ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ

Pogaru Movie Press Meet: ಈ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ಅದನ್ನು ಮುಂದುವರೆಸದೇ ಇಲ್ಲಿಗೇ ಮರೆತು ಬಿಡಿ ಅಂತ ಕೇಳಿಕೊಳ್ಳುತ್ತೇವೆ. ಅಂಗೈ ಅಗಲ ಮಾರುಕಟ್ಟೆಯಲ್ಲಿ ಗೆಲ್ತಿದ್ದೀವಿ. ನಿರ್ಮಾಪಕರು ಉಳಿಯಬೇಕು, ಚಿತ್ರವನ್ನ ಪ್ರೇಕ್ಷಕ ಮಹಾಶಯರು ಬೆಂಬಲಿಸಬೇಕು, ಹರಸಬೇಕು.

ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ
ಧ್ರುವ ಸರ್ಜಾ
Follow us
Skanda
|

Updated on:Feb 25, 2021 | 2:12 PM

ಒಂದು ಸಿನಿಮಾದ ಉದ್ದೇಶವೇ ಜನರನ್ನು ರಂಜಿಸುವುದಾಗಿರುತ್ತದೆ. ಅಂತಹದ್ದರಲ್ಲಿ ಅದು ಯಾರಿಗಾದರು ನೋವುಂಟು ಮಾಡುತ್ತದೆ ಎಂದಾದಲ್ಲಿ ಅದನ್ನು ಸರಿಮಾಡಿಕೊಳ್ಳಲೇಬೇಕು. ನಾವು ನಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ.ಚಿತ್ರದಲ್ಲಿ ನನ್ನ ಪಾತ್ರವೇ ಅತ್ಯಂತ ಕ್ರೂರವಾಗಿದ್ದು, ಚಿತ್ರವನ್ನು ದಾನವರು ಮತ್ತು ಮಾನವರು ಎಂಬ ಪರಿಕಲ್ಪನೆ ಇಟ್ಟುಕೊಂಡು ಮಾಡಿದ್ದೇವೆ. ಹೀಗಾಗಿ ನನ್ನ ಪಾತ್ರ ಕ್ರೌರ್ಯತೆ ಮೆರೆಯುವಂತೆ ಇತ್ತು. ಆದರೆ, ಇದು ಯಾವುದೋ ಒಂದು ಸಮುದಾಯಕ್ಕೆ ನೋವುಂಟು ಮಾಡಿದೆ ಅಂತಾದರೆ ನಾವು ಅದನ್ನು ತಿದ್ದುಕೊಳ್ಳಲೇಬೇಕು. ಈ ಕಾರಣಕ್ಕಾಗಿ ಚಿತ್ರದ ಕೆಲವು ಸೀನ್​ಗಳಿಗೆ ಕತ್ತರಿ ಹಾಕಲಾಗಿದೆ. ನಾಳೆ ಅಥವಾ ನಾಡಿದ್ದು ನಿಮಗೆ ಪರಿಷ್ಕೃತಗೊಂಡ ಚಿತ್ರ ಸಿಗಲಿದ್ದು ಮೊದಲು ಇದ್ದುದ್ದಕ್ಕಿಂತಲೂ ವೇಗವಾಗಿ ಸಿನಿಮಾ ಓಡುತ್ತೆ ಹಾಗೂ ಇದು ನಿಮಗೂ ಇಷ್ಟವಾಗಲಿದೆ ಎಂಬ ನಂಬಿಕೆ ನನ್ನದು ಎಂದು ಧ್ರುವ ಸರ್ಜಾ ಪೊಗರು ಚಿತ್ರದ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಭಿಪ್ರಾಯ ತಿಳಿಸಿದರು.

