Jaggesh: TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನಟ ಜಗ್ಗೇಶ್

Jaggesh: ನಿನ್ನೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಕ್ಕೆ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ ನವರಸ ನಾಯಕ ನಾನು ಏನು ಅಂತಾ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಬಹಳ ಪರಿಶುದ್ಧವಾಗಿ ಬದುಕಿದವನು ನಾನು. ತಿನ್ನೋಕೆ ಅನ್ನ ಇಲ್ದೆ, ಕಷ್ಟ ಪಟ್ಟು ಬೆಳೆದು ಬಂದವನು ಎಂದು ಹೇಳಿದ್ದಾರೆ

Jaggesh: TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನಟ ಜಗ್ಗೇಶ್
ನಟ ಜಗ್ಗೇಶ್
Follow us
sandhya thejappa
|

Updated on:Feb 23, 2021 | 2:01 PM

ಬೆಂಗಳೂರು: ಸತ್ಯಕ್ಕೆ ಬೆಳಕು ಚೆಲ್ಲಿದ ಟಿವಿ9 ಕನ್ನಡಕ್ಕೆ ಧನ್ಯವಾದ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ನಿನ್ನೆ ರಾತ್ರಿ ಟಿವಿ9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನವರಸ ನಾಯಕ ಮುಂದುವರಿಯದಿರಲಿ ಈ ಅಪನಂಬಿಕೆ ಎಂದು ಹೇಳಿದ್ದಾರೆ. ಅಲ್ಲದೇ ನಟ ಜಗ್ಗೇಶ್ ಇಂದು ಬೆಳಗ್ಗೆ ಒಂದು ವಿಡಿಯೊ ಹರಿಯಬಿಟ್ಟಿದ್ದಾರೆ. ಟ್ವಿಟ್ಟರ್​ನಲ್ಲಿ ವಿಡಿಯೊ ಹರಿಬಿಟ್ಟ ಹಿನ್ನೆಲೆ ಜಗ್ಗೇಶ್ ಮನೆ ಮುಂದೆ ಜನ ಸೇರುವ ಸಾಧ್ಯತೆಯಿದ್ದು, ಮನೆಯ ಮುಂದೆ ಮಲ್ಲೇಶ್ವರಂ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ನವರಸ ನಾಯಕನ ನೋವಿನ ನುಡಿ ಕನ್ನಡ ಚಿತ್ರರಂಗ ಹಾಳಾಗುತ್ತಿದೆ. ಸರ್ವ ನಾಶವಾಗುತ್ತಿದೆ. ಸಿನಿಮಾ ಪ್ರೊಡ್ಯೂಸರ್​ಗಳು ಬೀದಿಗೆ ಬೀಳುವ, ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಟಾರ್​ಡಂ ತೋರಿಸಿ ಬೂಟಾಟಿಕೆ ಮಾಡಬೇಡಿ. ನನಗೂ 167 ಅಭಿಮಾನಿಗಳ ಸಂಘ ಇದೆ ಎಂದು ನಟ ಜಗ್ಗೇಶ್ ಟ್ವಿಟರ್​ನಲ್ಲಿ ಹೇಳಿದ್ದಾರೆ.

ನಿನ್ನೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಕ್ಕೆ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ ನವರಸ ನಾಯಕ ನಾನು ಏನು ಅಂತಾ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಬಹಳ ಪರಿಶುದ್ಧವಾಗಿ ಬದುಕಿದವನು ನಾನು. ತಿನ್ನೋಕೆ ಅನ್ನ ಇಲ್ದೆ, ಕಷ್ಟ ಪಟ್ಟು ಬೆಳೆದು ಬಂದವನು. 40 ವರ್ಷಗಳ ಕಾಲ ನಾನು 150 ಸಿನಿಮಾ ಮಾಡಿದ್ದೇನೆ. 29 ಸಿನಿಮಾ ಪ್ರೊಡ್ಯೂಸ್ ಮಾಡಿದ್ದೇನೆ, 2 ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿದ್ದಾರೆ.

ಅಪ್ಪನಿಗೆ ಹುಟ್ಟಿದ ಮಗ ನಾನು ಜೀವಮಾನದಲ್ಲಿ ಎಲ್ಲೂ ಓಡಿ ಹೋಗುವವನಲ್ಲ. ನಾನು ಅಪ್ಪನಿಗೆ ಹುಟ್ಟಿದ ಮಗ. ನಾನು ರಾಜ್​ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಕಾಲದವನು. ಘಟಾನುಘಟಿಗಳ ಜೊತೆಗೆ ಹೆಜ್ಜೆ ಹಾಕಿ ಬೆಳೆದವನು. ಅವರ ಜೊತೆ ಬದುಕಿದವನು, ನಕ್ಕವನು, ಅತ್ತವನು. ನನಗೆ ಅವಮಾನ ಮಾಡಬೇಕೆಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ.

ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ. ನನ್ನನ್ನ ಯಾವುದೇ ಕಾರಣಕ್ಕೂ ಅವಮಾನ ಮಾಡಬೇಡಿ. ನನಗೆ ಮಸಿ ಬಳಿಯುವ ಪ್ರಯತ್ನ ಮಾಡಬೇಡಿ. ಇಂಥಹ ಸ್ಥಿತಿ ಬೆಳೆಸೋಕೆ ಹೋದರೆ ಇಂಡಸ್ಟ್ರಿಯಲ್ಲಿ ರೌಡಿಸಂ ಶುರುವಾಗುತ್ತದೆ. ಎಲ್ಲಾ ನಟರನ್ನೂ ಹೆದರಿಸೋಕೆ ಶುರು ಮಾಡುತ್ತಾರೆ. ಒಬ್ಬ ನಟನ ಸಿನಿಮಾ ಹಿಟ್ ಆದರೆ ಇನ್ನೊಬ್ಬ ಅವನ ವಿರುದ್ಧ ಹುನ್ನಾರ ಮಾಡುತ್ತಾನೆ. ನಾನು ಒಬ್ಬನೇ ಬೆಳೆಯಬೇಕು, ಒಬ್ಬನೇ ಉದ್ಧಾರ ಆಗಬೇಕು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ದರಿದ್ರ ರಾಜಕಾರಣದಲ್ಲಿರುವ ಸ್ಥಿತಿ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Jaggesh: ದರ್ಶನ್ ಅಭಿಮಾನಿಗಳ ವರ್ತನೆಗೆ ಬೇಸತ್ತು ಮುಂದಿನ ನಡೆ ತಿಳಿಸಿದ ಹಿರಿಯ ನಟ ಜಗ್ಗೇಶ್

Jaggesh Controversy: ಜಗ್ಗೇಶ್ ಇರೋದೆ ಹೀಗೆ… ತಪ್ಪೊ, ಸರಿಯೋ ಎಲ್ಲದಕ್ಕೂ ಮೂಗು ತೂರಿಸುತ್ತಾರೆ!  

Published On - 1:27 pm, Tue, 23 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್