Jaggesh: ದರ್ಶನ್ ಅಭಿಮಾನಿಗಳ ವರ್ತನೆಗೆ ಬೇಸತ್ತು ಮುಂದಿನ ನಡೆ ತಿಳಿಸಿದ ಹಿರಿಯ ನಟ ಜಗ್ಗೇಶ್
Jaggesh: ನವರಸ ನಾಯಕ ಜಗ್ಗೇಶ್ ತೋತಾಪುರಿ ಶೂಟಿಂಗ್ಗಾಗಿ ಮೈಸೂರಿಗೆ ತೆರಳಿದ್ದ ವಿಚಾರ ತಿಳಿದ ದರ್ಶನ್ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕ್ಷಮೆ ಕೇಳಬೇಕೆಂದು ಅಗ್ರಹಿಸಿದ್ದಾರೆ. ನೂರಾರು ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ ಜಗ್ಗೇಶ್ ಕ್ಷಮೆ ಕೇಳಿದ್ದಾರೆ.
ಬೆಂಗಳೂರು: ನನಗೆ ಅವಮಾನ ಮಾಡಬೇಡಿ. ನನಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಟ್ವಿಟರ್ನಲ್ಲಿ ಮನವಿ ಮಾಡಿರುವ ಹಿರಿಯ ನಟ ಜಗ್ಗೇಶ್ ನಾನು ಕನ್ನಡಿಗರ ಚಪ್ಪಾಳೆಯಿಂದ ಬೆಳೆದವನು. ನನಗೆ ಅವಮಾನ ಮಾಡಿದರೆ ಅದು ಕನ್ನಡಿಗರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಬದುಕು ನನ್ನ ಸಿನಿಮಾ ಹಾಗೂ ಜೀ ಟಿವಿ ಶೋಗೆ ಮೀಸಲು ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಘಟನೆ ಏನು? ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ರವರೊಂದಿಗೆ ನಟ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಭಿಮಾನಿಗಳ ಬಗ್ಗೆ ಮಾತನಾಡುವ ವೇಳೆ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಕ್ಷಮೆಯಾಚಿಸುವಂತೆ ನಿನ್ನೆ (ಫೆಬ್ರವರಿ 22) ಪಟ್ಟು ಹಿಡಿದಿದ್ದರು.
ನವರಸ ನಾಯಕ ಜಗ್ಗೇಶ್ ತೋತಾಪುರಿ ಶೂಟಿಂಗ್ಗಾಗಿ ಮೈಸೂರಿಗೆ ತೆರಳಿದ್ದ ವಿಚಾರ ತಿಳಿದ ದರ್ಶನ್ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕ್ಷಮೆ ಕೇಳಬೇಕೆಂದು ಅಗ್ರಹಿಸಿದ್ದಾರೆ. ನೂರಾರು ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ ಜಗ್ಗೇಶ್ ಕ್ಷಮೆ ಕೇಳಿದ್ದಾರೆ.
ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರ ಬಗ್ಗೆ ಮತ್ತೆ ಟ್ವಿಟರ್ನಲ್ಲಿ ನಟ ಜಗ್ಗೇಶ್ ಮಾತನಾಡಿದ್ದಾರೆ. ಖಾಸಗಿ ದಿನಪತ್ರಿಕೆಯೊಂದರ ವರದಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್ ದರ್ಶನ್ ಫ್ಯಾನ್ಸ್ ಕಾಗೆ ಹಾರಿಸಿದ್ದಾನೆ. ಬಟ ಬಯಲಾದ ಎಂದೆಲ್ಲಾ ಬರೆದಿದ್ದಾರೆ. ನಾನು ಕಳ್ಳತನ ಮಾಡಿದ್ದೀನಾ? ಓಡಿ ಹೋಗಿದ್ದೀನಾ? ನೇರವಾಗಿ ಅವರೊಂದಿಗೆ ಮಾತನಾಡಿದ್ದೇನೆ. ನಾನು ಯಾವುದೇ ಆಸ್ತಿ ಹೊಡಿಯೋಣ, ವಂಚನೆ ಮಾಡೋಣ, ಯಾರಿಗಾದರೂ ನೋವು ಕೊಡೊವ ಬಗ್ಗೆ ಮಾತಾಡಿದ್ದೀನಾ? ಮರ್ಡರ್ ಮಾಡುವ ಬಗ್ಗೆ ಮಾತಾಡಿದ್ದೀನಾ ಹೇಳಿ ಎಂದು ಟ್ವಿಟರ್ನಲ್ಲಿ ಮಾತನಾಡಿದ್ದಾರೆ.
ನಿನ್ನೆ ಬಂದ ಹುಡುಗರ ಎದುರು ಕುಳಿತುಕೊಂಡು ಮಾತನಾಡಿದ್ದೇನೆ. ನಾನೇನಾದರೂ ಆ ವೇಳೆ ಓಡಿ ಹೋಗಿದ್ದೇನಾ ಎಂದು ಕೇಳಿದ ಜಗ್ಗೇಶ್ ನನ್ನ ಬಗ್ಗೆ ಕಾಗೆ ಹಾರಿಸಿ ಬಿಟ್ಟ ಅಂತ ಬರೆದಿದ್ದಾರೆ. ಈ ರೀತಿ ಬರೆದು ನನಗೆ ಅವಮಾನ ಮಾಡಬೇಕು ಅಂದುಕೊಂಡರೆ ಅದು ಸಾಧ್ಯವಿಲ್ಲ. ನಾನು ಕಾಗೆ ಹಾರಿಸುವ ಹಾಗಿದ್ದರೇ 20 ಸಲ ಎಂಎಲ್ಎ ಆಗುತ್ತಿದ್ದೆ. ನಾನು ಕನ್ನಡ, ಕನ್ನಡ ಅಂತ ಸಾಯುತ್ತಿದ್ದೇನೆ. ಕನ್ನಡ ಭಾಷೆಗಾಗಿ ಮುಂದೇನು ಸಾಯುತ್ತೇನೆ. ನಾನು ಇಂದು ಬದುಕುತ್ತಿದ್ದೇನೆ ಎಂದರೆ ಅದು ಕನ್ನಡಿಗರಿಂದ. ಯಾವ ಭಾಷೆಯ ಬಗ್ಗೆ ವ್ಯಾಮೋಹ ಇಟ್ಟುಕೊಂಡವನಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ದರ್ಶನ್ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್
ಆತ್ಮೀಯರೆ ನನಗೆನೀವು ನಿಮಗೆ ನಾನು ಇನ್ನುಮುಂದೆ! ಇನ್ನುಮುಂದೆ ನನ್ನಉದ್ಯಮದ ಯಾರ ಹುಟ್ಟುಹಬ್ಬ,ಸಿನಿಮ, ಸ್ನೇಹ,ಕಾರ್ಯಕ್ರಮ,ಬೇಟಿ,ಹರಟೆ ನನ್ನಿಂದ ಇರುವುದಿಲ್ಲ! ಮುಂದೆ ನನ್ನಸಿನಿಮ ನನ್ನztv showಗೆ ಮೀಸಲುಬದುಕು! ಕಾರಣ ತುಂಬ ತಾಮಸವಾಗಿದೆ ನಮ್ಮರಂಗ,ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ! pic.twitter.com/cRRzNgtL1b
— ನವರಸನಾಯಕ ಜಗ್ಗೇಶ್ (@Jaggesh2) February 22, 2021
Published On - 11:33 am, Tue, 23 February 21