Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಅಭಿಮಾನಿಗಳ ವರ್ತನೆ ವಿರುದ್ಧ ದೂರು ಸಲ್ಲಿಸಲು ಫಿಲ್ಮ್ ಚೇಂಬರ್​ಗೆ ಆಗಮಿಸಿದ ಜಗ್ಗೇಶ್ ಅಭಿಮಾನಿಗಳು

Jaggesh: ನಿನ್ನೆ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಈ ವಿಚಾರ ತಿಳಿದ ಮಂಡ್ಯ ಹಾಗೂ ಮೈಸೂರಿನ ದರ್ಶನ್ ಅಭಿಮಾನಿಗಳು ಶೂಟಿಂಗ್ ಸೆಟ್ಗೆ ಬಂದು ಜಗ್ಗೇಶ್​ಗೆ ಮುತ್ತಿಗೆ ಹಾಕಿದ್ದರು. ಅಲ್ಲದೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ದರ್ಶನ್ ಅಭಿಮಾನಿಗಳ ವರ್ತನೆ ವಿರುದ್ಧ ದೂರು ಸಲ್ಲಿಸಲು ಫಿಲ್ಮ್ ಚೇಂಬರ್​ಗೆ ಆಗಮಿಸಿದ ಜಗ್ಗೇಶ್ ಅಭಿಮಾನಿಗಳು
ಫಿಲ್ಮ್ ಚೇಂಬರ್​ಗೆ ಆಗಮಿಸಿದ ಜಗ್ಗೇಶ್ ಅಭಿಮಾನಿಗಳು
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Feb 23, 2021 | 2:19 PM

ಬೆಂಗಳೂರು: ನಿನ್ನೆ (ಫೆಬ್ರವರಿ 22) ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್​ಗೆ ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿ ಇದೀಗ ಜಗ್ಗೇಶ್ ಅಭಿಮಾನಿಗಳು ಫಿಲ್ಮ್ ಚೇಂಬರ್ ಬಳಿ ಆಗಮಿಸಿದ್ದಾರೆ. 40 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಜಗ್ಗೇಶ್​ಗೆ ಈ ರೀತಿ ಮಾಡಿದ್ದು ಖಂಡನೀಯ ಎಂದು ದೂರು ನೀಡಲು ಫಿಲ್ಮ್ ಚೇಂಬರ್ ಬಳಿ ನೂರಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದಾರೆ.

ದರ್ಶನ್ ಅಭಿಮಾನಿಗಳ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಖತ್ ವೈರಲ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ನಿನ್ನೆ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಈ ವಿಚಾರ ತಿಳಿದ ಮಂಡ್ಯ ಹಾಗೂ ಮೈಸೂರಿನ ದರ್ಶನ್ ಅಭಿಮಾನಿಗಳು ಶೂಟಿಂಗ್ ಸೆಟ್ಗೆ ಬಂದು ಜಗ್ಗೇಶ್​ಗೆ ಮುತ್ತಿಗೆ ಹಾಕಿದ್ದರು. ಅಲ್ಲದೇ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಇದಕ್ಕೆ ಬೇಸತ್ತ ನವರಸ ನಾಯಕ ನನಗೆ ಅವಮಾನ ಮಾಡಬೇಡಿ. ನನಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಟ್ವೀಟರ್​ನಲ್ಲಿ ಮಾತನಾಡಿದ್ದಾರೆ. ನಾನು ಕನ್ನಡಿಗರ ಚಪ್ಪಾಳೆಯಿಂದ ಬೆಳೆದವನು. ನನಗೆ ಅವಮಾನ ಮಾಡಿದರೆ ಅದು ಕನ್ನಡಿಗರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು. ಅಲ್ಲದೇ ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಬದುಕು ನನ್ನ ಸಿನಿಮಾ ಹಾಗೂ ಜೀ ಟಿವಿ ಶೋಗೆ ಮೀಸಲು ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಇಂದು ಬೆಳಗ್ಗೆ (ಫೆಬ್ರವರಿ 23) ಟ್ವಿಟರ್​ನಲ್ಲಿ ಒಂದು ವಿಡಿಯೋವನ್ನು ಹರಿಬಿಟ್ಟ ಜಗ್ಗೇಶ್ ನಾನು ಜೀವಮಾನದಲ್ಲಿ ಎಲ್ಲೂ ಓಡಿ ಹೋಗುವವನಲ್ಲ. ನಾನು ಅಪ್ಪನಿಗೆ ಹುಟ್ಟಿದ ಮಗ. ನಾನು ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಕಾಲದವನು. ಘಟಾನುಘಟಿಗಳ ಜೊತೆಗೆ ಹೆಜ್ಜೆ ಹಾಕಿ ಬೆಳೆದವನು. ಅವರ ಜೊತೆ ಬದುಕಿದವನು, ನಕ್ಕವನು, ಅತ್ತವನು. ನನಗೆ ಅವಮಾನ ಮಾಡಬೇಕೆಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಬಕೆಟ್ ಹಿಡಿಯುವವರು ಹುಟ್ಟೇ ಇರಲಿಲ್ಲ. 80ನೇ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ಇದುವರೆಗೂ ನನ್ನ ಎಡಗಾಲನ್ನೂ ಬೇರೆ ಭಾಷೆಗೆ ಇಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

Jaggesh: TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನಟ ಜಗ್ಗೇಶ್

Jaggesh Controversy: ತಪ್ಪೊ, ಸರಿಯೋ ಜಗ್ಗೇಶ್ ಇರೋದೆ ಹೀಗೆ..!