Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ
Temple Hundi | ನಂಜುಂಡೇಶ್ವರ ದೇಗುಲದ ಹುಂಡಿಯಲ್ಲಿನ ಹಣವನ್ನು ತಹಶಿಲ್ದಾರ್ ಶರ್ಮಿಳಾ ದತ್ತು ಸಮ್ಮುಖದಲ್ಲಿ ಏಣಿಕೆ ಮಾಡಿದ್ದು, ಹುಂಡಿಯಲ್ಲಿ 1,11,64,033 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಮೈಸೂರು: ನಂಜನಗೂಡಿನ ನಂಜುಂಡೇಶ್ವರ ದೇಗುಲದ ಹುಂಡಿಯಲ್ಲಿನ ಹಣವನ್ನು ತಹಶೀಲ್ದಾರ್ ಶರ್ಮಿಳಾ ದತ್ತು ಸಮ್ಮುಖದಲ್ಲಿ ಏಣಿಕೆ ಮಾಡಿದ್ದು, ಹುಂಡಿಯಲ್ಲಿ 1,11,64,033 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಅಲ್ಲದೇ 105 ಗ್ರಾಂ ಚಿನ್ನ, 2 ಕೆ.ಜಿ 250 ಗ್ರಾಂ ಬೆಳ್ಳಿ, 6 ವಿದೇಶಿ ಕರೆನ್ಸಿ ಇದ್ದು, ಚಲಾವಣೆ ಇಲ್ಲದ 1 ಸಾವಿರ ಮುಖಬೆಲೆಯ 11 ನೋಟುಗಳು, 500 ಮುಖಬೆಲೆಯ 87 ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.
ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಮಾಡಲಾಗಿದೆ. ಮಾದಪ್ಪನ ಹುಂಡಿಯಲ್ಲಿ 1.48 ಕೋಟಿ ರೂಪಾಯಿ ನಗದು ಸಂಗ್ರಹ. 31 ಗ್ರಾಂ ಚಿನ್ನ, 2 ಕೆಜಿ 82 ಬೆಳ್ಳಿ ಸಂಗ್ರಹ. ಪ್ರತಿ ತಿಂಗಳಿಗೆ ಒಮ್ಮೆ ನಡೆಯುವ ಹುಂಡಿ ಎಣಿಕೆ. ಹುಂಡಿಯಲ್ಲಿ 44 ವಿದೇಶಿ ನೋಟುಗಳು ಪತ್ತೆಯಾಗಿದ್ದು, 9 ಅಮೆರಿಕನ್ ಡಾಲರ್ ನೋಟುಗಳು, 15 ಇಂಗ್ಲೆಂಡ್ ಪೌಂಡ್ಸ್ ಹುಂಡಿಯಲ್ಲಿ ಶೇಖರಣೆಯಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ದೇಗುಲಗಳ ಪೈಕಿ ಎರಡನೇ ಸ್ಥಾನವನ್ನು ಪಡೆದಿರುವ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇಗುಲದ ಹುಂಡಿ ಹಣ ಎಣಿಕೆ ಪ್ರತಿ ತಿಂಗಳಿನಂತೆ ಈ ಬಾರಿಯೂ ನಡೆದಿದ್ದು, ಪುನಃ ಮಾದಪ್ಪ ಕೋಟಿ ರೂಪಾಯಿ ಒಡೆಯನಾಗಿದ್ದಾನೆ.
ಕೊರೊನಾ ನಂತರದ ದಿನಗಳಲ್ಲಿ ಸದ್ಯ ಎಲ್ಲಾ ದೇವಾಲಯಗಳ ಬಾಗಿಲು ತೆರೆದಿದ್ದು, ಹುಂಡಿಯಲ್ಲಿ ಹಣವು ಕೂಡ ಸಂಗ್ರಹವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ತಿರುಪತಿ ದೇವರ ಹುಂಡಿಯೂ ಕೂಡ ಕೊರೊನಾ ನಂತರದ ದಿನಗಳಲ್ಲಿ ಮತ್ತೆ ಹೆಚ್ಚು ಹಣವನ್ನು ಸಂಗ್ರಹಿಸಿದ್ದು, ಇದಕ್ಕೆ ನಿದರ್ಶನ ಎನ್ನುವಂತೆ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 24 ಗಂಟೆಗಳಲ್ಲಿ 44 ಲಕ್ಷ ರೂಪಾಯಿ ಶೇಖರಣೆಯಾದ ಉದಾಹರಣೆಗಳಿವೆ.
ಇದನ್ನೂ ಓದಿ: ಮಹದೇಶ್ವರ ಬೆಟ್ಟ: ಶಿವರಾತ್ರಿ ಲಾಡು ಮಾರಾಟದಿಂದ 1 ಕೋಟಿ ಆದಾಯ
ತಿರುಮಲ ದೇವಾಲಯದ ಹುಂಡಿ ಏಣಿಕೆ: ಆಂಧ್ರ ಪ್ರದೇಶದ ತಿರುಮಲ ದೇವಸ್ಥಾನದ ಹುಂಡಿಗೆ ಕಳೆದ 24 ಗಂಟೆಗಳಲ್ಲಿ ಭಾರಿ ಆದಾಯ ಸಂಗ್ರಹವಾಗಿದ್ದು, 3.41ಕೋಟಿ ರೂಪಾಯಿ ನಗದು ಹುಂಡಿಯಲ್ಲಿ ಒಟ್ಟಾಗಿದೆ. ಇನ್ನು ಒಂದು ದಿನದಲ್ಲಿ 52,135 ಭಕ್ತರಿಂದ ಬಾಲಾಜಿಯ ದರ್ಶನವಾಗಿದ್ದು, 22967 ಭಕ್ತರಿಂದ ಬಾಲಾಜಿಗೆ ಮುಡಿ ಸಮರ್ಪಣೆ ಮಾಡಲಾಗಿದೆ.
ಇದನ್ನೂ ಓದಿ: ಕೊರೊನಾ ಸಡಿಲಿಕೆ ಬಳಿಕ ತಿಮ್ಮಪ್ಪನ ಆದಾಯ ಎಷ್ಟು ಗೊತ್ತಾ?
Published On - 12:00 pm, Wed, 3 March 21