ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.
ಆಳಂದ ಮತಗಳ್ಳತನ ಪ್ರಕರಣ: ಎಸ್ಐಟಿ ಚಾರ್ಜ್ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು ನೋಡಿ
ಆಳಂದ ಮತಗಳ್ಳತನ ಪ್ರಕರಣ ಸಂಬಂಧ ಚಾರ್ಜ್ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ, ಇದು ಆಡಳಿತಾರೂಢ ಕಾಂಗ್ರೆಸ್ನ ಕುತಂತ್ರ ಎಂದು ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ್ ಗುತ್ತೆದಾರ್ ಟೀಕಿಸಿದ್ದಾರೆ. ಇವರಿಬ್ಬರೂ ಸೇರಿದಂತೆ ಒಟ್ಟು 7 ಮಂದಿಯ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
- Dattatraya Patil
- Updated on: Dec 13, 2025
- 10:48 am
ಕಳ್ಳತನದ ದಿಕ್ಕನ್ನೇ ಬದಲಾಯಿಸಿತು ಅದೊಂದು ಘಟನೆ: ಕಲಬುರಗಿಯಲ್ಲಿ ವಿಚಿತ್ರ ಕಳ್ಳ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಕುಡಿತದ ಚಟಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ಖತರ್ನಾಕ್ ಕಳ್ಳ ಸದ್ಯ ಕಲಬುರಗಿ ಪೊಲೀಸರ ಕೈಗೆ ಸಿಲುಕಿ ಕಂಬಿ ಎಣಿಸುವಂತಾಗಿದೆ. ಅಸಲಿಗೆ ಬಂಧಿತ ಆಸಾವಿ ಮಹಾರಾಷ್ಟ್ರದಿಂದ ಕನ್ಯಾಕುಮಾರಿಗೆ ಕಳ್ಳತನ ಮಾಡಲು ಹೊರಟಿದ್ದ. ಆದರೆ ದಾರಿ ಮಧ್ಯೆ ನಡೆದ ಅದೊಂದು ಘಟನೆ ಕಳ್ಳತನದ ದಿಕ್ಕನ್ನೇ ಬದಲಾಯಿಸಿತು.
- Dattatraya Patil
- Updated on: Dec 11, 2025
- 8:48 pm
ಕಲಬುರಗಿಯಲ್ಲಿ 2 ಸರ್ಕಾರಿ ಬಸ್, ಜೀಪ್ ಮಧ್ಯೆ ಸರಣಿ ಅಪಘಾತ: ಮೂವರು ಸಾವು
ಕಲಬುರಗಿ ಸಂಚಾರಿ ಠಾಣೆ 1ರ ವ್ಯಾಪ್ತಿಯಲ್ಲಿ ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಎರಡು ಸರ್ಕಾರಿ ಬಸ್ ಮತ್ತು ಜೀಪ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
- Dattatraya Patil
- Updated on: Dec 11, 2025
- 5:24 pm
ಮೋಹರಂ ಮುಗಿದ್ರೂ ಗಲಾಟೆ ಮುಗಿದಿಲ್ಲ: ಅಂತಿಮವಾಗಿ ಮೌಲ್ವಿ ಕೊಲೆಯಲ್ಲಿ ಅಂತ್ಯ
ಮೊಹರಂ ಹಬ್ಬ ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಭಾವೈಕ್ಯತೆ ಸಾರುವ ಹಬ್ಬವನ್ನಾಗಿ ಆಚರಿಸುತ್ತಾರೆ. ಮೋಹರಂ ಹಬ್ಬದಲ್ಲಿ ಪೀರ್ ಹಿಡಿಯುವ ವಿಚಾರದಲ್ಲಿ ಶುರುವಾದ ಗಲಾಟೆ ಹಬ್ಬ ಮುಗಿದು ತಿಂಗಳುಗಳೆ ಕಳೆದ್ರು ಗಲಾಟೆ ಮಾತ್ರ ಮುಗಿದಿರಲಿಲ್ಲ.ಆದ್ರೆ ಈ ಬಾರಿ ಸ್ವಲ್ಪ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೋಹರಂ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
- Dattatraya Patil
- Updated on: Dec 7, 2025
- 7:36 pm
ಮಹಿಳೆ ಜತೆ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು
ಸಾಮಾನ್ಯವಾಗಿ ಮೋಜು ಮಸ್ತಿಗಾಗಿ ಅದಕ್ಕೂ ಮಿಗಿಲಾಗಿ ಮಾಡಿದ ಸಾಲವನ್ನ ತೀರಿಸಲು ಕಳ್ಳತನ, ಸುಲಿಗೆ ಮಾಡಿದ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಗೆಳೆತಿಯೊಂದಿಗೆ ಲಿವಿಂಗ್ ಟೂಗೆದರ್‌ಗಾಗಿ ಹಣ ಹೊಂದಿಸಲು ಕೂಲಿ ಕೆಲಸಕ್ಕೆಂದು ಹೋಗ್ತಿದ್ದ ಮಹಿಳೆಯರನ್ನ ಸುಲಿಗೆ ಮಾಡಿ ಖಾಕಿ ಕೈಗೆ ತಗಲಾಕೊಂಡಿದ್ದಾನೆ. ಅಷ್ಟಕ್ಕೂ ಖದೀಮನ ಸುಲಿಗೆ ಕೆಲಸ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
- Dattatraya Patil
- Updated on: Dec 4, 2025
- 9:07 pm
ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ
ಗೋವುಗಳನ್ನ ಸಾಗಿಸುತ್ತಿದ್ದ ಲಾರಿಯನ್ನ ತಡೆದು ಪರಿಶೀಲನೆ ಮಾಡಿದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದ ಬಳಿ ನಡೆದಿದೆ. ಅಫಜಲಪುರದಿಂದ ಆಳಂದ ಕಡೆಗೆ ತೆರಳುತ್ತಿದ್ದ ಗೋವು ತುಂಬಿದ್ದ ಲಾರಿಯನ್ನು ರೋಹಿತ್ ಮತ್ತು ಅನೀಲ್ ತಡೆ ನಿಲ್ಲಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿಯಾಗಿದೆ. ದಾಖಲಾತಿ ಜೊತೆಗೆ ಅನುಮತಿ ಪಡೆದು ಗೋವು ಸಾಗಾಟ ಮಾಡುತ್ತಿರುವ ಗಾಡಿಯನ್ನ ತಡೆಯುತ್ತಿರಾ ಎಂದು ರೋಹಿತ್ ಮತ್ತು ಅನೀಲ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಕಲಬುರಗಿ ಸಬ್ ಅರ್ಬನ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ
- Dattatraya Patil
- Updated on: Nov 26, 2025
- 7:46 pm
ಮಹಾಂತೇಶ ಬೀಳಗಿ ಕಾರು ಅಪಘಾತ ಹೇಗಾಯ್ತು? ಅಪಘಾತದ ಸ್ಥಳ ಹೇಗಿದೆ ನೋಡಿ
ಕಲಬುರಗಿಯಿಂದ ರಾಮದುರ್ಗಕ್ಕೆ ತೆರಳುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಜೆವರಗಿ ಬೈಪಾಸ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಅಪಘಾತದಲ್ಲಿ ಅವರ ಸ್ನೇಹಿತ ಇರಣ್ಣ ಸಿರಸಂಗಿ ಸೇರಿದಂತೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಮಹಾಂತೇಶ ಬೀಳಗಿ ಕಾರು ಅಪಘಾತ ಹೇಗಾಯ್ತು? ಅಪಘಾತದ ಸ್ಥಳ ಹೇಗಿದೆ ಎಂಬ ವಿಡಿಯೋ ಇಲ್ಲಿದೆ ನೋಡಿ.
- Dattatraya Patil
- Updated on: Nov 26, 2025
- 10:44 am
ಜನಸ್ನೇಹಿ ಐಎಎಸ್ ಅಧಿಕಾರಿಯನ್ನು ಬಲಿಪಡೆದ ಶ್ವಾನ
ದಕ್ಷ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಬೈಪಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪ್ರಾಮಾಣಿಕ ಮತ್ತು ಸರಳ ವ್ಯಕ್ತಿತ್ವದ ಅಧಿಕಾರಿಯ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ.
- Dattatraya Patil
- Updated on: Nov 25, 2025
- 9:30 pm
ಕಾರು ಅಪಘಾತ: ಕರ್ನಾಟಕ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವು!
ಈ ಹಿಂದೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ (MD) ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತವಾಗಿದೆ. ವಿಜಯಪುರದಿಂದ ಕಲಬುರಗಿಗೆ ಹೋಗುತ್ತಿದ್ದ ವೇಳೆ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಐವರು ಪೈಕಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
- Dattatraya Patil
- Updated on: Nov 25, 2025
- 8:48 pm
ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು
ವೈರಲ್ ಆಗಿರುವ ಅದೊಂದು ವಿಡಿಯೋದಿಂದ 9 ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ರಹಸ್ಯ ಇದೀಗ ಬಯಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಸುಪಾರಿ ನೀಡಿ ಕೊಲೆ ಮಾಡಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.
- Dattatraya Patil
- Updated on: Nov 23, 2025
- 4:46 pm
ಮಧ್ಯಂತರ ಜಾಮೀನು ಪಡೆದ್ರೂ ಆರ್.ಡಿ ಪಾಟೀಲ್ಗೆ ತಪ್ಪದ ಸಂಕಷ್ಟ: ಮತ್ತೊಂದು FIR
ಪಿಎಸ್ಐ ಹಗರಣದ ಆರೋಪಿ ಆರ್.ಡಿ.ಪಾಟೀಲ್ ಜಾಮೀನಿನ ಮೇಲೆ ಬಿಡುಗಡೆಯಾದ ದಿನವೇ ಕಲಬುರಗಿ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೊಸ ಎಫ್ಐಆರ್ ದಾಖಲಾಗಿದೆ. ಆದರೆ, ಪಾಟೀಲ್ ಕೂಡ ಜೈಲು ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಪ್ರತಿ ದೂರು ನೀಡಿದ್ದಾರೆ. ಹೀಗಾಗಿ, ಪರಸ್ಪರ ದೂರಗಳ ಸತ್ಯಾಸತ್ಯತೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
- Dattatraya Patil
- Updated on: Nov 23, 2025
- 2:45 pm
ಪಕ್ಕದ ಜಮೀನಿನವರನ್ನ ಜೈಲಿಗೆ ಕಳಿಸಬೇಕೆಂದು ಸ್ವಂತ ಮಗಳನ್ನೇ ಕೊಂದ ತಂದೆ
ಕಲಬುರಗಿಯ ಕಲ್ಲಹಂಗರಗಾ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 17 ವರ್ಷದ ವಿಕಲಚೇತನ ಮಗಳನ್ನು ತಂದೆ ಕೊಲೆ ಮಾಡಿ, ಬಳಿಕ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಲು ಹೋಗಿ ಕೊನೆಗೆ ಪೊಲೀಸರ ಅತಿಥಿ ಆಗಿರುವಂತಹ ಘಟನೆ ನಡೆದಿದೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Dattatraya Patil
- Updated on: Nov 21, 2025
- 3:23 pm