ಇನ್ನೆಂದೂ ಇಂಥ ದಿನ ಬರದಿರಲಿ: ಟಿವಿ9 ಸಂದರ್ಶನದಲ್ಲಿ ದರ್ಶನ್​ ಕ್ಷಮೆಯಾಚನೆಗೆ ಜಗ್ಗೇಶ್ ಪ್ರತಿಕ್ರಿಯೆ

ಇನ್ನೆಂದೂ ಇಂಥ ದಿನ ಬರದಿರಲಿ: ಟಿವಿ9 ಸಂದರ್ಶನದಲ್ಲಿ ದರ್ಶನ್​ ಕ್ಷಮೆಯಾಚನೆಗೆ ಜಗ್ಗೇಶ್ ಪ್ರತಿಕ್ರಿಯೆ
ನಟ ಜಗ್ಗೇಶ್

ಟಿವಿ9 ಕನ್ನಡ ಸಂದರ್ಶನದಲ್ಲಿ ಮಾತನಾಡಿದ್ದ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ಅವರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.

Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 24, 2021 | 8:03 PM


ಆಡಿಯೋ ಕ್ಲಿಪ್​ನಿಂದ ಜಗ್ಗೇಶ್​ ಹಾಗೂ ದರ್ಶನ್​ ಅಭಿಮಾನಿಗಳ ನಡುವೆ ಹೊತ್ತುಕೊಂಡಿದ್ದ ಬೆಂಕಿ ಕೊನೆಗೂ ತಣ್ಣಗಾಗಿದೆ. ಜಗ್ಗೇಶ್​​ ಸೆಟ್​ಗೆ ಬಂದು ದರ್ಶನ್​ ಅಭಿಮಾನಿಗಳು ಹಾವಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿ ಚಾಲೆಂಜಿಂಗ್​ ಸ್ಟಾರ್​ ಕ್ಷಮೆ ಕೇಳಿದ್ದಾರೆ. ಈ ವಿಚಾರವನ್ನು ಟ್ವೀಟ್​ ಮಾಡಿರುವ ಜಗ್ಗೇಶ್​, ಇನ್ನೆಂದೂ ಇಂಥ ದಿನ ಬರದಿರಲಿ ಎಂದು ಹೇಳಿದ್ದಾರೆ.

ಟಿವಿ9 ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು ಎಂದು ಹೇಳಿದ್ದರು.

ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು. ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ರೆ ನಮ್ಮ ಬಗ್ಗೆ ತಾನೇ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ. ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಜಗ್ಗೇಶ್​, ‘ಸಮಯ ಸಂದರ್ಭ ವಿಷಗಳಿಗೆಯಿಂದ ಪ್ರೀತಿ-ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ ಆಯಿತು. ವೈಶಾಲ್ಯತೆ ಚಿಂತನೆಯ ಹೃದಯ ಇದ್ದಾಗ, ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ. ಕನ್ನಡದ ಮನೆಗಳಿಗೆ ಧನ್ಯವಾದ. ಮಾಧ್ಯಮಗಳಿಗೆ ಧನ್ಯವಾದ. ಇನ್ನೆಂದೂ ಇಂಥ ದಿನ ಬರದಿರಲಿ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಟ್ವೀಟ್ ಇಲ್ಲಿದೆ

ಇದನ್ನೂ ಓದಿ: Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Follow us on

Most Read Stories

Click on your DTH Provider to Add TV9 Kannada