ಮೈಸೂರು ದಸರಾ 2024: ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಚಾಲನೆ
ನವರಾತ್ರಿ ಬಳಿಕ ಬರುವುದು ವಿಜಯದಶಮಿ. ಇಂದು ಮೈಸೂರಿನಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗಿದ್ದಾನೆ. ಜಂಬೂಸವಾರಿ ಲೈವ್ ನೋಡಿ.
ಮೈಸೂರು, ಅಕ್ಟೋಬರ್ 12: ವಿಶ್ವವಿಖ್ಯಾತ ಮೈಸೂರಿನಲ್ಲಿ ಗತವೈಭವ. ಅರಮನೆ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಕೋಟ್ಯಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದ ದಸರಾ ಜಂಬೂ ಸವಾರಿ ಇದೀಗ ಆರಂಭವಾಗಿದೆ. ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ. ರಾಜವಂಶಸ್ಥ & ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಥ್ ನೀಡಿದ್ದಾರೆ. ಅಧಿದೇವತೆ ಚಾಮುಂಡಿಯನ್ನ ಅಭಿಮನ್ಯು ಹೊತ್ತಿದ್ದಾನೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯ ಲೈವ್ ವೀಕ್ಷಣೆ ಮಾಡಿ.
Published On - 9:16 am, Sat, 12 October 24