AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊನಾಲಿಸಾಗೆ ನಿಜಕ್ಕೂ 18 ವರ್ಷ ತುಂಬಿದೆಯೇ? ಇಲ್ಲಿದೆ ಉತ್ತರ

ಹಣೆಯ ಮೇಲೆ ಸಿಂಧೂರ ಧರಿಸಿದ್ದ ಫರ್ಮಾನ್ ಈ ಮದುವೆಗೆ ಮೊದಲು ಒಪ್ಪಿರಲಿಲ್ಲವಂತೆ. ನಂತರ ಮೊನಾಲಿಸಾ ಮನವೊಲಿಸಿ ಮದುವೆಯಾದರು. ಅದೇ ಸಂದರ್ಭದಲ್ಲಿ, ಫರ್ಮಾನ್, ‘ನಾವಿಬ್ಬರೂ ಕಲಾವಿದರು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಪ್ರೀತಿಯಲ್ಲಿ ಮತಾಂತರಗೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದರು. ಹೀಗಾಗಿ ಅವರು ತಮ್ಮ ಪತ್ನಿ ಮೊನಾಲಿಸಾ ಭೋಸ್ಲೆ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊನಾಲಿಸಾಗೆ ನಿಜಕ್ಕೂ 18 ವರ್ಷ ತುಂಬಿದೆಯೇ? ಇಲ್ಲಿದೆ ಉತ್ತರ
ಮೊನಾಲಿಸಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Mar 13, 2026 | 8:42 AM

Share

ಪ್ರಯಾಗ್‌ರಾಜ್ ಕುಂಭಮೇಳದ ಸಮಯದಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದವರು ಮೊನಾಲಿಸಾ ಭೋಸ್ಲೆ (Monalisa Bhosle). ಅವರು ಈಗ ಕೇರಳದಲ್ಲಿ ತಮ್ಮ ಗೆಳೆಯ ಫರ್ಮಾನ್ ಖಾನ್ ಅವರನ್ನು ಮದುವೆ ಆದರು. ಕೇರಳದ ಪೂವಾರ್ ಬಳಿಯ ಅರುಮನೂರಿನ ನಾಯನಾರ್ ದೇವಸ್ಥಾನದಲ್ಲಿ ಈ ಜೋಡಿ ಹಿಂದೂ ಸಂಪ್ರದಾಯಗಳ ಪ್ರಕಾರ ಹಸೆಮಣೆ ಏರಿದರು. ಈ ಮದುವೆಯ ನಂತರ ಮೊನಾಲಿಸಾ ಭೋಸ್ಲೆ ಇಸ್ಲಾಂಗೆ ಮತಾಂತರ ಆಗುತ್ತಾರೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಇದಕ್ಕೆ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಸ್ಪಷ್ಟನೆ ನೀಡಿದರು.

ಮದುವೆಯ ನಂತರ ಇಬ್ಬರೂ ಸುದ್ದಿಗೋಷ್ಠಿ ನಡೆಸಿದರು. ಆಗ ತಾವು ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾಗಿಯೂ, ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ ಎಂಬುದನ್ನು ಹೇಳಿದರು. ಇದರಿಂದ ಲವ್ ಜಿಹಾದ್ ಎಂದವರಿಗೆ ಉತ್ತರ ಸಿಕ್ಕಂತೆ ಆಗಿದೆ ಎನ್ನಬಹುದು.

ಮತ್ತೊಂದೆಡೆ, ಮೋನಾಲಿಸಾ ಅಪ್ರಾಪ್ತರೋ ಅಥವಾ ಮೇಜರ್ ಆಗಿದ್ದಾರೋ ಎಂಬ ಬಗ್ಗೆ ಸಾಕಷ್ಟು ಗೊಂದಲವಿತ್ತು. ಇದನ್ನು ಸ್ಪಷ್ಟಪಡಿಸಲು, ಪತ್ರಿಕಾಗೋಷ್ಠಿಯಲ್ಲಿ ಸಾಕ್ಷಿಯಾಗಿ ತಮ್ಮ ಜನನ ಪ್ರಮಾಣಪತ್ರವನ್ನು ಮೊನಾಲಿಸಾ ಎಲ್ಲರಿಗೂ ತೋರಿಸಿದರು. ಮತ್ತು ಎಲ್ಲರ ಬಾಯಿ ಮುಚ್ಚಿಸಿದರು. ಅವರಿಗೆ 18 ವರ್ಷ ತುಂಬಿರೋದು ಈಗ ಸ್ಪಷ್ಟವಾದಂತೆ ಆಗಿದೆ. ಪೊಲೀಸ್ ಅಧಿಕಾರಿಗಳೂ ಇದನ್ನು ಪರಿಶೀಲಿಸಿದರು ಎಂದು ಹೇಳಲಾಗಿದೆ.

ಫರ್ಮಾನ್ ಅವರು ಮೊದಲು ಈ ಮದುವೆಗೆ ಮೊದಲು ಒಪ್ಪಿರಲಿಲ್ಲ ಎಂದು ಹೇಳಲಾಗಿದೆ. ಆ ಬಳಿಕ ಮೊನಾಲಿಸಾ ಮನವೊಲಿಸಿ ಮದುವೆಯಾದರು. ಮದುವೆ ಸಂದರ್ಭದಲ್ಲಿ ಫರ್ಮಾನ್ ಹಣೆಯ ಮೇಲೆ ಸಿಂಧೂರ ಧರಿಸಿದ್ದರು. ಇದರಿಂದ ಅವರಿಗೆ ಎಲ್ಲಾ ಧರ್ಮದ ಬಗ್ಗೆಯೂ ಗೌರವ ಇದೆ ಎಂಬುದು ಸ್ಪಷ್ಟವಾಗಿದೆ.  ಎಲ್ಲಾ ಧರ್ಮಗಳನ್ನು ಅವರು ಬೆಂಬಲಿಸೋದಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ಚಿತ್ರೀಕರಣಕ್ಕಾಗಿ ಕೇರಳದಲ್ಲಿದ್ದಾಗ ರಕ್ಷಣೆ ಕೋರಿ ಮೊನಾಲಿಸಾ ತಿರುವನಂತಪುರಂ ಪೊಲೀಸರನ್ನು ಸಂಪರ್ಕಿಸಿದರು. ತನ್ನ ತಂದೆ ತನ್ನನ್ನು ಬಲವಂತವಾಗಿ ತನ್ನ ಊರಿಗೆ ಕರೆದೊಯ್ದು ಸಂಬಂಧಿಕರೊಬ್ಬರೊಂದಿಗೆ ಮದುವೆ ಮಾಡಲು ಪ್ರಯತ್ನಿಸಿದ ಆರೋಪವನ್ನು ಅವರು ಮಾಡಿದರು. ಸೋದರ ಸೋದರಸಂಬಂಧಿಯನ್ನು ಮದುವೆ ಮಾಡಲು ಪ್ಲ್ಯಾನ್ ನಡೆದಿತ್ತಂತೆ.  ಕೊನೆಗೆ ಪ್ರೀತಿಸಿದ ವ್ಯಕ್ತಿಯನ್ನು ಅವರು ವಿವಾಹ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:03 am, Fri, 13 March 26

Follow Us
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!