Pogaru: ಟಿವಿಯಲ್ಲಿ ಶೀಘ್ರವೇ ಬರಲಿದೆ ‘ಪೊಗರು’! ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರಿಗೆ ಇಲ್ಲಿದೆ ಚಾನ್ಸ್
Dhruva Sarja: ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ ಎಂಬ ಕಾರಣಕ್ಕೆ ಸಾಕಷ್ಟು ವಿವಾದ ಕೂಡ ಆಗಿತ್ತು. ಆದರೂ ಸಹ ಎಲ್ಲರಿಗೂ ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ.
ಲಾಕ್ಡೌನ್ ನಂತರದ ಕಷ್ಟದ ದಿನಗಳಲ್ಲಿ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಲು ತುಂಬ ಕಷ್ಟವಾಯಿತು. ಆ ಸಂದರ್ಭದಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಕಲೆಕ್ಷನ್ ಮಾಡಿತು. ಆದರೆ ಕೊರೊನಾ ವೈರಸ್ ಹರಡುವ ಭೀತಿಯ ಕಾರಣದಿಂದ ಅನೇಕರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಹಿಂದೇಟು ಹಾಕಿದ್ದರು. ಈಗಲೂ ಕೆಲವು ಥಿಯೇಟರ್ಗಳಲ್ಲಿ ಪೊಗರು ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಾಗಲೇ ಈ ಚಿತ್ರದ ಕಿರುತೆರೆ ಪ್ರಸಾರ ಹಕ್ಕು ಮಾರಾಟವಾದ ಬಗ್ಗೆ ಸುದ್ದಿ ಕೇಳಿಬಂದಿದೆ.
ಕನ್ನಡದ ಖ್ಯಾತ ಮನರಂಜನಾ ವಾಹಿನಿ ‘ಉದಯ ಟಿವಿ’ಗೆ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಧೂಳೆಬ್ಬಿಸಿರುವ ಈ ಚಿತ್ರಕ್ಕೆ ಟಿವಿಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹಾಗಾಗಿ ಭಾರಿ ಮೊತ್ತಕ್ಕೆ ಚಿತ್ರವನ್ನು ಉದಯ ಟಿವಿ ಕೊಂಡುಕೊಂಡಿದೆ ಎಂಬ ಮಾಹಿತಿ ಕೇಳಿಬರುತ್ತಿದೆ…
ಹಾಗಾದರೆ, ಪೊಗರು ಚಿತ್ರ ಟಿವಿಯಲ್ಲಿ ಯಾವಾಗ ಪ್ರಸಾರ ಆಗಲಿದೆ? ಚಿತ್ರದ ಕಿರುತೆರೆ ಪ್ರಸಾರ ಹಕ್ಕನ್ನು ಖರೀದಿಸಿರುವ ಬಗ್ಗೆ ಸದ್ಯಕ್ಕಂತೂ ವಾಹಿನಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಾಗಿ ಚಿತ್ರದ ಪ್ರಸಾರ ದಿನಾಂಕದ ಬಗ್ಗೆಯೂ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಶೀಘ್ರದಲ್ಲೇ ಯುಗಾದಿ ಹಬ್ಬ ಬರುತ್ತಿದೆ. ಇಂಥ ವಿಶೇಷ ಸಂದರ್ಭದಲ್ಲಿ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವ ಪರಿಪಾಠವನ್ನು ಉದಯ ವಾಹಿನಿ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಹಾಗಾಗಿ, ಯುಗಾದಿ ಹಬ್ಬದ ಪ್ರಯಕ್ತ ಪೊಗರು ಪ್ರಸಾರ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ…
ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ ಎಂಬ ಕಾರಣಕ್ಕೆ ಸಾಕಷ್ಟು ವಿವಾದ ಕೂಡ ಆಗಿತ್ತು. ಆದರೂ ಕೂಡ ಎಲ್ಲರಿಗೂ ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ. ಕೊರೊನಾ ವೈರಸ್ ಹರಡವ ಭೀತಿಯ ಕಾರಣಕ್ಕೆ ಚಿತ್ರಮಂದಿರಕ್ಕೆ ಕಾಲಿಡಲು ಅನೇಕರು ಸಿದ್ಧವಿರಲಿಲ್ಲ. ಆದರೆ ಈಗ ಕಿರುತೆರೆಯಲ್ಲಿ ಪ್ರಸಾರ ಆಗಲಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಈ ಚಿತ್ರ ತಲುಪಲಿದೆ.
ಇದನ್ನೂ ಓದಿ: ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ
‘ಪೊಗರು’ ವಿವಾದ: ಟ್ವೀಟ್ ಮೂಲಕ ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ
Published On - 3:42 pm, Fri, 26 March 21