ಪೊಗರು ಬಗ್ಗೆ ಸಾ.ರಾ.ಗೋವಿಂದು ಮಾತನಾಡಿ ಕೊವಿಡ್​ ನಂತರ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಬಂದ ಚಿತ್ರವಿದು. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಶೇ.50ರಷ್ಟು ಅನುಮತಿ ಮಾತ್ರ ಇತ್ತು. ಆಗ ನಾವು ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟೆವು. ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲರೂ ಒತ್ತಡದಲ್ಲಿದ್ದರು. ಆದರೂ ಕೊನೆಗೆ ಅನುಮತಿ ಸಿಕ್ಕಿತು. ಖುಷಿಯೆಂದರೆ ಅದರ ನಂತರ ಬಿಡುಗಡೆಯಾದ ಪೊಗರು ಮತ್ತು ಇನ್​ಸ್ಪೆಕ್ಟರ್​ ವಿಕ್ರಂ ಎರಡೂ ಯಶಸ್ಸು ಕಂಡು ಆಶಾದಾಯಕ ಭಾವನೆ ಮೂಡಿಸಿವೆ. ಪೊಗರು ಬಿಡುಗಡೆಯಾದಾಗ ಮೊದಲು ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರಮಂದಿರಗಳ ಕೊರತೆ ಉಂಟಾಯಿತು. ಅದನ್ನ ನೀಗಿಸಿಕೊಂಡು ಮುಂದಡಿ ಇಡುವಷ್ಟರಲ್ಲಿ ಬ್ರಾಹ್ಮಣ ಸಮುದಾಯದಿಂದ ಚಿತ್ರದ ಕೆಲ ತುಣುಕುಗಳ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಈ ವಿರೋಧ ಬರುತ್ತಿದ್ದಂತೆಯೇ ನಂದಕಿಶೋರ್ ಹಾಗೂ ಗಂಗಾಧರ್​ ಇಬ್ಬರೂ ಬಹಳ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದರು. ಒಂದು ಕಡೆ ಹಲವು ವರ್ಷ ಶ್ರಮ ಹಾಕಿ ಮಾಡಿದ ಚಿತ್ರ, ಇನ್ನೊಂದೆಡೆ ಒಂದು ಸಮುದಾಯಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ಎರಡೂ ಹೆಗಲ ಮೇಲಿತ್ತು. ಆಗ ದೃಢ ನಿರ್ಧಾರ ತೆಗೆದುಕೊಂಡ ನಂದಕಿಶೋರ್​ ಬ್ರಾಹ್ಮಣ ಸಮುದಾಯದಿಂದ ಪೂರ್ಣ ವಿವರ ತೆಗೆದುಕೊಂಡು ಪರಿಹಾರ ಒದಗಿಸಲು ಮುಂದಾದರು. ಅದರ ಪರಿಣಾಮ ಈಗ ಚಿತ್ರದಿಂದ ಸುಮಾರು 14 ತುಣುಕುಗಳನ್ನು ತೆಗೆಯಲಾಗಿದ್ದು, ಪರಿಷ್ಕೃತಗೊಂಡ ಪೊಗರು ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ ಎಂದು ಹೇಳಿದರು.

ಚಿತ್ರರಂಗದಲ್ಲಿ ಒಗ್ಗಟ್ಟು ಅತ್ಯಗತ್ಯ ಎನ್ನುವುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆ ಪೊಗರು ನಿರ್ಮಾಪಕರು ತೊಂದರೆಗೆ ಸಿಲುಕಿದಾಗ ಉಳಿದವರು ಕೂಡ ಬೆಂಬಲಕ್ಕೆ ನಿಂತರು. ಜೊತೆಗೆ, ಬ್ರಾಹ್ಮಣ ಸಮುದಾಯವೂ ತನಗಾದ ಅನ್ಯಾಯವನ್ನು ಹೊರ ಹಾಕಿದ ನಂತರ ತೀರಾ ಕಟ್ಟುನಿಟ್ಟಾಗಿ ಹಠ ಸಾಧಿಸದೇ ಸಹಾಯಕ್ಕೆ ನಿಂತಿದ್ದೂ ಮೆಚ್ಚುವಂತಹದ್ದು. ಕನ್ನಡಿಗರು ತಾಳ್ಮೆಗೆ, ಸಹೃದಯತೆಗೆ ಹೆಸರಾದವರು ಹಾಗಾಗಿ ನಾವು ಎಲ್ಲರನ್ನೂ ಗೌರವಿಸಲು ಇಷ್ಟಪಡುತ್ತೇವೆ. ಈ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ಅದನ್ನು ಮುಂದುವರೆಸದೇ ಇಲ್ಲಿಗೇ ಮರೆತು ಬಿಡಿ ಅಂತ ಕೇಳಿಕೊಳ್ಳುತ್ತೇವೆ. ಅಂಗೈ ಅಗಲ ಮಾರುಕಟ್ಟೆಯಲ್ಲಿ ಗೆಲ್ತಿದ್ದೀವಿ. ನಿರ್ಮಾಪಕರು ಉಳಿಯಬೇಕು, ಚಿತ್ರವನ್ನ ಪ್ರೇಕ್ಷಕ ಮಹಾಶಯರು ಬೆಂಬಲಿಸಬೇಕು, ಹರಸಬೇಕು ಎಂದು ಕೇಳಿಕೊಂಡರು.

