ಬೆಸ್ಕಾಂ ಬಿಲ್ ಜತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್!

ಬೆಸ್ಕಾಂ ಬಿಲ್ ಜೊತೆಗೆ ಡೆಪಾಸಿಟ್ ಚಾರ್ಜ್ ಎಂದು ಪ್ರತಿ ಮನೆಗೆ ಬಿಲ್ ನೀಡಲಾಗಿದೆ. ಇನ್ನು ಹೆಚ್ಚಿನ ಕರೆಂಟ್ ಬಳಸುತ್ತಿರುವ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಸಾವಿರಾರು ರೂ. ವಸೂಲಿ ಮಾಡಲು ಮುಂದಾಗಿದ್ದಾರೆ. ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಬೆಸ್ಕಾಂನಿಂದ ಸಾವಿರಾರು ರೂ ಬಿಲ್ ಮಾಡಿದೆ.

ಬೆಸ್ಕಾಂ ಬಿಲ್ ಜತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್!
ಬೆಸ್ಕಾಂ ಬಿಲ್ ಜತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್!
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2024 | 6:39 PM

ಬೆಂಗಳೂರು, ಅಕ್ಟೋಬರ್​ 02: ಗೃಹಜ್ಯೋತಿ ಯೋಜನೆಯಲ್ಲಿ ಇಷ್ಟು ದಿನಗಳ ಕಾಲ ಮನೆ ಮಾಲೀಕರು ಉಚಿತವಾಗಿ ವಿದ್ಯುತ್ ಉಪಯೋಗಿಸುತ್ತಿದ್ದರು. ಆದರೆ ಇದೀಗ ಬೆಸ್ಕಾಂ ಎಎಸ್​ಡಿ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಬಿಲ್ (Bescom bill) ಜೊತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್ ಆಗಿದ್ದಾರೆ.

ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಬೆಸ್ಕಾಂನಿಂದ ಸಾವಿರಾರು ರೂ ಬಿಲ್!

ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್​ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೆ, ಇಲ್ಲಿಯವರೆಗೆ ಉಚಿತವಾಗಿ ವಿದ್ಯುತ್ ಬಳಸುತ್ತಿದ್ದ ಮನೆಗಳಿಗೆ ಬೆಸ್ಕಾಂ ಎಎಸ್ಡಿ (ಅಡಿಷನಲ್ ಸೆಕ್ಯೂರಿಟೀ ಡೆಪಾಸಿಟಿ) ಹೆಸರಲ್ಲಿ ಸಾವಿರಾರು ರೂ. ಹಣ ಕಟ್ಟುವಂತೆ ಈ ತಿಂಗಳ ಬಿಲ್ ಜೊತೆಗೆ ನೀಡಿದೆ. ಇದಕ್ಕೆ ಬೆಸ್ಕಾಂ ವಿರುದ್ಧ ಮನೆ ಮಾಲೀಕರು, ಬಾಡಿಗೆಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೊಂದು ಬೆಸ್ಕಾಂ ಪ್ರಕಟಣೆ: ಸೆ 1 ರಿಂದಲೇ ಈ ಕಟ್ಟುನಿಟ್ಟಿನ ನಿಯಮಗಳು ಜಾರಿ

ಬೆಸ್ಕಾಂ ಬಿಲ್ ಜೊತೆಗೆ ಡೆಪಾಸಿಟ್ ಚಾರ್ಜ್ ಎಂದು ಪ್ರತಿ ಮನೆಗೆ ಬಿಲ್ ನೀಡಲಾಗಿದೆ. ಇನ್ನು ಹೆಚ್ಚಿನ ಕರೆಂಟ್ ಬಳಸುತ್ತಿರುವ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಸಾವಿರಾರು ರೂ. ವಸೂಲಿ ಮಾಡಲು ಮುಂದಾಗಿದ್ದಾರೆ. ಆದರೆ ಈ ಹಣ ವಾಪಸ್ಸು ಬರೋದಿಲ್ಲ, ಮನೆ ಮಾಲೀಕರ ಅಕೌಂಟ್​ನಲ್ಲಿ ಈ ಹಣ ಜಮೆ ಆಗಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.

ನಮ್ಮ ಅಕೌಂಟ್​ನಲ್ಲಿ ಜಮೆ ಆಗಿರುವಾಗ ನಾವು ಯಾಕೆ ಹಣ ಕಟ್ಟಬೇಕು. ಸೆಕ್ಯುರಿಟಿ ಡೆಪಾಸಿಟ್ ಕಟ್ಟಲ್ಲ, ಬಿಲ್ ಮಾತ್ರ ಕಟ್ಟುತ್ತೇವೆ ಎಂದು ಮನೆ ಮಾಲೀಕರು ಹೇಳುತ್ತಿದ್ದಾರೆ. ಆದರೆ ಈ ಬಾರಿ ಹಣ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಡುತ್ತೇವೆ ಎಂದು ಬೆಸ್ಕಾಂ ಹೇಳುತ್ತಿದ್ದಾರೆ.

ಇದನ್ನೂ ಓದಿ: Gruha Jyothi Scheme: ಶೂನ್ಯ ಬಿಲ್‌ ಬದಲು ಹೆಚ್ಚುವರಿ ಬಿಲ್, ಹೆವಿ ಲೋಡ್ ಹೆಸರಿನಲ್ಲಿ ವಿದ್ಯುತ್ ಬಿಲ್ ಹೆಚ್ಚಳ

ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಜನರಲ್ ಮ್ಯಾನೇಜರ್ (ಕಸ್ಟಮರ್ ರಿಲೇಷನ್) ಎಂಎಲ್. ರಾಜೋಜಿರಾವ್, ಬೆಸ್ಕಾಂ ಹಿತದೃಷ್ಟಿಯಿಂದ ಹೆಚ್ಚಿನ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಮಾತ್ರ ಎಎಸ್ಡಿ ಬಿಲ್ ನೀಡಲಾಗಿದೆ. ಕಡಿಮೆ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಎಎಸ್ಡಿ ಅಪ್ಲೈ ಆಗೋದಿಲ್ಲ. ಈ ಹಣವನ್ನು ಮನೆ ಮಾಲೀಕರ ಅಕೌಂಟ್​ನಲ್ಲಿ ಇರುತ್ತದೆ. ಆ ಹಣಕ್ಕೆ ನಾವು ಪ್ರತಿ ವರ್ಷ ಬಡ್ಡಿ ಕೊಡುತ್ತೇವೆ ಎಂದಿದ್ದಾರೆ. ಇಷ್ಟು ದಿನ ಉಚಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಮನೆ ಮಾಲೀಕರಿಗೆ, ಬೆಸ್ಕಾಂ ಅಧಿಕಾರಿಗಳ ಎಎಸ್ಡಿ ಬಿಲ್ ಶಾಕ್ ನೀಡುವುದಂತು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