D Boss Darshan: ಜಮೀರ್​ ಅಹ್ಮದ್​ ಖಾನ್​ ಭವ್ಯ ಬಂಗಲೆಗೆ ಭೇಟಿ ನೀಡಿದ ಡಿ ಬಾಸ್​​ ದರ್ಶನ್​

B Z Zameer Ahmed Khan: ತಮ್ಮ ಹೊಸ ಸಿನಿಮಾ ರಾಬರ್ಟ್​ ಬಿಡುಗಡೆ ಸಿದ್ಧತೆಯಲ್ಲಿ ವ್ಯಸ್ತರಾಗಿರುವ ದರ್ಶನ್​ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿರುವ ಜಮೀರ್ ಅವರ ನೂತನ ಬಂಗಲೆಗೆ ಭೇಟಿ ನೀಡಿರುವುದು ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ.

D Boss Darshan: ಜಮೀರ್​ ಅಹ್ಮದ್​ ಖಾನ್​ ಭವ್ಯ ಬಂಗಲೆಗೆ ಭೇಟಿ ನೀಡಿದ ಡಿ ಬಾಸ್​​ ದರ್ಶನ್​
ದರ್ಶನ್​ ಜೊತೆಗೆ ಜಮೀರ್​ ಅಹ್ಮದ್​ ಕುಟುಂಬಸ್ಥರು
Follow us
Skanda
| Updated By: Lakshmi Hegde

Updated on: Feb 25, 2021 | 4:08 PM

ಬೆಂಗಳೂರು: ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್ (B Z Zameer Ahmed Khan)​ ಅವರ ಭವ್ಯ ಬಂಗಲೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan)​ ಭೇಟಿ ಕೊಟ್ಟಿದ್ದಾರೆ. ಈ ಬಗ್ಗೆ ಇಂದು ತಮ್ಮ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ದರ್ಶನ್ ಅವರ ಜೊತೆಗೆ ಇರುವ ಫೋಟೋ ಹಂಚಿಕೊಂಡಿರುವ ಜಮೀರ್ ಅಹ್ಮದ್​ ಖಾನ್​ ಸಂತಸ ವ್ಯಕ್ತಪಡಿಸಿದ್ದಾರೆ. ನಟ ಮತ್ತು ನಿರ್ಮಾಪಕ ದರ್ಶನ್​ ನಮ್ಮ ಮನೆಗೆ ಆಗಮಿಸಿರುವುದು ಅತ್ಯಂತ ಸಂತೋಷ ನೀಡಿದೆ ಎಂದು ಹೇಳಿಕೊಂಡಿರುವ ಜಮೀರ್​ ಹತ್ತಕ್ಕೂ ಹೆಚ್ಚು ಫೋಟೋ ಹಂಚಿಕೊಂಡಿದ್ದಾರೆ.

ತಮ್ಮ ಹೊಸ ಸಿನಿಮಾ ರಾಬರ್ಟ್​ ಬಿಡುಗಡೆ ಸಿದ್ಧತೆಯಲ್ಲಿ ವ್ಯಸ್ತರಾಗಿರುವ ದರ್ಶನ್​ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿರುವ ಜಮೀರ್ ಅವರ ನೂತನ ಬಂಗಲೆಗೆ ಭೇಟಿ ನೀಡಿರುವುದು ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ. ದರ್ಶನ್​ ಭೇಟಿಯ ವೇಳೆ ಜಮೀರ್​ ಅಹ್ಮದ್ ಪುತ್ರ ಝೈದ್ ಖಾನ್, ಜಮೀರ್​ ಅವರ ಪುತ್ರಿ ಹಾಗೂ ಅಳಿಯ​ ಕೂಡ ಉಪಸ್ಥಿತರಿದ್ದರು. ಇದೀಗ ಹೊಸದಾಗಿ ಚಂದನವನಕ್ಕೆ ಕಾಲಿಡುತ್ತಿರುವ ಝೈದ್​ ಖಾನ್​, ಬನಾರಸ್​ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು, ಬೆಲ್​ ಬಾಟಂ ಸಿನಿಮಾಗಳ ನಿರ್ದೇಶಕ ಜಯತೀರ್ಥ ಅವರ ನೇತೃತ್ವದಲ್ಲಿ ಬನಾರಸ್​ ಸಿನಿಮಾ ಮೂಡಿಬರುತ್ತಿದ್ದು, ಈ ಸಿನಿಮಾದ ಮೂಲಕ ಜಮೀರ್ ಪುತ್ರ ಸ್ಯಾಂಡಲ್​ವುಡ್​ಗೆ ಹೀರೋ ಆಗಿ ಪ್ರವೇಶ ನೀಡುತ್ತಿದ್ದಾರೆ.

ತಮ್ಮ ಮಗ ಸಿನಿರಂಗಕ್ಕೆ ಪ್ರವೇಶ ಮಾಡುತ್ತಿರುವ ಕಾರಣ ಜಮೀರ್ ಅಹ್ಮದ್ ಖಾನ್​ ಚಿತ್ರರಂಗದವರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕುಟುಂಬದೊಂದಿಗೂ ಜಮೀರ್ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸದ್ಯಕ್ಕೆ ದರ್ಶನ್​ ಅವರ ಭೇಟಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಜಮೀರ್​ ಅಹ್ಮದ್​ ಹಂಚಿಕೊಂಡ ಫೋಟೋಗಳು ಕೊಂಚ ಅಚ್ಚರಿಯನ್ನೂ ಮೂಡಿಸಿವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಈ ಫೋಟೋಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:

ಉತ್ತರ ಪ್ರದೇಶದಲ್ಲಿ ರಾಬರ್ಟ್​ ಶೂಟಿಂಗ್​ಗೆ ಹೋದಾಗ ನನ್ನನ್ನು ಸ್ವಾಗತಿಸೋಕೆ ಗನ್​ಮೆನ್​ಗಳು ಬಂದಿದ್ರು; ದರ್ಶನ್​

ಇನ್ನೆಂದೂ ಇಂಥ ದಿನ ಬರದಿರಲಿ: ಟಿವಿ9 ಸಂದರ್ಶನದಲ್ಲಿ ದರ್ಶನ್​ ಕ್ಷಮೆಯಾಚನೆಗೆ ಜಗ್ಗೇಶ್ ಪ್ರತಿಕ್ರಿಯೆ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?