Jaggesh – Darshan: ಜಗ್ಗೇಶ್ ಚಿತ್ರೀಕರಣದ ಸ್ಥಳಕ್ಕೆ ತೆರಳಿ ದರ್ಶನ್ ಫ್ಯಾನ್ಸ್ ಮುತ್ತಿಗೆ; ಸ್ಯಾಂಡಲ್​ವುಡ್​ನಲ್ಲಿ ಶುರುವಾಯಿತು ಫ್ಯಾನ್ಸ್ ವಾರ್?

Darshan Fans | ನವರಸ ನಾಯಕ ಜಗ್ಗೇಶ್ ತೋತಾಪುರಿ ಶೂಟಿಂಗ್​ಗಾಗಿ ಮೈಸೂರಿಗೆ ತೆರಳಿದ್ದು, ಈ ವಿಚಾರ ತಿಳಿದ ದರ್ಶನ್ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕ್ಷಮೆ ಕೇಳಬೇಕೆಂದು  ಅಗ್ರಹಿಸಿದ್ದಾರೆ. ನೂರಾರು ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ ಜಗ್ಗೇಶ್ ಕ್ಷಮೆ ಕೇಳಿದ್ದಾರೆ.

Jaggesh - Darshan: ಜಗ್ಗೇಶ್ ಚಿತ್ರೀಕರಣದ ಸ್ಥಳಕ್ಕೆ ತೆರಳಿ ದರ್ಶನ್ ಫ್ಯಾನ್ಸ್ ಮುತ್ತಿಗೆ; ಸ್ಯಾಂಡಲ್​ವುಡ್​ನಲ್ಲಿ ಶುರುವಾಯಿತು ಫ್ಯಾನ್ಸ್ ವಾರ್?
ದರ್ಶನ್ ಅಭಿಮಾನಿಗಳೊಂದಿಗೆ ಮಾತನಾಡುತ್ತಿರುವ ಜಗ್ಗೇಶ್, ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ ಅಭಿಮಾನಿಗಳು
Follow us
sandhya thejappa
|

Updated on:Feb 22, 2021 | 5:14 PM

ಮೈಸೂರು: ಇನ್​ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್​ರವರೊಂದಿಗೆ ನಟ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಭಿಮಾನಿಗಳ ಬಗ್ಗೆ ಮಾತನಾಡುವ ವೇಳೆ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು.

ನವರಸ ನಾಯಕ ಜಗ್ಗೇಶ್ ತೋತಾಪುರಿ ಶೂಟಿಂಗ್​ಗಾಗಿ ಮೈಸೂರಿಗೆ ತೆರಳಿದ್ದು, ಈ ವಿಚಾರ ತಿಳಿದ ದರ್ಶನ್ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕ್ಷಮೆ ಕೇಳಬೇಕೆಂದು  ಅಗ್ರಹಿಸಿದ್ದಾರೆ. ನೂರಾರು ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ ಜಗ್ಗೇಶ್ ಕ್ಷಮೆ ಕೇಳಿದ್ದಾರೆ.

ನಿರ್ಮಾಪಕ ವಿಖ್ಯಾತ್ ಬಳಿ ಜಗ್ಗೇಶ್ ಫೋನಿನಲ್ಲಿ ಮಾತನಾಡಿರುವ ಸಂಭಾಷಣೆ ರಾದ್ಧಾಂತ ಸೃಷ್ಟಿಸಿತ್ತು. ಆಡಿಯೋದಲ್ಲಿ ತಮ್ಮ ಹುಡುಗನಿಗೆ ಏನಾದರೂ ಕೊಡು ಅಂತ ಹೇಳಿದ ನವರಸನಾಯಕ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ. ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎನ್ನುವ ಆಡಿಯೋ ಎಲ್ಲೆಡೆ ಹರಿದಾಡಿತ್ತು.

ಈ ಬಗ್ಗೆ ಜಗ್ಗೇಶ್ ಕೂಡ ಟ್ವಿಟ್ ಮಾಡಿ ಚಿತ್ರದ ಪ್ರಚಾರಕ್ಕಾಗಿ ಸುಳ್ಳು ಸುದ್ದಿ ಹರಿದಾಡಲು ಮಾಡುವ ಹುನ್ನಾರ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ನರಸೀಪುರ ತಾಲೂಕಿನ ಬನ್ನೂರಿನ ಅತ್ತಳ್ಳಿ ಗ್ರಾಮದ ಬಳಿ ಇಂದು ನಡೆಯುತ್ತಿದ್ದ ಶೂಟಿಂಗ್ ವೇಳೆ ಬಂದಿದ್ದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳಬೇಕು ಅಂತ ಅಗ್ರಹಿಸಿ ನವರಸನಾಯಕನಿಗೆ ಧಿಕ್ಕಾರ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಆ ಧ್ವನಿ ನಂದಲ್ಲ. ನಾನು ಹೇಳಿರುವುದು ವೆಬ್ ಪ್ರತಿನಿಧಿ ದರ್ಶನ್ ಬಗ್ಗೆ ಎಂದು ಸಮಜಾಯಿಸಿ ನೀಡಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ದರ್ಶನ್​ಗೆ ಮೊದಲಿನಿಂದಲೂ ನಾನು ಸಪೋರ್ಟ್ ಮಾಡುತ್ತಿದ್ದೇನೆ.  ಇಂಡಸ್ಟ್ರಿಯಲ್ಲಿ ಇದೀಗ ಬಹಳ ದೊಡ್ಡ ರಾಜಕೀಯ ಅಂಟಿಕೊಂಡಿದೆ ಎಂದಿದ್ದಾರೆ.

ಜಗ್ಗೇಶ್ ದರ್ಶನ್ ಬಗ್ಗೆ ಮಾತನಾಡಿದ್ದಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟತೆ ಸಿಗದಿದ್ದರೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸದ್ಯ ಯಾರ ಮಾತು ಕೇಳುವ ಹಾಗೇ ಕಾಣುತ್ತಿಲ್ಲ.

ಇದನ್ನೂ ಓದಿ

ದರ್ಶನ್​ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್

D Boss Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಈ ಗುಣಗಳ ಬಗ್ಗೆ ನಿಮಗೆ ಗೊತ್ತಾ?

Published On - 4:16 pm, Mon, 22 February 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು