ರಾಜಕೀಯ-ನಟನೆಯಿಂದ ದೂರ ಉಳಿದಿರುವ ರಮ್ಯಾ ಈಗೇನು ಮಾಡ್ತಿದಾರೆ? ಇಲ್ಲಿದೆ ನೋಡಿ ವಿಡಿಯೋ

ರಾಜಕೀಯಕ್ಕೆ ಕಾಲಿಟ್ಟ ನಂತರ ರಮ್ಯಾ ಸಿನಿಮಾ ರಂಗದಲ್ಲಿ ಚಾರ್ಮ್​ ಕಳೆದುಕೊಂಡರು ಎನ್ನುವ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ. ಇವೆಲ್ಲವುಗಳ ಮಧ್ಯೆ ರಮ್ಯಾ ತಮ್ಮದೇ ಲೋಕ ಕಟ್ಟಿಕೊಂಡಿದ್ದಾರೆ!

  • TV9 Web Team
  • Published On - 13:42 PM, 22 Feb 2021
ರಾಜಕೀಯ-ನಟನೆಯಿಂದ ದೂರ ಉಳಿದಿರುವ ರಮ್ಯಾ ಈಗೇನು ಮಾಡ್ತಿದಾರೆ? ಇಲ್ಲಿದೆ ನೋಡಿ ವಿಡಿಯೋ
ನಟಿ ರಮ್ಯಾ

ದಶಕಗಳ ಹಿಂದೆ ನಟಿ ರಮ್ಯಾ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿ ಆಗಿದ್ದರು. ರಮ್ಯಾ ಸಿನಿಮಾದಲ್ಲಿದ್ದಾರೆ ಎಂದರೆ ಅವರನ್ನು ನೋಡಲೆಂದೇ ಚಿತ್ರಮಂದರಕ್ಕೆ ತೆರಳುವವರ ಸಂಖ್ಯೆ ಏನು ಕಡಿಮೆ ಇರಲಿಲ್ಲ. ಹೀಗಾಗಿ, ನಿರ್ಮಾಪಕರ ಪಾಲಿಗೆ ರಮ್ಯಾ ಲಕ್ಷ್ಮಿಯೇ ಆಗಿದ್ದರು. ಆದರೆ, ರಮ್ಯಾ ಸಿನಿಮಾ ರಂಗ ತೊರೆದು ರಾಜಕೀಯ ಸೇರಿದ್ದರು. ಈಗ ರಾಜಕೀಯದಲ್ಲೂ ಅವರು ಆ್ಯಕ್ಟಿವ್​ ಆಗಿಲ್ಲ. ಹಾಗಾದರೆ, ರಮ್ಯಾ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.

ರಮ್ಯಾ ನಟನೆಯಲ್ಲಿ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಸೇರಿದ್ದರು. 2012ರಲ್ಲಿ ರಮ್ಯಾ ಕಾಂಗ್ರೆಸ್​ ಪಾರ್ಟಿ ಸೇರ್ಪಡೆ ಆಗಿದ್ದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಗೆಲುವು ಸಾಧಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧೆ ಮಾಡಿದರೂ ಗೆಲುವು ಅವರಿಗೆ ಒಲಿಯಲಿಲ್ಲ.

2017ರಲ್ಲಿ ಅವರಿಗೆ ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. 2018ರಲ್ಲಿ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದರು. ನಂತರ ರಮ್ಯಾ ರಾಜಕೀಯದಿಂದ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದಿದ್ದರು. ನಂತರ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸಾಗಿದ್ದರು.

ರಾಜಕೀಯಕ್ಕೆ ಕಾಲಿಟ್ಟ ನಂತರ ರಮ್ಯಾ ಸಿನಿಮಾ ರಂಗದಲ್ಲಿ ಚಾರ್ಮ್​ ಕಳೆದುಕೊಂಡರು ಎನ್ನುವ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ. ಈ ಮಧ್ಯೆ ರಮ್ಯಾ ಮದುವೆ ವಿಚಾರ ಹರಿದಾಡಿದ್ದರೂ ಅದರಲ್ಲಿ ಹುರುಳಿಲ್ಲ ಎಂಬುದು ನಂತರ ಗೊತ್ತಾಗಿತ್ತು. ಇವೆಲ್ಲವುಗಳ ಮಧ್ಯೆ ರಮ್ಯಾ ತಮ್ಮದೇ ಲೋಕ ಕಟ್ಟಿಕೊಂಡಿದ್ದಾರೆ!

ಹೌದು, ರಮ್ಯಾ 2-3 ಶ್ವಾನಗಳನ್ನು ಸಾಕಿದ್ದಾರೆ. ಅವುಗಳ ಜತೆ ರಮ್ಯಾ ಸಮಯ ಕಳೆಯುತ್ತಿದ್ದಾರೆ. ಈ ವಿಡಿಯೋವನ್ನು ಅವರು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದು, ಇದು ಶುದ್ಧ ಪ್ರೇಮದ ಸ್ವೂರಪ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ. ಆ ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾವಾಗಲೂ ನೀವು ನಮ್ಮ ಇಷ್ಟದ ನಟಿ ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ನಿಜಕ್ಕೂ ‘ನಟಿ’ ರಾಧಿಕಾ ಕುಮಾರಸ್ವಾಮಿ ಸಂಭಾವನೆ ಇಷ್ಟಿದೆಯಾ.. ರಮ್ಯಾ, ರಶ್ಮಿಕಾಗಿಂತಲೂ ಹೆಚ್ಚಾಯ್ತಾ!?