AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

D Boss Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಈ ಗುಣಗಳ ಬಗ್ಗೆ ನಿಮಗೆ ಗೊತ್ತಾ?

D Boss Darshan: ದಚ್ಚು ಹುಟ್ಟುಹಬ್ಬ ವಿಶೇಷ ದಿನವಾದ ಇಂದು, ನವಗ್ರಹ ನಾಯಕ ದರ್ಶನ್ ಅವರ ಒಂಭತ್ತು ವಿಶೇಷ ಗುಣಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದೇವೆ.

D Boss Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಈ ಗುಣಗಳ ಬಗ್ಗೆ ನಿಮಗೆ ಗೊತ್ತಾ?
ದರ್ಶನ್​ ತೂಗುದೀಪ
TV9 Web
| Edited By: |

Updated on:Apr 06, 2022 | 7:57 PM

Share

ಬೆಂಗಳೂರು: ಯಾರೇ ಬರಲಿ ಎಲ್ಲರಿಗೂ ಪ್ರೀತಿ ಹಂಚುವ ಯಜಮಾನ, ದಾಸ ದರ್ಶನ್. ಅಭಿಮಾನಿಗಳ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ 44ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ. ದಚ್ಚು ಹುಟ್ಟುಹಬ್ಬ ವಿಶೇಷ ದಿನವಾದ ಇಂದು, ನವಗ್ರಹ ನಾಯಕ ದರ್ಶನ್ ಅವರ ಒಂಭತ್ತು ವಿಶೇಷ ಗುಣಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದೇವೆ.

1. ದರ್ಶನ್ ಪ್ರಾಣಿ ಪ್ರೀತಿ ನಟ ದರ್ಶನ್ ಪ್ರಾಣಿ ಪ್ರೀತಿ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಸಂಕ್ರಾಂತಿ ಸಂದರ್ಭದಲ್ಲಿ ಫಾರ್ಮ್ ಹೌಸ್​ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದ ರೀತಿಯೇ ಅದಕ್ಕೆ ಸಾಕ್ಷಿ. ಕುದುರೆ, ಹಸುಗಳೊಂದಿಗೆ ದಚ್ಚು ಸಂಕ್ರಾಂತಿ ಸಂಭ್ರಮದಲ್ಲಿ ಕಂಡುಬಂದಿದ್ದರು. ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ತಮ್ಮ ಫಾರ್ಮ್ ಹೌಸ್​ನಲ್ಲಿ ಆಸರೆ ನೀಡಿರೋ ದಾಸ, ಅವುಗಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ. ಕುದುರೆ, ಹಸು ಮಾತ್ರವಲ್ಲದೆ ನಾಯಿ, ಕುರಿ, ಪಕ್ಷಿಗಳು ಕೂಡ ಯಜಮಾನನ ಫಾರ್ಮ್ ಹೌಸ್​ನಲ್ಲಿದೆ.

2. ಸ್ನೇಹಜೀವಿ ನಮ್ಮ ಯಜಮಾನ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಅಷ್ಟೇ ಅಲ್ಲ. ಜತೆಗೆ ಸ್ನೇಹಜೀವಿ ಕೂಡ. ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ ಚಾಲೆಂಜಿಂಗ್ ಸ್ಟಾರ್ ಹುಟ್ಟುಗುಣ. ಅವಕಾಶಗಳಿಲ್ಲದೆ ಕುಗ್ಗಿ ಹೋಗಿದ್ದ ತಮ್ಮ ತಂದೆಯ ಕಾಲದ ಖಳನಟರ ಮಕ್ಕಳಿಗೆ ನವಗ್ರಹ ಸಿನಿಮಾ ಮೂಲಕ ಮತ್ತೆ ಅವಕಾಶ ಕೊಟ್ಟ ನಟ ದಚ್ಚು. ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ತರುಣ್ ಸುಧೀರ್.. ಹೀಗೆ ಅನೇಕರು ದಾಸನ ಪ್ರಾಣ ಸ್ನೇಹಿತರು. ಅವರೆಲ್ಲರಿಗೂ ಸಾರಥಿ ಅಂದ್ರೆ ಸಂಭ್ರಮ.

3. ಸ್ವಾಭಿಮಾನದ ಮುಂಗೋಪಿ! ಮನುಷ್ಯ ಅಂದಮೇಲೆ ಉತ್ತಮ ಗುಣಗಳ ಜತೆಗೆ ಒಂದೆರಡು ಋಣಾತ್ಮಕ ಗುಣಗಳೂ ಇದ್ದೇ ಇರುತ್ತದೆ. ಅಂಥಾ ಗುಣ ದರ್ಶನ್ ಅವರಲ್ಲೂ ಇದೆ. ಡಿಬಾಸ್ ಸಿಕ್ಕಾಪಟ್ಟೆ ಮುಂಗೋಪಿ. ಆದ್ರೆ ಅಷ್ಟೇ ಸ್ವಾಭಿಮಾನಿಯೂ ಹೌದು.