ಚಿತ್ರ ನಟಿ ತಾರಾ ಮಾತನಾಡಿ, ನಾನು ಒಂದೇ ಸೀನ್​ನಲ್ಲಿ ಅಭಿನಯಿಸಿದ್ದರೂ ಅದಕ್ಕೆ ಗಂಗಾಧರ್ ಸಂಭಾವನೆ ನೀಡಿದ್ದಾರೆ ಹೀಗಾಗಿ ಆ ಅನ್ನದ ಋಣಕ್ಕೆ ಇಲ್ಲಿಗೆ ಬಂದಿದ್ದೇನೆ. ಚಿತ್ರವನ್ನು ಬೆಂಬಲಿಸಿದ ಪ್ರೇಕ್ಷಕರು, ವಿತರಕರು, ಚಿತ್ರರಂಗ, ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಚಿತ್ರರಂಗಕ್ಕೆ ಅದರದೇ ಆದ ಹಲವು ಸಮಸ್ಯೆಗಳಿವೆ ಅದಕ್ಕೆ ಸ್ಪಂದಿಸುವುದು ಅತಿಮುಖ್ಯ. ಇಲ್ಲಿ ವೈಯಕ್ತಿಕ ಸಮಸ್ಯೆಗಳು ಚಿತ್ರರಂಗದ ಸಮಸ್ಯೆಗಳಾಗಬಾರದು ಎಂದು ಅಭಿಪ್ರಾಯಪಟ್ಟರು.

ಕೊರೊನಾ ಭಯದ ಮಧ್ಯೆಯೂ ಪೊಗರು ಚಿತ್ರವನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದ್ದು ನಮ್ಮ ಪ್ರೇಕ್ಷಕರು ಅವರಿಗೆ ಧನ್ಯವಾದಗಳು ಎಂದು ಚಿಕ್ಕಣ್ಣ ಸಂತಸ ವ್ಯಕ್ತಪಡಿಸಿದರು. ಇದೇವೇಳೆ ಜಾನ್​ ಮಾತನಾಡಿ, ನನ್ನನ್ನು ಚಿತ್ರದ ಓರ್ವ ಖಳನಾಯಕನಾಗಿ ಆರಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಇಲ್ಲಿ ಚಿತ್ರಕ್ಕೆ ಅಭಿಮಾನಿಗಳು ಬೆಂಬಲ ಸೂಚಿಸುವುದನ್ನು ನೋಡಿದರೆ ಭಾರೀ ಸಂತಸವಾಗುತ್ತದೆ. ಹೀಗಾಗಿಯೇ ನಾನು ಭಾರತದ ದತ್ತು ಪುತ್ರ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದರು.

ಕೊನೆಯದಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ನಂದಕಿಶೋರ್​, ತಪ್ಪು ಮಾಡಿದಾಗ ತಿದ್ದಿ ಮತ್ತೆ ಕ್ಷಮಿಸಿ ಗೆಲ್ಲಿಸುವ ಕನ್ನಡಿಗರ ಗುಣ ದೊಡ್ಡದು. ಮುಂದೆಯೂ ನಮಗೆ ಹೀಗೇ ಬೆಂಬಲ ನೀಡುತ್ತಿರಿ. ಮುಂದೆಯೂ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಲು ಪ್ರಯತ್ನಿಸುತ್ತೇವೆ. ನಿಮ್ಮ ಆಶೀರ್ವಾದ ಸದಾ ಜೊತೆಗಿರಲಿ ಎಂದು ಕೇಳಿಕೊಂಡರು.

ಇದನ್ನೂ ಓದಿ: ‘ಪೊಗರು’ ವಿವಾದ: ಟ್ವೀಟ್ ಮೂಲಕ ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ

‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ: ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ

Published On - 1:40 pm, Thu, 25 February 21

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