ನಿರ್ದೇಶಕ ಪ್ರಶಾಂತ್ ನೀಲ್ರ ಸಲಾರ್ ಸಿನಿಮಾದ 100ರ ಸೀಕ್ರೇಟ್ ಏನು?
Salaar | ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಮೂಲಕ ಹೊಸ ಕ್ರಾಂತಿಗೆ ಮುಂದಾಗಿದ್ದಾರೆ. ಸಲಾರ್ನ ಒಂದೊಂದೇ ಸಿಕ್ರೆಟ್ಗಳು ಬಯಲಿಗೆ ಬೀಳ್ತಿವೆ. ಈಗ ಸಲಾರ್ 100ರ ಸೀಕ್ರೇಟ್ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪ್ರಶಾಂತ್ ನೀಲ್ ಮಾಡಿದ್ದು ಮೂರೇ ಸಿನಿಮಾ ಆದ್ರು, ಮುನ್ನೂರು ಸಿನಿಮಾ ಮಾಡಿದಷ್ಟು ಹೆಸ್ರು ಗಳಿಸಿದ್ದಾರೆ. ಹೀಗಾಗಿಯೇ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಕನ್ನಡದ ನೀಲ್ರನ್ನು ಹುಡುಕಿಕೊಂಡು ಬರುವಂತಾಗಿದ್ದು. ಒಂದ್ಕಡೆ ಕೆಜಿಎಫ್-2 ರಿಲೀಸ್ಗೆ ರೆಡಿಯಾಗಿದೆ. ಅದ್ರೆ ಎಲ್ರ ಗಮನ ಹೆಚ್ಚಾಗಿ ಸಲಾರ್ ಕಡೆ ನೆಟ್ಟಿದೆ. ಸಲಾರ್ ಟೀಂನಿಂದ ಬರ್ತಿರೋ ಹೊಸ ಹೊಸ ಸುದ್ದಿ ಸಲಾರ್ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಪ್ರಶಾಂತ್ ನೀಲ್ 100ರ ಸೀಕ್ರೇಟ್ ಏನು? ಸಲಾರ್ ಸದ್ಯ 100 ಅನ್ನೋ ಸಂಖ್ಯೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದು ಮತ್ತೇನೂ ಅಲ್ಲ. 100 ನವ ಕಲಾವಿದರಿಗೆ ಪ್ರಶಾಂತ್ ನೀಲ್ ಸಲಾರ್ನಲ್ಲಿ ಅವಕಾಶ ಕೊಟ್ಟಿದ್ದಾರೆ. ಆಡಿಷನ್ ಬಳಿಕ ಸಲಾರ್ಗಾಗಿ ಬರೋಬ್ಬರಿ 100 ಮಂದಿ ಹೊಸಬರನ್ನ ಆಯ್ಕೆ ಮಾಡಲಾಗಿದೆ. ಈ ನೂರು ಮಂದಿ ಸಿನಿಮಾದ ಮುಖ್ಯ ಪಾತ್ರಧಾರಿಗಳನ್ನ ಹೊರತು ಪಡಿಸಿ ಸಿನಿಮಾದಲ್ಲಿ ಇರಲಿದ್ದಾರೆ.
ಇದೇ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಇದೇನಾ ಪ್ರಶಾಂತ್ ನೀಲ್ ಯಶಸ್ಸಿನ ಗುಟ್ಟು ಅನ್ನೋ ಚರ್ಚೆ ಕೂಡ ಶೂರುವಾಗಿದೆ. ಅಂದ್ರೆ ಪ್ರಶಾಂತ್ ನೀಲ್ ಪಾತ್ರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ನೂರು ಮಂದಿಗೂ ಸಿನಿಮಾದಲ್ಲಿ ಮಹತ್ವದ ಪಾತ್ರ ಇರಬಹುದು. ಕೆಜಿಎಫ್ನಲ್ಲಿ ನೋಡೋದಾದ್ರೆ ಅಲ್ಲೂ ಕೂಡ ಒಂದೊಂದು ಪಾತ್ರವೂ ಸಿನಿಮಾದ ಕಥೆಗೆ ಬಹುಮುಖ್ಯವಾಗಿ ರೂಪುಗೊಂಡಿದ್ವು. ಜೊತೆಗೆ ಕೆಜಿಎಫ್ ಗಣಿಯಲ್ಲಿ ಇದ್ದ ಅಸಂಖ್ಯಾತ ಕಾರ್ಮಿಕ ಪಾತ್ರಗಳು ಆ ಸನ್ನಿವೇಶಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಈಗ ಸಲಾರ್ನಲ್ಲೂ ಪ್ರಶಾಂತ್ ನೀಲ್ ದೊಡ್ಡ ಪಾತ್ರವರ್ಗ ಕಟ್ಟಿ ಕೊಡ್ತಿದ್ದಾರೆ. ಈಗಾಗ್ಲೆ ನಟ ಪ್ರಭಾಸ್ ಮೆಕಾನಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ 100 ಹೊಸಬರ ಪಾತ್ರ ಪ್ರಭಾಸ್ಗೆ ಸಾಥ್ ನೀಡೋ ಸೂಚನೆ ಕೊಟ್ಟಿದೆ. ಶೃತಿ ಹಾಸನ್, ಕನ್ನಡದ ಖಳನಟ ಮಾಧುಸ್ವಾಮಿ ಪಾತ್ರ ಹೇಗಿರಲಿದೆ ಅನ್ನೋದು ಕುತೂಹಲ ಸೃಷ್ಟಿಸಿದೆ.
ಸಲಾರ್ನಲ್ಲಿ ಪ್ರಭಾಸ್ಗೆ ವಿಲನ್ ಆದ ಕನ್ನಡದ ಕಲಾವಿದ ಒಟ್ಟಾರೆ ಸಲಾರ್ ಹಲವು ಕಾರಣಗಳಿಗೆ ದಿನೇ ದಿನೇ ಕುತೂಹಲ ಹೆಚ್ಚು ಮಾಡುತ್ತಲೇ ಇದೆ. ಚಿತ್ರ ಶುರುವಿನ ಆರಂಭದಲ್ಲೇ ಭಾರಿ ನಿರೀಕ್ಷೆಗೆ ಕಾರಣವಾಗಿದೆ.ಇನ್ನೂ ರಿಲೀಸ್ ಟೈಮ್ನಲ್ಲಿ ಸಲಾರ್ ಹವಾ ಹೇಗಿರುತ್ತೇ ಅನ್ನೋದನ್ನ ಕಾದು ನೋಡ್ಬೇಕು.
ಪ್ರಶಾಂತ್ ನಿಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಟಾಲಿವುಡ್ಗೆ ಹೋದರೂ ಕನ್ನಡ ಕಲಾವಿದರಿಗೆ ಆದ್ಯತೆ ನೀಡುವುದನ್ನು ಮರೆತಿಲ್ಲ. ಈಗ ‘ಸಲಾರ್’ ಚಿತ್ರಕ್ಕೆ ಕನ್ನಡದ ಕಲಾವಿದನನ್ನು ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೊದಲು ಮಫ್ತಿ, ವಜ್ರಕಾಯದಂತ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದ ಮಧು ಗುರುಸ್ವಾಮಿ ಈಗ ಸಲಾರ್ನಲ್ಲಿ ನಟಿಸಲಿದ್ದು, ಪ್ರಭಾಸ್ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾದಲ್ಲಿ ಈ ಮೊದಲು ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರು ಕನ್ನಡಿಗರೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್ ಮುಂದುವರಿಸಿದೆ ಅನ್ನೋದು ವಿಶೇಷ.
ಸಲಾರ್ ಸಿನಿಮಾಗೆ ತಿಂಗಳ ಹಿಂದೆ ಮುಹೂರ್ತ ನೆರವೇರಿತ್ತು. ಕೆಜಿಎಫ್ ಸ್ಟಾರ್ ಯಶ್ ಸೇರಿ ಸಾಕಷ್ಟು ಮಂದಿ ಸಿನಿಮಾಗೆ ವಿಶ್ ಮಾಡಿದ್ದರು, ಈ ಚಿತ್ರ ಸಂಪೂರ್ಣವಾಗಿ ಆ್ಯಕ್ಷನಿಂದ ಕೂಡಿರಲಿದೆ ಎನ್ನುವುದು ಮೂಲಗಳ ಮಾತು.
ಇದನ್ನೂ ಓದಿ: ಸಲಾರ್ ಮೊದಲ ಹಂತದ ಚಿತ್ರೀಕರಣ ಪೂರ್ಣ, ಡಾರ್ಲಿಂಗ್ ಪ್ರಭಾಸ್ ನ್ಯೂ ಲುಕ್‌ಗೆ ಫಿದಾ ಆದ ಫ್ಯಾನ್ಸ್..!