Rashmika Mandanna: ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ
Rashmika Mandanna: ಇತ್ತೀಚೆಗೆ ಹೈದಾರಾಬಾದ್ನಲ್ಲಿ ಮನೆ ಖರೀದಿಸಿದ್ದ ರಶ್ಮಿಕಾ ಮಂದಣ್ಣ ಈಗ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ.
ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಅಷ್ಟೇ ಅಲ್ಲ, ಈಗ ಅವರು ಬಾಲಿವುಡ್ಗೂ ಕಾಲಿಟ್ಟಿದ್ದು, ಅಲ್ಲಿಯೂ ಧೂಳೆಬ್ಬಿಸಲು ರೆಡಿ ಆಗಿದ್ದಾರೆ. ರಶ್ಮಿಕಾ ಶೂಟಿಂಗ್ಗಾಗಿ ಟಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ಬಹುತೇಕ ಸಮಯವನ್ನು ಹೈದರಾಬಾದ್ನಲ್ಲೇ ಕಳೆಯುತ್ತಿದ್ದಾರೆ. ಇದಕ್ಕಾಗಿಯೇ ಅವರು ಹೈದರಾಬಾದ್ನಲ್ಲಿ ಮನೆ ಒಂದನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಅವರು ಐಷಾರಾಮಿ ಎಸ್ಯುವಿ ಖರೀದಿಸಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಅವರು ಮತ್ತೆ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮುಂಬೈನಲ್ಲಿ ಮನೆ ಖರೀದಿಸಿದ್ದು!
ಹೌದು, ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ. ಮುಂಬೈಗೆ ತೆರಳಿದಾಗ ಅವರು ಸಾಮಾನ್ಯವಾಗಿ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ, ಈಗ ಅವರು ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಂಜು ಚಿತ್ರಕ್ಕಾಗಿ ಅವರು ಮುಂಬೈನಲ್ಲಿ ನೆಲಸಬೇಕಾಗಿ ಬರುತ್ತದೆ. ಹೀಗಾಗಿ, ರಶ್ಮಿಕಾ ಮನೆ ಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಬಾಲಿವುಡ್ಗೆ ಕಾಲಿಟ್ಟ ನಂತರ ಬಹುತೇಕ ನಟ-ನಟಿಯರು ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸುವುದು ವಾಡಿಕೆ. ಈಗ ರಶ್ಮಿಕಾ ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನವೇ ಅವರು ಮನೆ ಖರೀದಿಸಿದ್ದು ವಿಶೇಷ. ಮಿಷನ್ ಮಜ್ನು ಚಿತ್ರಕ್ಕಾಗಿ ರಶ್ಮಿಕಾ ಹಿಂದಿ ಕಲಿಯುತ್ತಿದ್ದಾರೆ ಎನ್ನಲಾಗಿದೆ. ಮಿಷನ್ ಮಜ್ನು ನಂತರ ಡೆಡ್ಲಿ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆ ರಶ್ಮಿಕಾ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಎಕ್ಸೈಟ್ ಆಗಿದ್ದಾರಂತೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ‘ಪೊಗರು’, ಅವರು ಮಾಡಿದ ತಪ್ಪನ್ನು ಕನ್ನಡಿಗರು ಕ್ಷಮಿಸ್ತಾರಾ?
Published On - 3:42 pm, Thu, 25 February 21