Raw Granules: ಕೊರೊನಾ ಕಾಲದಲ್ಲಿ ಮತ್ತಷ್ಟು ಪ್ರಚಲಿತಕ್ಕೆ ಬಂದ ಆನ್ಲೈನ್ ಮಾರುಕಟ್ಟೆಯನ್ನೇ ಮುಖ್ಯ ವೇದಿಕೆಯಾಗಿಸಿಕೊಂಡು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಂಸಗಾರು ಗ್ರಾಮದ ಕಾರ್ತಿಕ್ ಹಾಗೂ ತಲವಾಟ ಗ್ರಾಮದ ಪ್ರಶಾಂತ್ ಎಂಬುವವರು ಪಾರದರ್ಶಕ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿ ರೈತರಿಗೆ ನ್ಯಾಯಯುತ ಲಾಭಾಂಶ ದೊರಕಿಸಿಕೊಡುವ ಪ್ರಯತ್ನ ಆರಂಭಿಸಿದ್ದಾರೆ.
ಗುಂಪಿನಲ್ಲಿದ್ದ ಆನೆಗಳು ತಮ್ಮ ಮರಿಗಳ ರಕ್ಷಣೆಗೆ ಎಷ್ಟು ಮಹತ್ವ ನೀಡಿದ್ದವೋ ಚೀನಾ ಸರ್ಕಾರ ಕೂಡಾ ಇವುಗಳ ಇಡೀ ಗುಂಪಿಗೆ ಒಂದಿನಿತೂ ಹಾನಿಯಾಗಬಾರದು, ಅವುಗಳ ಪ್ರಯಾಣಕ್ಕೆ ಅಡ್ಡಿಯಾಗಬಾರದು ಎಂದು ಮುಂಜಾಗ್ರತೆ ವಹಿಸಿ ಎಲ್ಲರ ಗಮನ ಸೆಳೆದಿದೆ. ಇವುಗಳಿಗೆ ರಸ್ತೆ ದಾಟುವಾಗ ರಕ್ಷಣೆ ನೀಡಿದ್ದರಿಂದ ಹಿಡಿದು ಯಾವ ಗದ್ದೆಗೆ ನುಗ್ಗಿ ಧವಸ, ಧಾನ್ಯಗಳನ್ನು ತಿಂದರೂ ತುಟಿಕ್ ಪಿಟಿಕ್ ಎನ್ನದೇ ಅವಕಾಶ ಕ
ಒಂದೆರೆಡು ಬೈಕ್ ಸವರಾರು ತಮ್ಮ ಪಾಡಿಗೆ ತಾವು ಆಕೃತಿಯ ಬಳಿಯೇ ಸಾಗಿ ಹೋದರೂ ಬೆಚ್ಚಿಬೀಳದೇ ಯಾವುದೇ ಪ್ರತಿಕ್ರಿಯೆ ತೋರದ ಅದು, ಕೆಲ ಕ್ಷಣಗಳ ಬಳಿಕ ಕ್ಯಾಮೆರಾದತ್ತ ತಿರುಗಿ ನೋಡಿದೆ. ವಾಹನಗಳ ಬೆಳಕು ಬೀಳುತ್ತಿರುವಂತೆಯೇ ತಿರುಗಿ ನೋಡಿದ ಆಕೃತಿ ಕ್ಯಾಮೆರಾವನ್ನೇ ದಿಟ್ಟಿಸಿದೆ. ಆಗ ಕೆಲ ಸವಾರರು ಮುಂದೆ ಚಲಿಸಲು ಹಿಂದೇಟು ಹಾಕಿ ಗಲಿಬಿಗೊಂಡಿದ್ದಾರೆ.
ಶಿಕ್ಷಣ ತಜ್ಞರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮೊರೆ ಹೋಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಕ್ತ ರೀತಿಯಲ್ಲಿ ಪರೀಕ್ಷೆ ಆಯೋಜನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಶಿಕ್ಷಣ ಇಲಾಖೆಗೆ ತಜ್ಞರು ನೀಡಿರುವ ವಿಸ್ತೃತ ಮಾಹಿತಿ ಟಿವಿ9ಗೆ ಲಭ್ಯವಾಗಿದ್ದು, ಪರೀಕ್ಷೆ ನಡೆಸಲು ಪ್ರಮುಖ ಎರಡು ಮಾದರಿಯಲ್ಲಿ ಶಿಕ್ಷಣ ತಜ್ಞರು ಸಲಹೆ ನೀಡಿರುವುದು ಗೊತ್ಥಾಗಿದೆ.
