Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Darshan Interview | 40 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ನಟನಿಗೆ ಈ ರೀತಿ ಮಾಡಿದ್ದು ಖಂಡನೀಯ ಎಂದು ಜಗ್ಗೆಶ್​ ಅಭಿಮಾನಿಗಳು ಹೇಳಿದ್ದರು. ಈ ವಿಚಾರವಾಗಿ ದರ್ಶನ್​ ಮಾತನಾಡಿದ್ದಾರೆ.

Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​
ದರ್ಶನ್​-ಜಗ್ಗೇಶ್
Follow us
|

Updated on:Feb 24, 2021 | 8:48 PM

ನವರಸ ನಾಯಕ ಜಗ್ಗೇಶ್ ಅವರು ಮೈಸೂರಿನಲ್ಲಿ ತೋತಾಪುರಿ ಶೂಟಿಂಗ್​​ಗೆ ತೆರಳಿದ್ದ ವೇಳೆ ದರ್ಶನ್​ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಈ ಘಟನೆ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ದರ್ಶನ್​ ಅಭಿಮಾನಿಗಳು ಮಾಡಿದ್ದು ಸರಿಯಲ್ಲ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ದರ್ಶನ್​ ಮೌನ​ ಮುರಿದಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳ ಪರವಾಗಿ ದರ್ಶನ್​ ಕ್ಷಮೆ ಯಾಚಿಸಿದ್ದಾರೆ. ನಿರ್ಮಾಪಕ ವಿಖ್ಯಾತ್ ಬಳಿ ಜಗ್ಗೇಶ್ ಫೋನಿನಲ್ಲಿ ಮಾತನಾಡಿರುವ ಸಂಭಾಷಣೆ ರಾದ್ಧಾಂತ ಸೃಷ್ಟಿಸಿತ್ತು. ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎನ್ನುವುದು ಆಡಿಯೋದಲ್ಲಿ ಇತ್ತು.

ಈ ಬಗ್ಗೆ ಟ್ವೀಟ್ ಮಾಡಿದ್ದ ಜಗ್ಗೇಶ್ ಚಿತ್ರದ ಪ್ರಚಾರಕ್ಕಾಗಿ ಮಾಡಿದ ಹುನ್ನಾರ ಇದಾಗಿದೆ ಎಂದಿದ್ದರು. ಆದರೆ ನರಸೀಪುರ ತಾಲೂಕಿನ ಬನ್ನೂರಿನ ಅತ್ತಳ್ಳಿ ಗ್ರಾಮದ ಬಳಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಬಂದಿದ್ದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳಬೇಕು ಅಂತ ಅಗ್ರಹಿಸಿ ನವರಸನಾಯಕನಿಗೆ ಧಿಕ್ಕಾರ ಕೂಗಿದ್ದರು. ನಾನು ಹೇಳಿರುವುದು ವೆಬ್ ಪ್ರತಿನಿಧಿ ದರ್ಶನ್ ಬಗ್ಗೆ ಎಂದು ಸಮಜಾಯಿಷಿ ನೀಡಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದರು.

ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್​ಗೆ ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿ ಜಗ್ಗೇಶ್ ಅಭಿಮಾನಿಗಳು ಫಿಲ್ಮ್ ಚೇಂಬರ್​ಗೆ ತೆರಳಿದ್ದರು. 40 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಜಗ್ಗೇಶ್​ಗೆ ಈ ರೀತಿ ಮಾಡಿದ್ದು ಖಂಡನೀಯ ಎಂದು ದೂರು ನೀಡಿದ್ದರು.

ಈ ಬಗ್ಗೆ ಟಿವಿ9 ರಂಗನಾಥ್​ ಭಾರಧ್ವಾಜ್​ ಜತೆ ಸಂದರ್ಶನದಲ್ಲಿ ಮಾತನಾಡಿರುವ ದರ್ಶನ್​, ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ದು 50-60 ಮಿಸ್​ ಕಾಲ್​ಗಳಿದ್ದವು. ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು. ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ರೆ ನಮ್ಮ ಬಗ್ಗೆ ತಾನೇ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ. ನನ್ನ ಅಭಿಮಾನಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಮುಂದುವರಿದು, ಇನ್ಸ್​ಪೆಕ್ಟರ್​ ವಿಕ್ರಂ ಸಿನಿಮಾ ರಿಲೀಸ್​ ಆದಾಗಲೇ ಈ ಆಡಿಯೋ ವಿಚಾರ ಬಂದಿತ್ತು. ಆ ದಿನ ನಾನು ಜಗ್ಗೇಶ್​ಗೆ ಕರೆ ಮಾಡಿದ್ದೆ. ಆದರೆ, ಕರೆ ಕನೆಕ್ಟ್​ ಆಗಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅವತ್ತು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ: ಜಗ್ಗೇಶ್ ಪ್ರಶ್ನೆ

ಯೂಟ್ಯೂಬ್​ ಟ್ರೆಂಡಿಂಗ್​ನಲ್ಲೂ ನಾವೇ ನಂ.1; ವಿಡಿಯೋ ಶೇರ್​ ಮಾಡಿಕೊಂಡು ಟಿವಿ 9ಕನ್ನಡ ಚಾನಲ್​ಗೆ ಧನ್ಯವಾದ ಹೇಳಿದ ಹಿರಿಯ ನಟ ಜಗ್ಗೇಶ್​

ದರ್ಶನ್ ಅಭಿಮಾನಿಗಳ ವರ್ತನೆ ವಿರುದ್ಧ ದೂರು ಸಲ್ಲಿಸಲು ಫಿಲ್ಮ್ ಚೇಂಬರ್​ಗೆ ಆಗಮಿಸಿದ ಜಗ್ಗೇಶ್ ಅಭಿಮಾನಿಗಳು

Published On - 5:48 pm, Wed, 24 February 21

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್