AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ!

ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ!

ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Mar 02, 2026 | 12:00 PM

Share

ಉತ್ತರ ಕರ್ನಾಟಕದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಕಾಲಜ್ಞಾನದ ಭವಿಷ್ಯವಾಣಿಗಳು ಮತ್ತೆ ಚರ್ಚೆಗೆ ಬಂದಿವೆ. ಮಠದಲ್ಲಿ ನುಡಿದಿದ್ದ "ಗಡಿಯಲ್ಲಿ ಯುದ್ಧ, ಜಾಗತಿಕ ಕೆಡಕು" ಎಂಬ ಅಶುಭ ಮುನ್ಸೂಚನೆಗಳು ಇರಾನ್-ಅಮೆರಿಕಾ-ಇಸ್ರೇಲ್ ಸಂಘರ್ಷ ಮತ್ತು ಮಧ್ಯಪ್ರಾಚ್ಯದ ಬಾಂಬ್ ದಾಳಿಗಳ ಮೂಲಕ ಅಕ್ಷರಶಃ ನಿಜವಾಗುತ್ತಿವೆ. ಯುದ್ಧದ ಜೊತೆಗೆ ಮಳೆ-ಬೆಳೆ ವ್ಯತ್ಯಯ ಮತ್ತು ಪ್ರವಾಹದ ಭೀತಿಯನ್ನೂ ಭವಿಷ್ಯ ನುಡಿದಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸಿದ್ರಾಮಪ್ಪ ಹೋಳಿಮಠ ತಿಳಿಸಿದ್ದರು.

ವಿಜಯಪುರ, ಮಾ.2: ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಕೇಂದ್ರಗಳಲ್ಲೊಂದಾದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ಅಕ್ಷರಶಃ ನಿಜವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. “ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಪೀಠಾಧಿಪತಿಗಳು ಸ್ಪಷ್ಟವಾಗಿ ಹೇಳಿದ್ದರು. ಇದು ಪ್ರಸ್ತುತ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ನೇರ ಸಾಕ್ಷಿಯಂತಿದೆ. “ಜಾಗತಿಕ ಮಟ್ಟದಲ್ಲಿ ದೊಡ್ಡ ಕೆಡಕಾಗಲಿದೆ, ದೊಡ್ಡ ದುಃಖದ ಸುದ್ದಿಯೊಂದು ಬಂದೀತು” ಎಂದು ನುಡಿಯಲಾಗಿತ್ತು. ಇರಾನ್‌ನ ಪ್ರಮುಖ ನಾಯಕರ ಹತ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿ ಸರಣಿ ಬಾಂಬ್ ದಾಳಿಗಳು ಈ ಭವಿಷ್ಯವನ್ನು ಪುಷ್ಟೀಕರಿಸುತ್ತಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮತ್ತು ಪ್ರತಿಯಾಗಿ ದುಬೈ, ಕತಾರ್, ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಭವಿಷ್ಯದಲ್ಲಿ ಸುಳಿವು ನೀಡಲಾಗಿತ್ತು. ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಿತ್ತು. ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು. ಗಡಿಯಲ್ಲಿ ಯುದ್ಧದ ಭೀತಿ ಮತ್ತು ದೇಶದ ಆರ್ಥಿಕತೆಗೆ ಪೆಟ್ಟು ಬೀಳುವ ಮುನ್ಸೂಚನೆಗಳನ್ನು ಸಿದ್ರಾಮಪ್ಪ ಹೋಳಿಮಠ ಅವರು ನೀಡಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok Yadalli
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More