ವೈದ್ಯರ ಮೇಲೆ ಮೃತ ವ್ಯಕ್ತಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈದ್ಯರಿಗೆ ಕಾಲಿನಿಂದ ಒದ್ದು, ಕೈಗೆ ಸಿಕ್ಕ ವಸ್ತುಗಳಿಂದೆಲ್ಲಾ ಥಳಿಸಿ ಎಳೆದಾಡಲಾಗಿದ್ದು, ಆಮ್ಲಜನಕದ ಕೊರತೆಯಿಂದ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ.
Karnataka State Board Exams: ವೃತ್ತಿಪರ ಕೋರ್ಸ್ಗಳಿಗೆ ಪಿಯು ಫಲಿತಾಂಶ ಪರಿಗಣಿಸಲಾಗುವುದಿಲ್ಲ. ಆಯಾ ವೃತ್ತಿಪರ ಕೋರ್ಸ್ಗಳಿಗೆ ಪ್ರತ್ಯೇಕ ಪರೀಕ್ಷೆಯನ್ನೇ ಬರೆಯಬೇಕಿದೆ. ಹೀಗಾಗಿ ಬೋರ್ಡ್ ಪರೀಕ್ಷೆ ಅವಶ್ಯಕತೆ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಪರೀಕ್ಷೆ ಮಾಡಬೇಕು ಎನ್ನುವ ನಿರ್ಧಾರವನ್ನೂ ಕೈ ಬಿಡಿ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸಲಹೆ ನೀಡಿದ್ದಾರೆ.
ದೇಶದಲ್ಲಿರುವ ಸರಿಸುಮಾರು 12 ಲಕ್ಷ ವೈದ್ಯರ ಪೈಕಿ ಐಎಂಎ ಸದಸ್ಯತ್ವ ಹೊಂದಿರುವ 3.5ಲಕ್ಷ ವೈದ್ಯರ ಮಾಹಿತಿ ಮಾತ್ರ ಇದರಲ್ಲಿ ಸೇರಿದ್ದು, ಐಎಂಎ ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ ಇನ್ನೂ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ.
Weather Today: ಈಗ ಅರಬ್ಬಿ ಸಮುದ್ರದ ನಡುವಲ್ಲಿ ಮೇಲ್ಮೈ ಸುಳಿಗಾಳಿ ತೀವ್ರವಾಗಿರುವುದರಿಂದ ಕರ್ನಾಟಕದ ಕೆಲ ಭಾಗಗಳಲ್ಲಿ ನಿನ್ನೆಯಿಂದ ಮತ್ತೆ ಮಳೆಯಾಗುತ್ತಿದೆ. ಹವಾಮಾನ ವರದಿಗಳ ಪ್ರಕಾರ ಜೂನ್ 4ರ ತನಕವೂ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.
ಗ್ರಾಮಗಳಿಗೆ ತೆರಳಿ ನಾಟಕ, ರಾಮಾಯಣ, ಮಹಾಭಾರತ ಸೇರಿದಂತೆ ವಿವಿಧ ಪ್ರಸಂಗಗಳ ಪ್ರದರ್ಶನ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಈಗ ಲಾಕ್ಡೌನ್ನಿಂದ ಹಣ ಹೊಂದಿಸಲಾಗುತ್ತಿಲ್ಲ. ದಯವಿಟ್ಟು ನೆರವಾಗಿ ಎಂದು ಮನವಿ ಮಾಡಿದ್ದಾರೆ.
Ramesh Pokhriyal: ಭಾರತ ಸರ್ಕಾರದ ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೊವಿಡ್ ನಂತರದ ಸಮಸ್ಯೆಗಳ ಕಾರಣಕ್ಕಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬೆನ್ನಲ್ಲೇ ಕೆಲ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದೆ.