AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜಕ್ಕೂ ‘ನಟಿ’ ರಾಧಿಕಾ ಕುಮಾರಸ್ವಾಮಿ ಸಂಭಾವನೆ ಇಷ್ಟಿದೆಯಾ.. ರಮ್ಯಾ, ರಶ್ಮಿಕಾಗಿಂತಲೂ ಹೆಚ್ಚಾಯ್ತಾ!?

ನಟಿ ರಾಧಿಕಾ ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಂಬರ್ 1 ಹಿರೋಯಿನ್ ಆಗಿದ್ದರು. ಈಗಲೂ ಸಹ ತಕ್ಕ ಮಟ್ಟಿಗೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದ್ರೆ ನಮ್ಮನ್ನು ಕಾಡುವಂತ ಪ್ರಶ್ನೆ ನಿಜಕ್ಕೂ ರಾಧಿಕಾ ಸಿನಿಮಾಗೆ 75 ಲಕ್ಷದಷ್ಟು ಸಂಭಾವನೆ ಪಡಿತಾರ ಅನ್ನೋದು.

ನಿಜಕ್ಕೂ ‘ನಟಿ’ ರಾಧಿಕಾ ಕುಮಾರಸ್ವಾಮಿ ಸಂಭಾವನೆ ಇಷ್ಟಿದೆಯಾ.. ರಮ್ಯಾ, ರಶ್ಮಿಕಾಗಿಂತಲೂ ಹೆಚ್ಚಾಯ್ತಾ!?
ನಟಿ ರಾಧಿಕಾ ಕುಮಾರಸ್ವಾಮಿ
ಆಯೇಷಾ ಬಾನು
|

Updated on: Jan 07, 2021 | 12:13 PM

Share

ಬೆಂಗಳೂರು: ಯುವರಾಜ್​ರಿಂದ ನಡೆದಿದೆಯೆನ್ನಲಾದ ವಂಚನೆ ಕೇಸ್​ನಲ್ಲಿ ಸ್ಯಾಂಡಲ್ ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ತನ್ನ ಅಕೌಂಟ್​ಗೆ ಬಂದಿರೋ ಒಂದು ಕೋಟಿ 25 ಲಕ್ಷ ರೂಪಾಯಿಯೇ ಈಗ ರಾಧಿಕಾಗೆ ಮುಳುವಾಗಿದೆ.

ಅಣ್ಣತಂಗಿ, ತವರಿಗೆ ಬಾ ತಂಗಿ ಅನ್ನೋ ಸಿನಿಮಾದ ಮೂಲಕ ಜನರ ಮನಗೆದ್ದ ಹಾಗೂ ಮಸಾಲಾ, ಸ್ವೀಟಿ ಅಂತಹ ಚಿತ್ರಗಳ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದ ನಟಿ ರಾಧಿಕಾ ಕುಮಾರಸ್ವಾಮಿಗೆ ಈಗ ಕಂಟಕ ಎದುರಾಗಿದೆ. ನಟಿ ರಾಧಿಕಾ ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಂಬರ್ 1 ಹಿರೋಯಿನ್ ಆಗಿದ್ದರು. ಈಗಲೂ ಸಹ ತಕ್ಕ ಮಟ್ಟಿಗೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದ್ರೆ ನಮ್ಮನ್ನು ಕಾಡುವಂತ ಪ್ರಶ್ನೆ ನಿಜಕ್ಕೂ ರಾಧಿಕಾ ಸಿನಿಮಾಗೆ 75 ಲಕ್ಷದಷ್ಟು ಸಂಭಾವನೆ ಪಡಿತಾರ ಅನ್ನೋದು.

ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕಾಗಿ ಯುವರಾಜ್‌ ಸ್ವಾಮಿ, ನಟಿ ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ 15 ಲಕ್ಷ ವರ್ಗಾವಣೆ ಮಾಡಿದ್ದಾರೆ. ಹಾಗೂ ನಿರ್ಮಾಪಕರೊಬ್ಬರಿಂದ 60 ಲಕ್ಷ ರೂಪಾಯಿ ಬಂದಿದೆ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ಸ್ಯಾಂಡಲ್ ವುಡ್‌ನಲ್ಲಿ ನಿರ್ಮಾಣ ಆಗೋ ಸಿನಿಮಾಗಳಲ್ಲಿ ಇಷ್ಟು ಸಂಭಾವನೆ ನೀಡುವ ಸಾಧ್ಯತೆ ತೀರಾ ಕಡಿಮೆ.