ಇದನ್ನೂ ಓದಿ: D Boss Darshan: ದರ್ಶನ್​ ಹುಟ್ಟುಹಬ್ಬಕ್ಕೆ ಜಗ್ಗೇಶ್​, ರಿಷಬ್​ ಶೆಟ್ಟಿ, ಪವನ್​ ಒಡೆಯರ್​ ಶುಭಾಶಯ

4. ಕರುಣಾಮಯಿ ಈ ಕರಿಯ ‘ಶಾಸ್ತ್ರಿ’ ಬರೀ ನಟನೆ ಮಾಡಿ ಅಭಿಮಾನಿಗಳ ಆರಾಧ್ಯದೈವ ಆದವರಲ್ಲ. ಅಗತ್ಯ ಉಂಟಾದಾಗ ಪರೋಪಕಾರ ಮಾಡುವುದರಲ್ಲೂ ಯಜಮಾನ ಸದಾ ಮುಂದೆ. ಹೌದು, ತನ್ನನ್ನು ಅರಸಿ ಬಂದ ಅಭಿಮಾನಿಗಳ ಕೈ ಬಿಡುವುದಿಲ್ಲ ಚಾಲೆಂಜಿಂಗ್ ಸ್ಟಾರ್. ದರ್ಶನ್, ಅನೇಕರಿಗೆ ಆಸ್ಪತ್ರೆ ಚಿಕಿತ್ಸೆ ವೆಚ್ಚ ಭರಿಸಿದ್ದಾರೆ. ಅದರಲ್ಲೂ ಹಾಸ್ಯ ನಟ ಬುಲೆಟ್ ಪ್ರಕಾಶ್ ಕೊನೆದಿನಗಳಲ್ಲಿ ಅವರ ಆಸ್ಪತ್ರೆ ವೆಚ್ಚ, ಮಗಳ ಮದುವೆ ಖರ್ಚು ನೋಡಿಕೊಂಡಿದ್ದಾರೆ.

5. ಪೋಟೋಗ್ರಫಿ ಅಚ್ಚುಮೆಚ್ಚಿನ ಹವ್ಯಾಸ ಎಲ್ಲರಿಗೂ ಅವರದೇ ಆದ ಮೆಚ್ಚಿನ ಹವ್ಯಾಸಗಳಿರುತ್ತವೆ. ಹಾಗೇ ಡಿ ಬಾಸ್​ಗೆ ಪೋಟೋಗ್ರಫಿ ಅಂದ್ರೆ ಅಚ್ಚುಮೆಚ್ಚು. ಸಿನಿಮಾ ಶೂಟಿಂಗ್​ನಿಂದ ವಿರಾಮ ಸಿಕ್ಕರೆ ಸಾಕು, ಸಾರಥಿ ಕಾಡಿನತ್ತ ಸವಾರಿ ಹೊರಟು ಬಿಡುತ್ತಾರೆ. ಸ್ನೇಹಿತರ ಜತೆ ಮಸ್ತಿ ಮಾಡೋದರ ಜತೆಗೆ ಪ್ರಾಣಿ, ಪಕ್ಷಿ, ವನ್ಯ ಮೃಗಗಳ ಪೋಟೋಗಳನ್ನು ಸೆರೆ ಹಿಡಿಯುತ್ತಾರೆ. ಅವುಗಳ ಪ್ರದರ್ಶನ ಏರ್ಪಡಿಸಿ ಬಂದ ಹಣದಿಂದ ಅರಣ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಸಹಾಯ ಹಸ್ತವನ್ನೂ ನೀಡುತ್ತಾರೆ.

6. ಕಾರ್ ಬೈಕ್​ಗಳಂದ್ರೆ ದರ್ಶನ್​ಗೆ ಸಖತ್ ಕ್ರೇಜ್! ಕಾರ್ ಬೈಕ್​ಗಳ ವಿಷಯದಲ್ಲಿ ದರ್ಶನ್ ಸಖತ್ ಕ್ರೇಜಿ. ಶ್ರೀಮಂತ ಕಾರ್​ಗಳಿಂದ ಹಿಡಿದು ಮಾರುತಿ 800 ವರೆಗೂ ಸಾಕಷ್ಟು ಕಾರ್ ದರ್ಶನ್ ಬಳಿ ಇವೆ. ಇನ್ನು ಬೈಕ್​ಗಳಲ್ಲಿ 30 ಲಕ್ಷದ ಬೈಕ್​ನಿಂದ ಹಿಡಿದು ಅಪ್ಪನ ಹಳೇ ಕಾಲದ ಲೂನಾ ಕೂಡ ಜೋಪಾನ ಮಾಡಿ ಇಟ್ಟುಕೊಂಡಿದ್ದಾರೆ ದರ್ಶನ್.

