Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!
ವೈಷ್ಣವಿ ಗೌಡ

BBK8: ಸದಾ ಸೈಲೆಂಟ್​ ಆಗಿರುವ ನಟಿ ವೈಷ್ಣವಿ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅವರ ಒಂದು ಲವ್​ಸ್ಟೋರಿ ರಹಸ್ಯ ಬಯಲಾಗಿದೆ.

Madan Kumar

|

Mar 26, 2021 | 12:57 PM

ಕಿರುತೆರೆಯ ‘ಅಗ್ನಿಸಾಕ್ಷಿ’ ಸೀರಿಯಲ್​ ಮೂಲಕ ಸಿಕ್ಕಾಪಟ್ಟೆ ಫೇಮಸ್​ ಆದವರು ನಟಿ ವೈಷ್ಣವಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅವರು ಮಾಡಿದ ಸನ್ನಿಧಿ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಸದ್ಯ ವೈಷ್ಣವಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಸುತ್ತಿದ್ದಾರೆ. ವೈಷ್ಣವಿ ಮಾತನಾಡುವುದು ಕಮ್ಮಿ ಎಂಬ ಅಭಿಪ್ರಾಯ ಎಲ್ಲರಲ್ಲೂ ಇದೆ. ಆದರೆ ಈಗ ಅವರೊಂದು ಮುಖ್ಯವಾದ ವಿಚಾರದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಮ್ಮ ನಿಜಜೀವನದ ಲವ್​ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ಚಿಕ್ಕ ವಯಸ್ಸಿನಿಂದಲೂ ನನಗೆ ಲವ್​ ಮಾಡಬೇಕು, ರಿಲೇಷನ್​ಶಿಪ್​ನಲ್ಲಿ ಇರಬೇಕು ಎಂಬ ಆಸೆ ಇತ್ತು. ನನ್ನ ಸ್ನೇಹಿತೆಯರೆಲ್ಲ ರಿಲೇಷನ್​ಶಿಪ್​ನಲ್ಲಿ ಇದ್ದರು. ತಮಗೆ ಬಾಯ್​ಫ್ರೆಂಡ್​ ಇದಾನೆ ಅಂತ ಹೇಳಿಕೊಳ್ತಾ ಇದ್ದರು. ಆದರೆ ನಂಗೆ ಲವ್​ ಆಗಿರಲಿಲ್ಲ. ನನಗೇನು ಕಡಿಮೆ ಆಗಿದೆ? ನಾನು ಯಾಕೆ ಯಾವಾಗಲೂ ಸಿಂಗಲ್​ ಆಗಿ ಇರುತ್ತೇನೆ? ಈ ಪ್ರಶ್ನೆ ನನ್ನನ್ನು ಕಾಡುತ್ತಿತ್ತು’ ಎಂದು ತಮ್ಮ ಲವ್​ ಸ್ಟೋರಿ ಹೇಳಲು ಶುರು ಮಾಡಿದರು ವೈಷ್ಣವಿ.

‘ಒಂದು ರಿಲೇಷನ್​ಶಿಪ್​ ಕೂಡ ನನಗೆ ಆಗುತ್ತಿರಲಿಲ್ಲ. ಹಾಗಾಗಿ ಎಲ್ಲೇ ಹೋದರೂ ಕೂಡ ನಾನು ಹುಡುಕಾಟ ನಡೆಸುತ್ತಿದ್ದೆ. ಪ್ರತಿ ಬಾರಿ ಕಲ್ಲು ಹೊಡೆಯುತ್ತಿದ್ದೆ. ಆದರೆ ನನಗೆ ಯಾರೂ ಸಿಗುತ್ತಿರಲಿಲ್ಲ. ಒಮ್ಮೆ ಜಿಮ್​ಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗ ನನಗೆ ಇಷ್ಟ ಆದ. ಪರಿಚಯ ಆಯಿತು. ನೀವು ನಟಿನಾ ಎಂದು ಅವರು ಕೇಳಿದರು. ಹೌದು ಅಂತ ಹೇಳಿದೆ. ಅವತ್ತಿಂದ ಒಂದು ಕಿಡಿ ಹೊತ್ತಿಕೊಂಡಿತು. ಆದರೆ ಮುಂದುವರಿಯೋಕೆ ನನಗೆ ನಾಚಿಕೆ ಆಗುತ್ತಿತ್ತು’ ಎಂದು ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರ ಎದುರು ನಾಚುತ್ತಲೇ ಈ ವಿಚಾರ ಹೇಳಿಕೊಂಡಿದ್ದಾರೆ. ಮುಂದೇನಾಯಿತು ಎಂಬ ಕುತೂಹಲದಲ್ಲೇ ಎಲ್ಲರೂ ಕೇಳಿಸಿಕೊಳ್ಳುತ್ತಿದ್ದರು.