ನಟಿ ರಾಧಿಕಾ ಕುಮಾರಸ್ವಾಮಿಗೆ ಇಷ್ಟಿದೆಯ ಬೇಡಿಕೆ? ಈ ಹಿಂದೆ ಆಗಿರೋ ಬೆಳವಣಿಗೆಗಳೆಲ್ಲವನ್ನೂ ಗಮನಿಸಿದ್ರೆ ನಟಿಮಣಿಯರ ಸಂಭಾವನೆ ಬೇಡಿಕೆಯಲ್ಲಿದ್ರೆ 20 ರಿಂದ 25 ಲಕ್ಷ ಕೊಡ್ತಾರೆ. ಅತೀ ಬೇಡಿಕೆ ಇದ್ರೂ 50 ಲಕ್ಷ ಮೀರಲ್ಲ. ಹೀಗಿದ್ದ ಮೇಲೆ ರಾಧಿಕಾ ಕುಮಾರಸ್ವಾಮಿ ಸಂಭಾವನೆ 75 ಲಕ್ಷ ಹೇಗೆ ಅನ್ನೋ ಕುತೂಹಲ ಕಾಡ್ತಿದೆ.

ಹಲವು ಸ್ಟಾರ್ ನಟಿಯರ ಸಂಭಾವನೆಗೆ ಹೋಲಿಸಿದ್ರೆ ನಟಿ ರಾಧಿಕಾ ಸಂಭವನೆ ಕಡಿಮೆ ಇದೆ. ಅಷ್ಟು ಹಣ ಕೊಡೋಕೆ ಸಾಧ್ಯತೆ ಕಡಿಮೆ ಅನ್ನೋ ಮಾಹಿತಿ ಇದೆ. ಈ ಹಿಂದೆ ರಮ್ಯಾ ಹೆಚ್ಚು ಸಂಭಾವನೆ ಪಡೆದ ನಟಿ ಅನ್ನೋದನ್ನ ಬಿಟ್ರೆ ಇತ್ತೀಚೆಗೆ ರಶ್ಮಿಕಾ ಮಂಡಣ್ಣ ಹೆಚ್ಚು ಸಂಭಾವನೆ ಪಡೆದಿದ್ದಾರೆ.

ರಮ್ಯಾಗೆ ಹೈಯಸ್ಟ್ ಅಂದ್ರೆ ಒಂದು ಸಿನಿಮಾಗೆ 40 ರಿಂದ 50 ಲಕ್ಷ ಮಾತುಕತೆ ಆಗಿತ್ತು. ಹಾಗೂ ರಶ್ಮಿಕಾಗೆ ಪೊಗರು ಸಿನಿಮಾಗೆ ಮಾತ್ರ 50 ಲಕ್ಷ ನೀಡಲಾಗಿದೆ ಅನ್ನೋ ಮಾಹಿತಿ ಇದೆ. ಇದು ಬಿಟ್ಟರೆ ಸ್ಯಾಂಡಲ್​ವುಡ್​ನಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಸಂಭಾವನೆ ನೀಡೇ ಇಲ್ಲ. ಆದ್ರೆ ನಟಿ ರಾಧಿಕಾ ಕುಮಾರಸ್ವಾಮಿ ಅಕೌಂಟ್​ಗೆ 75 ಲಕ್ಷ ಹಣ ವರ್ಗಾವಣೆಯಾಗಿದೆ. ಹೀಗಾಗಿ ಈ ಕೇಸ್ ಹಲವು ಅನುಮಾನಗಳಿಗೆ ದಾರಿ ಮಾಡಿದೆ.

ಯುವರಾಜ್​ರಿಂದ 15 ಲಕ್ಷ, ಬೇರೆ ನಿರ್ಮಾಪಕರಿಂದ 65 ಲಕ್ಷ ನನ್ನ ಖಾತೆಗೆ ಬಂದಿದೆ.. ಅನ್ಯ ವ್ಯವಹಾರ ಇಲ್ಲ: ರಾಧಿಕಾ

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