KGF Chapter 2: ಭಾರಿ ಹಲ್ ಚಲ್ ಸೃಷ್ಟಿಸಿದ KGF 2-ಟ್ರೇಲರ್ನಿಂದಲೇ ಹವಾ ಕ್ರಿಯೇಟ್ ಮಾಡಿದ ರಾಕಿಭಾಯ್, ಟಾಲಿವುಡ್ಗೆ ಅತಿಹೆಚ್ಚು ಮೊತ್ತಕ್ಕೆ ರೈಟ್ಸ್ ಸೇಲ್
KGF Chapter 2 Rights Sold | ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಸಿನಿಮಾನಗಳು ಸೃಷ್ಟಿಸ್ತಿರೋ ಸಂಚಲನಕ್ಕೆ ಪರಭಾಷೆ ಸಿನಿಮಾ ಮಂದಿ ಬೆರಗಾಗಿ ನೋಡ್ತಿದ್ದಾರೆ. ಸದ್ಯ ಕೆಜಿಎಫ್ 2 ಮಾಡ್ತಿರೋ ಮೋಡಿಗೆ ಟಾಲಿವುಡ್ ವಿತರಕರು ಫಿದಾ ಆಗಿದ್ದಾರೆ. ಹೀಗಾಗಿ ಕೆಜಿಎಫ್ 2 ಚಿತ್ರದ ರೈಟ್ಸ್‌ನ್ನು ಭರ್ಜರಿ ಮೊತ್ತಕ್ಕೆ ಪಡೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಸಿನಿಮಾಗಳು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹೊರರಾಜ್ಯದಲ್ಲೂ ರಿಲೀಸ್ ಆಗಿ ಮೋಡಿ ಮಾಡೋಕೆ ರೆಡಿಯಾಗ್ತಿವೆ. ಸಿನಿಮಾಗಳ ಬಗ್ಗೆ ಶುರುವಾಗಿರೋ ಕ್ರೇಜ್ ಈಗಾಗಲೇ ಪರಭಾಷೆ ಸಿನಿಮಾ ಮಂದಿ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮಾತ್ರವಲ್ಲ ಬ್ಯುಸಿನೆಸ್ ವಿಚಾರದಲ್ಲೂ ಲೆಕ್ಕ ಹಾಕೋಕೆ ಶುರು ಮಾಡಿದ್ದಾರೆ. ಅಂದ್ಹಾಗೆ ಸದ್ಯ ಕನ್ನಡದ ಕೆಜಿಎಸ್ 2 ಸಿನಿಮಾ ಸಾಕಷ್ಟು ಕ್ರೇಜ್ ಸೃಷ್ಟಿಸ್ತಿದೆ. ಹೀಗಾಗಿ ಕನ್ನಡದ ಸಿನಿಮಾಗಳ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ಆಲೋಚಿಸುವಂಥಾ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 155 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಟೀಸರ್ ಹಲ್‌ಚಲ್ ಎಬ್ಬಿಸಿದೆ. ಇದೇ ಈಗ ಟಾಲಿವುಡ್‌ನಲ್ಲಿ ಕೆಜಿಎಫ್ ರೈಟ್ಸ್ ಕೂಡ 65 ಕೋಟಿ ಮೊತ್ತಕ್ಕೆ ಸೇಲ್ ಆಗಿರೋದು ಕೂಡ ಸಾಕಷ್ಟು ಸದ್ದು ಮಾಡ್ತಿದೆ.
65 ಕೋಟಿ ಮೊತ್ತಕ್ಕೆ ಕನ್ನಡದ ಸಿನಿಮಾ ರೈಟ್ಸ್ ಸೇಲ್ ಈ ಹಿಂದೆ ಸಿಕ್ಕಿದ್ದ ಮಾಹಿತಿ ಪ್ರಕಾರ ಬರೋಬ್ಬರಿ 85 ಕೋಟಿ ಮೊತ್ತಕ್ಕೆ ಟಾಲಿವುಡ್‌ನಲ್ಲಿ ಬೇಡಿಕೆ ಇತ್ತು ಎನ್ನಲಾಗಿತ್ತು. ಆದ್ರೀಗ ಕೊನೆಗೂ ಒಂದು ಹಂತದ ಮಾತುಕತೆ ನಡೆದು ಟಾಲಿವುಡ್‌ನ ಕ್ಯಾತ ನಿರ್ಮಾಪದ ದಿಲ್ ರಾಜು ಟಾಲಿವುಡ್ ರೈಟ್ಸ್ ಪಡೆದಿದ್ದಾರಂತೆ. ಬರೋಬ್ಬರಿ 65 ಕೋಟಿ ಮೊತ್ತಕ್ಕೆ ಕನ್ನಡದ ಸಿನಿಮಾಗೆ ಬೇಡಿಕೆ ಬರುವಷ್ಟು ಕ್ಯೂರಿಯಾಸಿಟಿ ಸೃಷ್ಟಿಸಿದೆ.
ರಾಕಿಂಗ್ ಸ್ಟಾರ್ ಯಶ್ ನಟಿಸಿ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಹೀಗಾಗಿ ದಿನದಿಂದ ದಿನಕ್ಕೆ ಸಿನಿಮಾದ ಬಗ್ಗೆ ನಿರೀಕ್ಷೆಯೂ ಹೆಚ್ಚಾಗ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ 5 ಭಾಷೆಯಲ್ಲಿ ರಿಲೀಸ್ ಆಗ್ತಿರೋ ಕೆಜಿಎಫ್ ಮುಂದಿನ ದಿನಗಳಲ್ಲಿ ಹೇಗೆಲ್ಲಾ ತನ್ನ ಸಾಮ್ರಾಜ್ಯ ವಿಸ್ತರಿಸುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.
ಟೀಸರ್ ರಿಲೀಸ್ ಆದ ಒಂದೇ ದಿನಕ್ಕೆ ಕೋಟಿ ಕೋಟಿ ಗಳಿಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಯಶ್ ಜನ್ಮದಿನದ ಅಂಗವಾಗಿ ಜನವರಿ 7ರಂದು ರಿಲೀಸ್ ಆಗಿತ್ತು. ಕೆಜಿಎಫ್-2 ಟೀಸರ್ ರಿಲೀಸ್ ಸಾಕಷ್ಟು ದಾಖಲೆ ಸೃಷ್ಟಿಸಿತ್ತು. ವಿಶೇಷ ಎಂದರೆ ಈ ಟೀಸರ್ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಯಶ್ ಜನ್ಮದಿನದ ಅಂಗವಾಗಿ ರಿಲೀಸ್ ಆಗಿದ್ದ ಕೆಜಿಎಫ್-2 ಟೀಸರ್ ಐದೂ ಭಾಷೆಗಳಿಗೆ ಹೊಂದಿಕೆ ಆಗುವಂತಿತ್ತು. ಹೀಗಾಗಿ, ಬೇರೆ ಬೇರೆ ಟೀಸರ್ ಬಿಡುಗಡೆ ಮಾಡದೆ, ಒಂದೇ ಟೀಸರ್ ರಿಲೀಸ್ ಆಗಿತ್ತು. ಇನ್ನು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಟೀಸರ್ ಅತಿ ಹೆಚ್ಚು ವೀಕ್ಷಣೆ ಕಂಡಿತ್ತು.
ಕನ್ನಡ ಸಿನಿಮಾದ ಟೀಸರ್ ಒಂದು ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವುದು ಇದೇ ಮೊದಲಂತೆ. ಹೀಗಾಗಿ, ಈ ಟೀಸರ್ನಿಂದ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಗಳಿಕೆ ಬಂದಿದೆ. ವಿಡಿಯೋ ಎಷ್ಟು ವೀಕ್ಷಣೆ ಕಂಡಿದೆ ಎಂಬಿತ್ಯಾದಿ ವಿಚಾರ ಇಟ್ಟುಕೊಂಡು ಯೂಟ್ಯೂಬ್ ವಿಡಿಯೋಗೆ ಹಣ ನೀಡುತ್ತದೆ. ಹೊಂಬಾಳೆ ಫಿಲ್ಮ್ಸ್ನಲ್ಲಿ ತೆರೆಕಂಡಿರುವ ಈ ಟೀಸರ್ನಿಂದ ಬರೋಬ್ಬರಿ 2.18 ಕೋಟಿ ರೂಪಾಯಿ ದೊರೆತಿದೆ ಎನ್ನಲಾಗಿದೆ. ಇದು ಕೆಲ ಸ್ಯಾಂಡಲ್‌ವುಡ್ ಹೀರೋನ ಸಂಭಾವನೆಗಿಂತ ಹೆಚ್ಚು ಅನ್ನೋದು ವಿಶೇಷ.
ಇದನ್ನೂ ಓದಿ: KGF Chapter 2: ಘೋಷಣೆ ಆಯ್ತು ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ
Published On - 7:33 am, Mon, 22 February 21