ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ
ವೈಷ್ಣವಿ ಗೌಡ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 12, 2021 | 8:46 AM

ವೈಷ್ಣವಿ ಗೌಡ ಬಿಗ್​ ಬಾಸ್​ ಮನೆಗೆ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಸಾಕಷ್ಟು ಸೈಲೆಂಟ್​ ಆಗಿದ್ದರು. ನಂತರ ಅವರು ಕ್ರಶ್​ ಬಗ್ಗೆ ಹೇಳಿಕೊಂಡಿದ್ದರು. ಈಗ ಅವರು ಬಿಗ್​ ಬಾಸ್​ ಮನೆಯಲ್ಲಿ ಗಂಡ ಬೇಕು ಎಂದು ಗೋಗರೆಯುತ್ತಿದ್ದಾರೆ. ಇದನ್ನು ಕೇಳಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ನಿಧಿ ಬಳಿ ಹೋಗಿ, ನಿಮಗೆ ಮದುವೆ ಆಗುತ್ತೆ. ಗಂಡು ಮಗು ಜನಿಸುತ್ತದೆ. ನಿಮ್ಮ ಹಾರ್ಟ್​ ತುಂಬಾನೇ ಒಳ್ಳೆಯದು. ವಯಸ್ಸು 80ರ ಮೇಲಾಗುತ್ತದೆ ಎಂದು ಚಂದ್ರಚೂಡ್​ ಭವಿಷ್ಯ ನುಡಿದರು. ಈ ವಿಚಾರವನ್ನು ಕೇಳಿ ನಿಧಿ ತುಂಬಾನೇ ಖುಷಿ ಆದರು.

ರಘು ಬಳಿ ಹೋಗಿ, ನಿನಗೆ ಯಾವುದರ ಮೇಲೂ ನಂಬಿಕೆ ಇಲ್ಲ. ರೇಖೆಗಳೇ ಇದನ್ನು ಹೇಳುತ್ತವೆ ಎಂದರು ಚಂದ್ರಚೂಡ್​. ಬ್ರೋ ಗೌಡ ಅವರದ್ದು ಜೂಜಿನ ಕೈ. ಜೂಜು ಆಡಿದರೆ ಹಣ ಬರುತ್ತದೆ ಎಂದರು ಅವರು. ಪ್ರಶಾಂತ್​ ಅವರನ್ನು ಮರಳುಗಾಡಿನಲ್ಲಿ ಬಿಟ್ಟರೂ ಅವರು ಮರಳಿ ಮಾರಿ ಬದುಕುತ್ತಾರೆ ಎಂದರು.

10 ಚಕ್ರದ ಹೆಣ್ಣುಮಗಳು ಯಾರು ಎಂದು ಕೇಳಿದರು ಚಂದ್ರಚೂಡ್​. ಇದಕ್ಕೆ ವೈಷ್ಣವಿ ನಾನೇ ಎಂದರು. ಆಗ ಮಾತನಾಡಿದ ಚಂದ್ರಚೂಡ್​, ನೀವು ಸಮಾಜಕ್ಕೆ ಒಳ್ಳೆಯದು ಮಾಡಬೇಕು. ದೇಶಕ್ಕಾಗಿ ದುಡಿಯಬೇಕು ಎಂದರು. ಆಗ ವೈಷ್ಣವಿ, ನನಗೆ ಮದುವೆ ಆಗಬೇಕು. ವಿವಾಹವಾಗಿ ದೇಶಸೇವೆ ಮಾಡಬಹುದೇ ಎಂದು ಕೇಳಿದರು. ನಿನಗೆ ಮದುವೆ ಆಗಲ್ಲ ಎಂದು ಚಂದ್ರಚೂಡ್​ ಕಡ್ಡಿ ಮುರಿದಂತೆ ಹೇಳಿದರು. ಆಗ ವೈಷ್ಣವಿ ನನಗೆ ಗಂಡ ಬೇಕು ಎಂದು ಹಠ ಹಿಡಿದರು. ಮದುವೆ ಮಾಡ್ಕೊಳ್ಳಮ್ಮ, ಯಾರು ಬೇಡ ಎಂದರು ಎಂದು ಚಂದ್ರಚೂಡ್​ ನಕ್ಕರು. ಇದನ್ನು ಕೇಳಿ ಮನೆ ಮಂದಿ ಎಲ್ಲರೂ ನಗೆ ಗಡಲಲ್ಲಿ ತೇಲಿದರು.

ಇದನ್ನೂ ಓದಿ:  ನಿಮ್ಮೇಲೆ ಕ್ರಶ್​ ಆಗಿದೆ; ವೈಷ್ಣವಿ ಎದುರು ಫೀಲಿಂಗ್ಸ್​ ಹೇಳಿಕೊಂಡ ರಘು!

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