KGF Chapter 2: ಘೋಷಣೆ​ ಆಯ್ತು ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ

KGF Chapter 2 Release Date: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೆಜಿಎಫ್​-2 ದಸರಾ ಪ್ರಯುಕ್ತ ಅಕ್ಟೋಬರ್​ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಅದು ಸಾಧ್ಯವಾಗಿರಲ್ಲ. ಈಗ ಸಿನಿಮಾ ರಿಲೀಸ್​ ಡೇಟ್​ ಘೋಷಣೆ ಆಗಿದ್ದು, ಸಿನಿ ಪ್ರಿಯರು ಸಖತ್​ ಖುಷಿ ಆಗಿದ್ದಾರೆ.

KGF Chapter 2: ಘೋಷಣೆ​ ಆಯ್ತು ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ
ಯಶ್​
Rajesh Duggumane

|

Jan 29, 2021 | 6:45 PM

ಕೆಜಿಎಫ್​ ಚಾಪ್ಟರ್​ 2 ಟೀಸರ್​ ರಿಲೀಸ್​ ಆದ ನಂತರ ಸಿನಿಮಾದ ಹವಾ ಹೆಚ್ಚಿದೆ. ಟೀಸರ್​ ನೋಡಿದವರು ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ತುದಿಗಾಲಿನಲ್ಲಿ ನಿಂತಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶಕ ಪ್ರಶಾಂತ್​ ಸಿನಿಮಾ ರಿಲೀಸ್​ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಕೆಜಿಎಫ್​-2 ಜುಲೈ 16ರಂದು  ರಿಲೀಸ್​  ಆಗಲಿದೆ. ಈ ಮೊದಲು ಚಿತ್ರಮಂದಿರದಲ್ಲಿ ಶೇ.50 ಆಸನಗಳಿಗೆ ಮಾತ್ರ ಅವಕಾಶ ಇತ್ತು. ಆದರೆ, ಈಗ ಈ ನಿಯಮವನ್ನು ಕೇಂದ್ರ ಸರ್ಕಾರ ಸಡಿಲ ಮಾಡಿದೆ. ಜುಲೈ ವೇಳೆಗೆ ಶೇ. 100 ಆಸನ ವ್ಯವಸ್ಥೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದು ಕೆಜಿಎಫ್​ ಸಿನಿಮಾಗೆ ಪ್ಲಸ್​ ಪಾಯಿಂಟ್ ಆಗಲಿದೆ​.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೆಜಿಎಫ್​-2 ದಸರಾ ಪ್ರಯುಕ್ತ ಕಳೆದ ಅಕ್ಟೋಬರ್​ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಅದು ಸಾಧ್ಯವಾಗಿರಲ್ಲ. ಈಗ ಸಿನಿಮಾ ರಿಲೀಸ್​ ಡೇಟ್​ ಘೋಷಣೆ ಆಗಿದ್ದು, ಸಿನಿ ಪ್ರಿಯರು ಸಖತ್​ ಖುಷಿ ಆಗಿದ್ದಾರೆ. ಒಂದೇ ಬಾರಿಗೆ ಐದು ಭಾಷೆಗಳಲ್ಲಿ ಕೆಜಿಎಫ್​-2 ರಿಲೀಸ್​ ಆಗ್ತಿರೋದು ವಿಶೇಷ.

https://twitter.com/hombalefilms/status/1355139129382735873/photo/1

ಕೆಜಿಎಫ್​ ಚಾಪ್ಟರ್​-2ನಲ್ಲಿ ಯಶ್​ ಲೀಡ್​ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಖಳನಾಗಿ ಬಾಲಿವುಡ್​ ನಟ ಸಂಜಯ್​ ದತ್​ ಕಾಣಿಸಿಕೊಂಡಿದ್ದಾರೆ. ಹಿಂದಿ ನಟಿ ರವೀನಾ ಟಂಡನ್​ ಈ ಚಿತ್ರದಲ್ಲಿ ರಾಜಕಾರಣಿ ಪಾತ್ರ ಮಾಡಿದ್ದಾರೆ. ಯೂಟ್ಯೂಬ್​ನಲ್ಲಿ ಕೆಜಿಎಫ್​-2 ಸಿನಿಮಾ ಟೀಸರ್​ ದಾಖಲೆ ವೀಕ್ಷಣೆ ಕಂಡಿದೆ.

ಕೆಜಿಎಫ್ ಚಾಪ್ಟರ್​-2​ ಟೀಸರ್​ ಯೂಟ್ಯೂಬ್​ನಿಂದ ಗಳಿಸಿದ್ದೆಷ್ಟು ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada