13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿ; 50 ದೇಶದ 200ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ

Bengaluru International Film Festival | ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲಿ ಮಾರ್ಚ್​ ಅಂತ್ಯಕ್ಕೆ ಚಲನಚಿತ್ರೋತ್ಸವ ನಡೆಸುವ ನಿರ್ಧಾರಕ್ಕೆ ಬರಲಾಗಿದೆ.

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಾಂಕ ನಿಗದಿ; 50 ದೇಶದ 200ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋ ಉದ್ಘಾಟಿಸಿದ ಸಿಎಂ
Follow us
| Updated By: Digi Tech Desk

Updated on:Feb 20, 2021 | 3:34 PM

ಬೆಂಗಳೂರು: ಕೊರೊನಾ ಸೋಂಕು ಕಡಿಮೆ ಆಗುತ್ತಿದ್ದಂತೆ ದೇಶದಾದ್ಯಂತ ಎಲ್ಲಾ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಚಿತ್ರಮಂದಿರಗಳು ಕೂಡ ಮತ್ತೆ ಓಪನ್​ ಆಗಿದ್ದು, ಹೊಸ ಸಿನಿಮಾಗಳು ಕೂಡ ರಿಲೀಸ್​ ಆಗುತ್ತಿವೆ. ಈ ಮಧ್ಯೆ ಸಿನಿಮೋತ್ಸವವನ್ನು ಸಂಘಟಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಜಂಟಿಯಾಗಿ ನಡೆಸಲಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್​​ 24ರಿಂದ 31ರವರೆಗೆ ಬೆಂಗಳೂರಲ್ಲಿ ನಡೆಯಲಿದೆ.

ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲಿ ಮಾರ್ಚ್​ ಅಂತ್ಯಕ್ಕೆ ಚಲನಚಿತ್ರೋತ್ಸವ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಕೊರೊನಾ ವೈರಸ್​ ನಿಧಾನವಾಗಿ ಕಡಿಮೆ ಆಗುತ್ತಿದೆ. ಆದರೆ ಸೋಂಕು ಸಂಪೂರ್ಣವಾಗಿ ವಾಸಿಯಾಗಿಲ್ಲ. ಹೀಗಾಗಿ, ಚಲನಚಿತ್ರೋತ್ಸವ ನಡೆಸುವಾಗ ಕೊವಿಡ್​-19ರ ನಿಯಮ ಪಾಲಿಸಲೇಬೇಕು. ಅಂದರೆ, ಮಾಸ್ಕ್​ ಹಾಕುವುದು, ದೇಹದ ಉಷ್ಣತೆ ಪರಿಶೀಲಿಸುವುದು, ಸ್ಯಾನಿಟೈಸ್​ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದರಿದಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಇಲ್ಲಿರುವ ಒಟ್ಟು 11 ಪರದೆಗಳಲ್ಲಿ, 50 ದೇಶದ 200ಕ್ಕೂ ಹೆಚ್ಚು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. (13th Bengaluru International Film Festival)

ಸಿನಿಮಾ ಪ್ರದರ್ಶನದ ಜತೆಗ ಜ್ಞಾನಾಭಿವೃದ್ಧಿ ಮಾಡಿಕೊಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಅಂದರೆ, ಸಿನಿಮೋತ್ಸವದಲ್ಲಿ ಸಂವಾದ-ಚರ್ಚೆಗಳನ್ನು ಏರ್ಪಡಿಸಲಾಗುತ್ತಿದೆ. ಈ ವೇಳೆ ದೇಶ-ವಿದೇಶದ ನಿರ್ದೇಶಕರು ಹಾಗೂ ನಿರ್ಮಾಪಕರು ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದು, ಆಸಕ್ತರು ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು.

ಸಭೆಯಲ್ಲಿ ಯಡಿಯೂರಪ್ಪ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನ ಬಿಡುಗಡೆ ಮಾಡಿದರು. ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್, ಹಿರಿಯ ಕಲಾವಿದರಾದ ಶ್ರುತಿ, ತಾರಾ ಅನುರಾಧ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್, ಆಯುಕ್ತ ಪಿ.ಎಸ್. ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಓಟದಿಂದ ಹೊರಗೆ ಬಿದ್ದ ಮಲಯಾಳಂ ‘ಜಲ್ಲಿಕಟ್ಟು’ ಸಿನಿಮಾ

Published On - 3:18 pm, Sat, 20 February 21