ಇದನ್ನೂ ಓದಿ: ಲೈಟ್ ಬಾಯ್​ ಜೀವನದಿಂದ ರಾಬರ್ಟ್​ ಸಿನಿಮಾವರೆಗೆ ದರ್ಶನ್ ನಡೆದು ಬಂದ ದಾರಿ

7. ಮೇಕಪ್ ತೆಗೆದರೆ ಅಪ್ಪಟ ರೈತನಾಗ್ತಾರೆ ದಾಸ ವಾರಾಂತ್ಯ ಬಂತು ಅಂದರೆ ಮೈಸೂರಿನ ಫಾರ್ಮ್ ಹೌಸ್​ನತ್ತ ಮುಖ ಮಾಡುತ್ತಾರೆ ದರ್ಶನ್. ಬೆಳಗ್ಗೇನೆ ಸಾಮಾನ್ಯ ರೈತನಂತೆ ಫಾರ್ಮ್ ಹೌಸ್​ನಲ್ಲಿರುವ ಹಸುಗಳ ಹಾಲು ಕರೀತಾರೆ. ಹುಲ್ಲು ಕುಯ್ದು, ಜಾನುವಾರುಗಳಿಗೆ ಮೇವು ಹಾಕ್ತಾರೆ. ರೈತರಿಗೆ ಕಷ್ಟ ಬಂದಾಗ ಸ್ಪಂದಿಸುವ ಮೊದಲ ವ್ಯಕ್ತಿ ದರ್ಶನ್.

8. ಸಂಭಾವನೆ ವಿಷಯದಲ್ಲಿ ದಚ್ಚು ನಂಬರ್ ವನ್ ಸ್ಯಾಂಡಲ್​ವುಡ್​ನಲ್ಲಿ ಮಾಸ್ ಫ್ಯಾನ್ ಹಿಂಬಾಲಕರಿರುವ ಸ್ಟಾರ್ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕರ್ನಾಟಕದಲ್ಲಿ ಅತ್ಯಧಿಕ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟ ಅಂದ್ರೆ ಅದು ದರ್ಶನ್. ಹೀಗಾಗಿನೇ ಸ್ಯಾಂಡಲ್​ವುಡ್​ನಲ್ಲಿ ಅತ್ಯಧಿಕ ಸಂಭಾವನೆ ಪಡೆಯೋದ್ರಲ್ಲಿ ನಂಬರ್ ವನ್ ನಟ ಬಾಕ್ಸ್ ಆಫೀಸ್ ಸುಲ್ತಾನ್.

9. ಹಾರ್ಸ್ ರೈಡಿಂಗ್ ಪಂಚಪ್ರಾಣ ಸಾರಥಿಗೆ ಕುದುರೆ ಸವಾರಿ ಅಂದ್ರೆ ಪಂಚಪ್ರಾಣ. ಫಾರ್ಮ್ ಹೌಸ್​ನಲ್ಲಿದ್ರೆ ವರ್ಕ್ ಔಟ್ ಮಾಡುವ ಬದಲು ಕುದುರೆ ಸವಾರಿ ಹೋಗಿ ಬರುತ್ತಾರೆ. ಅದ್ರಲ್ಲೂ ಸಾರಥಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ತಮ್ಮ ನೆಚ್ಚಿನ ಕುದುರೆ ‘ಬಾದಲ್’ ಸಾವನ್ನಪ್ಪಿದಾಗ ದರ್ಶನ್ ಬಹಳ ಬೇಸರಪಟ್ಟುಕೊಂಡಿದ್ದರು. ಬಾದಲ್ ಕುದುರೆಯ ಹಚ್ಚೆಯನ್ನು ಕೂಡ ಕೈಗೆ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ: Dboss Darshan Birthday: ಇಂದು ಡಿ ಬಾಸ್​ ದರ್ಶನ್​ ಜನ್ಮದಿನ: ದಾಸನಿಗೆ ಸಿಕ್ಕ ಉಡುಗೊರೆಗಳೆಷ್ಟು ಗೊತ್ತಾ?

ಹೀಗೆ ಸ್ಯಾಂಡಲ್​ವುಡ್​ನ ಪ್ರೀತಿಯ ದಾಸನ ಹತ್ತಾರು ಗುಣಗಳನ್ನು ನಾವು ಪಟ್ಟಿ ಮಾಡಬಹುದು. ಕೇವಲ ನಟನೆ ಮಾತ್ರವಲ್ಲದೆ ಸ್ನೇಹ, ಪ್ರೀತಿ ಮೂಲಕ ಕನ್ನಡಚಿತ್ರರಂಗದ ಅಭಿಮಾನಿಗಳ ಹೃದಯದಲ್ಲಿ ಚಕ್ರವರ್ತಿಯಾಗಿ ನೆಲಸಿದ್ದಾರೆ ದರ್ಶನ್.

Published On - 9:19 pm, Tue, 16 February 21