ರಾತ್ರೋರಾತ್ರಿ ವಿಗ್ರಹ ಪ್ರತಿಷ್ಠಾಪನೆ, ಮಂಡ್ಯ ಕುಂದೂರು ಬೆಟ್ಟದ ಭೂಮಿಯನ್ನ ಕಬಳಿಸುವ ಯತ್ನ: ಸ್ಥಳಿಯರು ಕಿಡಿಕಿಡಿ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟ ಎಂದ ಕೂಡಲೇ ನಮಗೆ ನೆನಪಾಗುವುದು ಕಾಮೇಗೌಡ ಎಂಬ ವೃದ್ಧ ಹಾಗು ಬೆಟ್ಟದ ತಪ್ಪಲಿನಲ್ಲಿ ಹಲವು ಕೆರೆ ಕಟ್ಟೆಗಳು. ದಾಸನದೊಡ್ಡಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ಬೆಟ್ಟದಲ್ಲಿ ಕಳೆದ ಹಲವು ವರ್ಷಗಳಿಂದಲೂ ಘನನೀಲಿ ಸಿದ್ದಪ್ಪಾಜಿ ಎಂಬ ದೇವಾಲಯ ಇತ್ತು.
ಮಂಡ್ಯ: ಕಾಮೇಗೌಡರು ಕೆರೆಕಟ್ಟೆಗಳನ್ನೇ ನಿರ್ಮಿಸಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಾರಿ ಸುದ್ದಿಯಲ್ಲಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟ ಇದೀಗ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೆರೆ ಕಟ್ಟೆಗಳ ವಿಚಾರಕ್ಕಲ್ಲ. ಬೆಟ್ಟವನ್ನೇ ಅತಿಕ್ರಮಣ ಮಾಡುವ ಯತ್ನ ನಡಿಯುತ್ತಿದೆಯಾ? ಎನ್ನುವ ಅನುಮಾನ ಮೂಡಿದೆ. ಯಾಕೆಂದರೆ ಇಲ್ಲಿ ಈಗಾಗಲೇ ಇದ್ದ ಸಿದ್ದಪ್ಪಾಜಿ ದೇವಾಲಯಕ್ಕೆ ಹೊಂದಿಕೊಂಡಂತೆ ಮತ್ತೊಂದು ದೇವಾಲಯ ನಿರ್ಮಾಣವಾಗುವ ಸೂಚನೆ ಎದುರಾಗಿದ್ದು, ಬೆಟ್ಟದಲ್ಲಿ ರಾತ್ರೋ ರಾತ್ರಿ ನಾಗರಕಲ್ಲುಗಳ ಪ್ರತಿಷ್ಠಾಪನೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟ ಎಂದ ಕೂಡಲೇ ನಮಗೆ ನೆನಪಾಗುವುದು ಕಾಮೇಗೌಡ ಎಂಬ ವೃದ್ಧ ಹಾಗೂ ಬೆಟ್ಟದ ತಪ್ಪಲಿನಲ್ಲಿ ಹಲವು ಕೆರೆ ಕಟ್ಟೆಗಳು. ದಾಸನದೊಡ್ಡಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ಬೆಟ್ಟದಲ್ಲಿ ಕಳೆದ ಹಲವು ವರ್ಷಗಳಿಂದಲೂ ಘನನೀಲಿ ಸಿದ್ದಪ್ಪಾಜಿ ಎಂಬ ಪುಟ್ಟದಾದ ದೇವಾಲಯ ಇತ್ತು. ಇಲ್ಲಿನ ಜನರೂ ಸಹ ಸಾಕಷ್ಟು ಭಕ್ತಿ ಪೂರಕವಾಗಿ ಆ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇಟ್ಟುಕೊಂಡು ಬಂದಿದ್ದರು. ಹೀಗಿರುವಾಗಲೇ ಹಳೆ ದೇವಾಲಯಕ್ಕೆ ಹೊಂದಿಕೊಂಡಂತೆ ರಾತ್ರೋ ರಾತ್ರಿ ದೇವರ ವಿಗ್ರಹಗಳು ಪ್ರತಿಷ್ಠಾಪನೆಯಾಗಿವೆ. ಇದು ಕುಂದೂರು ಬೆಟ್ಟದಲ್ಲಿನ ಭೂಮಿಯನ್ನ ಕಬಳಿಸುವ ಯತ್ನ ಎಂಬ ಆರೋಪ ಕೇಳಿ ಬಂದಿದೆ.