ಅವರು ಬಾಕ್ಸಿಂಗ್​​ ಕ್ಲಾಸ್​ಗೆ ಬರುತ್ತಿದ್ದರು, ನಾನು ಡ್ಯಾನ್ಸ್​ ಕ್ಲಾಸ್​ಗೆ ಬರುತ್ತಿದೆ. ಹಾಗಾಗಿ ಟೈಮಿಂಗ್​ ಮಿಸ್​ ಆಗುತ್ತಿತ್ತು. ಅವರು ಯಾಕೆ ಕಾಣಿಸುತ್ತಿಲ್ಲ ಎಂದು ಅವರ ಬಗ್ಗೆಯೇ ಆಲೋಚನೆ ಮಾಡುತ್ತ ಡ್ಯಾನ್ಸ್​ ಮಾಡುತ್ತಿದ್ದಾಗ ಒಮ್ಮೆ ಬ್ಯಾಲೆನ್ಸ್​ ತಪ್ಪಿ ಬಿದ್ದು ಬಿಟ್ಟೆ. ಆಮೇಲೆ ಹತ್ತು ದಿನ ಡಾಕ್ಟರ್​ ರೆಸ್ಟ್​ ತೆಗೆದುಕೊಳ್ಳಲು ಹೇಳಿದರು. ನಂತರ ಶೂಟಿಂಗ್​ ಬೇರೆ ಇತ್ತು. ಇನ್ನು 10 ದಿನ ಅವರನ್ನು ನೋಡೋಕೆ ಆಗಲ್ಲವಲ್ಲ ಅಂತ ಬೇಜಾರು ಆಯಿತು. ಅವರ ಹೆಸರು ಗೊತ್ತಿಲ್ಲ, ಜಾಸ್ತಿ ಮಾತನಾಡಿಸಿಲ್ಲ, ಸೋಶಿಯಲ್ ಮೀಡಿಯಾದಲ್ಲೂ ಫ್ರೆಂಡ್ಸ್​ ಆಗಿರಲಿಲ್ಲ’ ಎಂದು ವೈಷ್ಣವಿ ಹೇಳುತ್ತಿದ್ದಂತೆಯೇ ಎಲ್ಲರ ಕುತೂಹಲ ಇನ್ನಷ್ಟು ಕೆರಳಿತು.

‘10 ದಿನ ಆದಮೇಲೆ ರೆಸ್ಟ್​ ಮುಗಿಯಿತು. ಅವರು ಎಲ್ಲಿದ್ದಾರೆ ಅಂತ ಹುಡುಕುತ್ತಲೇ ಇದ್ದೆ. ಒಂದಿನ ಜಿಮ್​ ಮುಗಿಸಿಕೊಂಡು ಅಪ್ಪನ ಬೈಕ್​ನಲ್ಲಿ ಕುಳಿತು ಮನೆಗೆ ಹೋಗ್ತಾ ಇದ್ದೆ. ಅಲ್ಲೇ ದಾರಿಯಲ್ಲಿ ಆ ಹುಡುಗ ಕಾಣಿಸಿದ. ಮತ್ತೆ ಸ್ಪಾರ್ಕ್​ ಆಯಿತು. ಅಲ್ಲೇ ಅವನ ಪಕ್ಕಕ್ಕೆ ನೋಡಿದರೆ ಒಬ್ಬಳು ಹುಡುಗಿ ಇದ್ದಳು. ಅವರಿಬ್ಬರು ಫ್ರೆಂಡ್ಸ್​ ಆಗಿರಬಹುದು ಅಂದುಕೊಂಡೆ. ಇನ್ನೂ ಸ್ವಲ್ಪ ಗಮನಿಸಿ ನೋಡಿದರೆ ಅವರು ಕೈ ಕೈ ಹಿಡಿದುಕೊಂಡಿರುವುದು ಕಾಣಿಸಿತು. ಇಬ್ಬರೂ ಪರಸ್ಪರ ಕೈ ಉಜ್ಜಿಕೊಳ್ಳುತ್ತಿದ್ದರು. ಕೊನೇ ಬಾರಿ ಒಮ್ಮೆ ಹಿಂದೆ ತಿರುಗಿ ಟಾಟಾ ಮಾಡಿದೆ. ನಾನು ಅವರನ್ನು ನೋಡಿದ್ದು ಅದೇ ಲಾಸ್ಟ್​. ಈ ಘಟನೆ ಯಾರಿಗೂ ಗೊತ್ತಿರಲಿಲ್ಲ. ಇದೆಲ್ಲ ಕೇಳಿಸಿಕೊಂಡಮೇಲೆ ಅಮ್ಮ ಮತ್ತೆ ನನ್ನನ್ನು ಜಿಮ್​ಗೆ ಕಳಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ವೈಷ್ಣವಿ ನಗು ಚೆಲ್ಲಿದ್ದಾರೆ.

ಇದನ್ನೂ ಓದಿ: ವೈಷ್ಣವಿಯ ಬಟ್ಟೆ ಎಳೆದ ಶಮಂತ್​ ಬ್ರೋ ಗೌಡ! ಕಿಚ್ಚನ ಎದುರು ವೈಷ್ಣವಿ ಗಂಭೀರ ಆರೋಪ

ಹಾಗೆಲ್ಲಾ ಮುಟ್ಟಿದ್ರೆ ಕಚ್ಚಿ ಬಿಡ್ತೀನಿ; ವೈಷ್ಣವಿ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

Follow us on

Related Stories

Most Read Stories

Click on your DTH Provider to Add TV9 Kannada