Nithya Bhavishya: ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಅಕ್ಟೋಬರ್ 12ರ ಶನಿವಾರದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ? ಗ್ರಹಗಳ ಸಂಚಾರದಿಂದ ಆಗುವ ಪರಿಣಾಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 12ರ ಶನಿವಾರವಾದ ಇಂದು ಚಂದ್ರನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲದೆ, ವಿಜಯದಶಮಿ ಕೂಡ ಇದೆ. 9 ದಿನಗಳ ಯುದ್ಧದ ನಂತರ ಇಂದು ದುರ್ಗಾ ಮಾತೆ ಮಹಿಷಾಸುರನೆಂಬ ರಾಕ್ಷಸನನ್ನು ಕೊಂದಳು. ಆದ್ದರಿಂದ ಈ ದಿನವನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಈ ದಿನದಂದು ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಶ್ರಾವಣ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದ್ದು, ಇದರಿಂದ ವಿಜಯದಶಮಿ ದಿನದ ಮಹತ್ವ ಇನ್ನಷ್ಟು ಹೆಚ್ಚಿದೆ. ಈ ದಿನದ ಗ್ರಹಗಳ ಚಲನವಲನ ಹೇಗಿದೆ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರಾವಣ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50, ಯಮಘಂಡ ಕಾಲ ಮಧ್ಯಾಹ್ನ 01:48ರಿಂದ 03:16ರವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53 ರವರೆಗೆ.