ಕುಂದೂರು ಬೆಟ್ಟ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಇದೇ ಜಾಗದಲ್ಲಿ ಕಾಮೇಗೌಡರು ಹಲವು ಕೆರೆ ಕಟ್ಟೆಗಳನ್ನ ನಿರ್ಮಿಸಿ ಜಾನುವಾರುಗಳಿಗೆ ಪಕ್ಷಿಗಳಿಗೆ ನೀರು ಕುಡಿಯಲು ನೆರವಾಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಕಾಮೇಗೌಡರ ಕೆಲಸವನ್ನ ಹಾಡಿಹೊಗಳಿದ್ದರು. ಹೀಗಿರುವಾಗಲೇ ದಾಸನದೊಡ್ಡಿಯ ಗ್ರಾಮದ ಜನರು ಇಲ್ಲಿ ಕಾಮೇಗೌಡರು ಯಾವುದೇ ಕೆರೆಗಳನ್ನ ನಿರ್ಮಿಸಿಲ್ಲ. ಅಲ್ಲದೆ ಅವರು ಒಂದೇ ಒಂದು ಸಸಿಗಳನ್ನೂ ಸಹ ನೆಟ್ಟಿಲ್ಲ ಎಂಬ ವಾದ ಮಂಡಿಸಿದ್ದರು. ಇದೀಗ ಕುಂದೂರು ಬೆಟ್ಟದಲ್ಲಿನ ಭೂಮಿಯನ್ನೇ ಹೊಡೆಯಲು ಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟುಕೊಂಡಿದೆ. ಸಿದ್ದಪ್ಪಾಜಿ ಎಂಬುವವರು ತಮ್ಮ ಕುಟುಂಬಕ್ಕೆ ಒಳ್ಳೆಯದು ಆಗಿರುವುದರಿಂದ ಹರಕೆ ರೂಪದಲ್ಲಿ ಇಲ್ಲಿ ನಾಗರಕಲ್ಲಿನ ವಿಗ್ರಹಗಳನ್ನ ಪ್ರತಿಷ್ಠಾಪಿಸಿದ್ದಾರೆ.
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಇಲ್ಲಿ ನಾಗರ ಕಲ್ಲುಗಳನ್ನ ಪ್ರತಿಷ್ಠಾಪಿಸಿರುವ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಳವಳ್ಳಿ ತಾಲೂಕು ಅರಣ್ಯಾಧಿಕಾರಿಗಳು ಬೆಟ್ಟದಲ್ಲಿ ಯಾವುದೇ ಗುಡಿ ನಿರ್ಮಿಸದಂತೆ ಗ್ರಾಮಸ್ಥರಿಗೆ ತಾಕೀತು ಮಾಡಿದ್ದಾರೆ. ಆದರೆ ಇಲ್ಲಿ ದೇವರ ಪೂಜೆಗೆ ಅವಕಾಶ ನೀಡಲೇಬೇಕೆಂದು ಕೊಂಡಿರುವ ದಾಸನದೊಡ್ಡಿಯ ಕೆಲವು ಜನರು ನಾವು ನಾಗರ ಕಲ್ಲುಗಳನ್ನ ಪ್ರತಿಷ್ಠಾಪಿಸಿಯೇ ತೀರುತ್ತೇವೆ ಎಂದು ಹಠ ಹಿಡಿದಿದ್ದಾರೆ.
ಇದನ್ನೂ ಓದಿ
Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ
ಕೊರೋನಾ ಕಾಲದಲ್ಲಿ ನಿರ್ಮಾಣವಾಯ್ತು ದೇವಾಲಯ! ಉಡುಪಿಯಲ್ಲಿ ತಲೆ ಎತ್ತಿತು ಪಂಜುರ್ಲಿ ದೇವಸ್ಥಾನ