AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ರಶ್ಮಿಕಾ ಮಂದಣ್ಣಗೆ ‘ಪೊಗರು’, ಅವರು ಮಾಡಿದ ತಪ್ಪನ್ನು ಕನ್ನಡಿಗರು ಕ್ಷಮಿಸ್ತಾರಾ?

ರಶ್ಮಿಕಾ ಮಂದಣ್ಣ ಈಗ ಕನ್ನಡದ ನಟಿಯಾಗಿ ಮಾತ್ರ ಉಳಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು, ಹೈದರಾಬಾದ್​ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ.

Rashmika Mandanna: ರಶ್ಮಿಕಾ ಮಂದಣ್ಣಗೆ ‘ಪೊಗರು’, ಅವರು ಮಾಡಿದ ತಪ್ಪನ್ನು ಕನ್ನಡಿಗರು ಕ್ಷಮಿಸ್ತಾರಾ?
ರಶ್ಮಿಕಾ ಮಂದಣ್ಣ
ರಾಜೇಶ್ ದುಗ್ಗುಮನೆ
| Edited By: |

Updated on: Feb 19, 2021 | 7:54 PM

Share

ತಾವು ನಟಿಸಿರುವ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ ನಟ-ನಟಿಯರು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜತೆಯೇ ಫಸ್ಟ್​ ಡೇ ಫಸ್ಟ್​ ಡೇ ಶೋ ನೋಡೊದು ಸಂಪ್ರದಾಯ. ಸ್ಯಾಂಡಲ್​ವುಡ್​ನಲ್ಲಂತೂ ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಗಾಂಧಿ ನಗರವನ್ನು ದೇವಾಲಯದಂತೆ ಕಾಣುವ ಕಲಾವಿದರು, ಮೊದಲ ಶೋಗೆ ಹಾಜರಿ ಹಾಕುತ್ತಾರೆ. ಇಂದು ತೆರೆಕಂಡ ಪೊಗರು ಸಿನಿಮಾದಲ್ಲೂ ಅಷ್ಟೇ. ನಟ ಧ್ರುವ ಸರ್ಜಾ ಗಾಂಧಿ ನಗರದಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜತೆ ಸಿನಿಮಾ ನೋಡಿದ್ದಾರೆ. ಆದರೆ, ಅಲ್ಲೆಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡೇ ಇಲ್ಲ!

ರಶ್ಮಿಕಾ ಮಂದಣ್ಣ ಈಗ ಕನ್ನಡದ ನಟಿಯಾಗಿ ಮಾತ್ರ ಉಳಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು, ಹೈದರಾಬಾದ್​ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇದರ ಜತೆಗೆ ಬಾಲಿವುಡ್​ ಸಿನಿಮಾದಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ರಶ್ಮಿಕಾಗೆ ಕೈತುಂಬ ಸಿನಿಮಾಗಳು ಇವೆ. ಬೇರೆ ಬೇರೆ ಚಿತ್ರದ ಶೂಟಿಂಗ್​ನಲ್ಲಿ ಅವರು ಬ್ಯುಸಿ ಇರುತ್ತಾರೆ. ಹೀಗಾಗಿ, ಅವರು ಫಸ್ಟ್​ ಡೇ ಫಸ್ಟ್​ ಡೇ ಶೋಗೆ ಬರಲು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ.

ಆದರೆ.. ರಶ್ಮಿಕಾ ಕಡೆಯಿಂದ ಟ್ವಿಟ್ಟರ್​ನಲ್ಲಿ ಪೊಗರು ಸಿನಿಮಾ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಪೋಸ್ಟ್​​ ಬಿದ್ದಿಲ್ಲ. ಇನ್​ಸ್ಟಾಗ್ರಾಂನಲ್ಲಿ ಒಂದೇ ಒಂದು ಸ್ಟೇಟಸ್​ ಕೂಡ ಹಾಕಿಕೊಂಡಿಲ್ಲ. ಕೊನೆಯ ಪಕ್ಷ, ಇಂದು ಸಿನಿಮಾ ರಿಲೀಸ್​ ಆಗುತ್ತಿದೆ. ಅಭಿಮಾನಿಗಳು ಸಿನಿಮಾ ನೋಡಿ ಎಂದು ಇನ್​ಸ್ಟಾಗ್ರಾಂನಲ್ಲಿ ಒಂದು ಸ್ಟೇಟಸ್​ ಆದರೂ ಹಾಕಬಹುದಿತ್ತಲ್ಲ ಎನ್ನುವುದು ಕೆಲವರ ಅಭಿಪ್ರಾಯ.

ಇತ್ತೀಚೆಗೆ ರಶ್ಮಿಕಾ ನಟನೆಯ ಟಾಪ್​ ಟಕ್ಕರ್​ ವಿಡಿಯೋ ಸಾಂಗ್​ ರಿಲೀಸ್​ ಆಗಿತ್ತು. ಈ ವಿಡಿಯೋ ನೋಡಿ ಎಂದು ರಶ್ಮಿಕಾ ಮಂದಣ್ಣ ತುಂಬಾನೇ ವಿನಮ್ರವಾಗಿ ಅಭಿಮಾನಿಗಳ ಬಳಿ ಕೋರಿಕೊಂಡಿದ್ದರು. ಹೀಗಿರುವಾಗ, ಕನ್ನಡದ ಸಿನಿಮಾ ರಿಲೀಸ್​ ಆಗುತ್ತಿದ್ದರೂ ಅವರು ಒಂದೇ ಒಂದು ಪೋಸ್ಟ್​ ಹಾಕದೇ ಇರುವುದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.

ಇದನ್ನೂ ಓದಿ: Pogaru Movie Review: ಪೊಗರು ವಿಮರ್ಶೆ: ಫ್ಯಾನ್ಸ್​ ಖುಷಿಪಡಿಸಲು ಮತ್ತೆ ಮಾಸ್​ ಅವತಾರ ಎತ್ತಿದ ಧ್ರುವ ಸರ್ಜಾ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More