ದೇವರ ಭಜನೆ ಮಾಡುತ್ತಿದ್ದ ಮಹಿಳೆಯ ಸರ ಕಿಟಿಕಿಯಿಂದ ಕದ್ದು ಕಳ್ಳ ಪರಾರಿ: ಎಫ್ಐಆರ ದಾಖಲು
ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ಓರ್ವ ಮಹಿಳೆ ದೇವರ ಭಜನೆಯಲ್ಲಿ ಮಗ್ನರಾಗಿ ಬಿಟ್ಟಿದ್ದಾರೆ. ಈ ವೇಳೆ ಖತರ್ನಕ್ ಕಳ್ಳ ಬಂದಿದ್ದು, ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಅಕ್ಟೋಬರ್ 14: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರವನ್ನು ಕಿಟಿಕಿಯಿಂದ ಕದ್ದು ಖತರ್ನಕ್ ಕಳ್ಳ (thief) ಪರಾರಿಯಾಗಿರುವಂತಹ ಘಟನೆ ನಗರದ ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 10ರಂದು ನಡೆದ ಘಟನೆಯ ವಿಡಿಯೋ ಭಕ್ತರೊಬ್ಬರ ಮೊಬೈಲ್ ನಲ್ಲಿ ಸೆರೆ ಆಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಂದಿನಿ ಲೇಔಟ್ನ ಶಂಕರಪುರದ ಗಣೇಶ ದೇವಸ್ಥಾನದಲ್ಲಿ ಓರ್ವ ಮಹಿಳೆ ದೇವರ ಭಜನೆಯಲ್ಲಿ ಮಗ್ನರಾಗಿ ಬಿಟ್ಟಿದ್ದಾರೆ. ಈ ವೇಳೆ ಖತರ್ನಕ್ ಕಳ್ಳ ಬಂದಿದ್ದು, ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಎಳೆದಿದ್ದಾನೆ.
ಇದನ್ನೂ ಓದಿ: ಹಾಸ್ಟೆಲ್ ಬಾತ್ರೂಂನಲ್ಲಿ ಮದರಸಾ ವಿದ್ಯಾರ್ಥಿ ಆತ್ಮಹತ್ಯೆ: ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೋಷಕರು
ಅತ್ತ ಕಳ್ಳ ಸರ ಎಳೆಯುತ್ತಿದ್ದಂತೆ ಮಹಿಳೆ ಜೋರಾಗಿ ಕೂಗಿಕೊಳ್ಳುತಾ, ತಪ್ಪಿಸಿಕೊಳ್ಳುವಾಗ ಕಟ್ಟಾಗಿ ಅರ್ಧ ಸರ ಕಳ್ಳನ ಕೈಸೇರಿದೆ. ಸುಮಾರು ಮೂವತ್ತು ಗ್ರಾಂ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಿದ ನಂದಿನಿ ಲೇಔಟ್ ಪೊಲೀಸ್ ತನಿಖೆ ಆರಂಭಿಸಿದ್ದಾರೆ.
ಮನೆಗೆ ನುಗ್ಗಿ ಮಲಗಿದ್ದ ವೃದ್ದೆಯ ಕತ್ತಿನಲ್ಲಿದ್ದ ಸರಗಳ್ಳತನ
ಇನ್ನು ನೆಲಮಂಗಲದಲ್ಲಿ ಕೂಡ ಇಂತಹದ್ದೇ ಒಂದು ಘಟನೆ ನಡೆದಿದೆ. ಮನೆಗೆ ನುಗ್ಗಿ ಮಲಗಿದ್ದ ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರಗಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಸಿಡೇದಹಳ್ಳಿಯ ಮುನ್ನಮ್ಮ ಎಂಬುವವರು ಸರ ಕಳೆದುಕೊಂಡವರು.
ಬೈಕಿನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿ ವೃದ್ದೆಯ ಕತ್ತಿನಲ್ಲಿದ್ದ 85 ಸಾವಿರ ರೂ. ಬೆಲೆಬಾಳುವ 13ಗ್ರಾಂ ತೂಕದ ಚಿನ್ನದ ಸರ ಎಗರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಾರು ಅಡ್ಡಗಟ್ಟಿ ದಂಪತಿಗೆ ಬೆದರಿಕೆ: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್
ಕ್ಷುಲ್ಲಕ ಕಾರಣಕ್ಕೆ ಕಾರು ಅಡ್ಡಗಟ್ಟಿ ದಂಪತಿಗೆ ಬೆದರಿಕೆ ಹಾಕಿರುವಂತಹ ಘಟನೆ ತುರುಬರಹಳ್ಳಿಯ ವಿಬ್ಗಯಾರ್ ಶಾಲೆ ಬಳಿ ನಿನ್ನೆ ಘಟನೆ ನಡೆದಿದೆ. ಆ ಮೂಲಕ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ.
ಇದನ್ನೂ ಓದಿ: ವಿಜಯದಶಮಿಯಂದು ಧಾರವಾಡದಲ್ಲಿ ಘೋರ ಅಪಘಾತ: ಟಿಪ್ಪರ ಡಿಕ್ಕಿಗೆ ಯುವಕನ ಅಂಗಾಂಗಗಳು ಚೆಲ್ಲಾಪಿಲ್ಲಿ
ಉತ್ತರ ಭಾರತ ಮೂಲದ ದಂಪತಿಗೆ ವ್ಯಕ್ತಿಯಿಂದ ಧಮ್ಕಿ ಹಾಕಲಾಗಿದೆ. ಘಟನೆ ಸಂಬಂಧ ವರ್ತೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾರು ಓವರ್ಟೇಕ್ ವಿಚಾರಕ್ಕೆ ಕಾರು ಅಡ್ಡಗಟ್ಟಿ ಬೆದರಿಕೆ ಹಾಕಲಾಗಿದೆ. ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ವಿಡಿಯೋ ಹಂಚಿಕೊಂಡು ಸರ್ಕಾರವನ್ನು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ದಂಪತಿಯಿಂದ ದೂರು ಪಡೆದು FIR ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.