿಶ್ವಗುರು ಆಗಲೇಬೇಕು; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂಗಳು ಒಗ್ಗಟ್ಟಾಗಿರಬೇಕು. ಸನಾತನ ಧರ್ಮವನ್ನು ಬಲಪಡಿಸುವ ಮತ್ತು ಉನ್ನತೀಕರಿಸುವ ಸಮಯ ಬಂದಿದೆ ಎಂದು ಕರೆ ನೀಡಿದ್ದಾರೆ. ಎಲ್ಲಾ ಹಿಂದೂಗಳು ಸನಾತನ ಧರ್ಮವನ್ನು ಉನ್ನತೀಕರಿಸುವ ಸಮಯ ಬಂದಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
- Sushma Chakre
- Updated on: Dec 28, 2025
- 8:45 pm
ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ
Digvijaya Singh shares Narendra Modi's old photo, praises organizational power of RSS: ಆರೆಸ್ಸೆಸ್ ಸಂಘಟನೆಯ ಶಕ್ತಿಯನ್ನು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೊಗಳಿದ್ದಾರೆ. ತೊಂಬತ್ತರ ದಶಕದಲ್ಲಿ ಎಲ್.ಕೆ. ಆಡ್ವಾಣಿ ಕಾಲ ಕೆಳಗೆ ಮುಂಭಾಗದಲ್ಲಿ ನರೇಂದ್ರ ಮೋದಿ ಕುಳಿತು ಭಾಷಣ ಕೇಳುತ್ತಿರುವ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ. ಸಾಮಾನ್ಯ ಕಾರ್ಯಕರ್ತರಾದವರು ಸಿಎಂ ಮತ್ತು ಪಿಎಂ ಆಗುತ್ತಾರೆ. ಅದು ಸಂಘಟನೆಯ ಶಕ್ತಿ ಎಂದು ದಿಗ್ವಿಜಯ ಸಿಂಗ್ ಹೊಗಳಿದ್ದಾರೆ.
- Vijaya Sarathy SN
- Updated on: Dec 27, 2025
- 5:34 pm
500ಕ್ಕೂ ಹೆಚ್ಚು RSS ಕಾರ್ಯಕ್ರಮ, ಪಥಸಂಚಲನ: ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!
ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದೆಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ಪಥಸಂಚಲನವನ್ನು ವಿರೋಧಿಸಿದ್ದರು. ಆದರೆ, ಅದೇ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕ ಸರ್ಕಾರ, ರಾಜ್ಯಾದ್ಯಂತ 518 ಆರ್ಎಸ್ಎಸ್ ಪಥಸಂಚಲನಗಳು ಶಾಂತಿಯುತವಾಗಿ ನಡೆದಿವೆ ಎಂದು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದೆ. ಯಾವುದೇ ಗಲಾಟೆ ಅಥವಾ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.
- Ganapathi Sharma
- Updated on: Dec 10, 2025
- 11:48 am
ಭಾರತೀಯರಿಗೆ ಅವರ ಭಾಷೆಗಳೇ ಗೊತ್ತಿಲ್ಲ ಎನ್ನುವಂತಾಗಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
Mohan Bhagwat urges Indians to use mother tongue: ಕೆಲ ಭಾರತೀಯರಿಗೆ ಅವರ ಸ್ವಂತ ಭಾಷೆಗಳೇ ಅರ್ಥ ಆಗದಂತಹ ಪರಿಸ್ಥಿತಿ ಬಂದಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಒಂದೊಮ್ಮೆ ದೇಶದಲ್ಲಿ ಎಲ್ಲಾ ಸಂವಹನವೂ ಸಂಸ್ಕೃತದಲ್ಲೇ ನಡೆಯುತ್ತಿತ್ತು. ಈಗ ವಿದೇಶಿಗರು ಸಂಸ್ಕೃತ ಕಲಿಸುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ನಾಗಪುರ್ನಲ್ಲಿ 13ನೇ ಶತಮಾನದ ಸಂತ ಜ್ಞಾನೇಶ್ವರ್ ವಿರಚಿತ ಕೃತಿಯ ಇಂಗ್ಲೀಷ್ ಅವತರಣಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
- Vijaya Sarathy SN
- Updated on: Dec 1, 2025
- 11:52 am
ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಇಂದು ಶಾಂತಿ ಸಿಕ್ಕಿರಬಹುದು; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
"ಸತ್ಯ ಮತ್ತು ಧರ್ಮದ ಸಂಕೇತವಾದ ಈ ರಾಮ ಮಂದಿರವು ಇಂದು ಎದ್ದು ನಿಂತಿದೆ. ಧರ್ಮ, ಜ್ಞಾನ ಮತ್ತು ಸತ್ಯವನ್ನು ಜಗತ್ತಿಗೆ ಹರಡುವ ಕೆಲಸ ಪ್ರಾರಂಭವಾಗಿದೆ. ನಾವು ಎಲ್ಲಾ ಅಡೆತಡೆಗಳ ನಡುವೆಯೂ ಧೈರ್ಯದಿಂದ ಮುಂದುವರಿಯಬೇಕು. ಈ ದೇಶದಲ್ಲಿ ಜನಿಸಿದವರು ಹಿರಿಯ ಸಹೋದರರಂತೆ. ಜಗತ್ತು ನಮ್ಮ ಮೇಲೆ ನಿರೀಕ್ಷೆಗಳನ್ನು ಇಟ್ಟಿದೆ. ನಾವು ಅವುಗಳನ್ನು ಪೂರೈಸಲು ಕೆಲಸ ಮಾಡಬೇಕು" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
- Sushma Chakre
- Updated on: Nov 25, 2025
- 5:02 pm
RSSಗೆ ಪರೋಕ್ಷ ಅಂಕುಶ: ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ
ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಮತ್ತೆ ಹಿನ್ನಡೆ ಆಗಿದೆ. ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿದಾರರಿಗೆ ಸೀಮಿತಗೊಳಿಸುವ ಸರ್ಕಾರದ ಮನವಿಯನ್ನು ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ನಿರಾಕರಿಸಿದೆ. ಸರ್ಕಾರದ ಆದೇಶವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
- Ramesha M
- Updated on: Nov 17, 2025
- 4:17 pm
ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ, ಇಡೀ ದೇಶದ ಗಮನ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಇಂದು ಯಾವುದೇ ಗದ್ದಲ, ಗಲಾಟೆ ಇಲ್ಲದೆ ಸುಸೂತ್ರವಾಗಿ ಜರುಗಿತು. ಪಥಸಂಚಲನ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆಗೆ ಟಕ್ಕರ್ ಕೊಡಲಾಗಿದೆ. ಜೊತೆಗೆ ಆರ್ಎಸ್ಎಸ್ ಶಕ್ತಿ ಪ್ರದರ್ಶನ ಮಾಡಿದ್ದಂತು ಸುಳ್ಳಲ್ಲ.
- Dattatraya Patil
- Updated on: Nov 16, 2025
- 8:34 pm
ಚಿತ್ತಾಪುರದಲ್ಲಿ ಮೊಳಗಿದ ಆರ್ಎಸ್ಎಸ್ ಗೀತೆ: ವಿಡಿಯೋ ನೋಡಿ
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ರಾಷ್ಟ್ರೀಯ ಸೇಯಂಸೇವಕ ಸಂಘ ಪಥಸಂಚಲನ ಆಯೋಜಿಸಲಾಗಿತ್ತು. ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಖುಷಿಯಿಂದ ಭಾಗವಹಿಸಿದ್ದರು. ಆಯೋಜಕರು ನೀಡಿದ್ದ ಪಟ್ಟಿಯಲ್ಲಿ ಹೆಸರಿದ್ದವರಿಗಷ್ಟೇ ಅವಕಾಶ ನೀಡಲಾಗಿತ್ತು. ಪಥಸಂಚಲನ ಆರಂಭಕ್ಕೂ ಮುನ್ನ ಚಿತ್ತಾಪುರದಲ್ಲಿ ಗಣವೇಷಧಾರಿಗಳಿಂದ RSS ಗೀತೆ ಮೊಳಗಿತು. ವಿಡಿಯೋ ನೋಡಿ.
- Dattatraya Patil
- Updated on: Nov 16, 2025
- 5:11 pm
ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಚಿತ್ತಾಪುರದಲ್ಲಿ ನಡೆದ ಪಥಸಂಚಲನ ಅಂತ್ಯವಲ್ಲ, ಆರಂಭ. ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥಾದ್ದರಲ್ಲಿ ಆರ್ಎಸ್ಎಸ್ ಹಣದ ಲೆಕ್ಕ ಕೇಳಬಾರದಾ? RSS ತೆರಿಗೆ ವಂಚನೆ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
- Dattatraya Patil
- Updated on: Nov 16, 2025
- 4:46 pm